Kimye ಜೊತೆ ಡಿವೋರ್ಸ್‌ ನಂತರ Kim Kardashian 4ನೇ ಮದುವೆ ಆಗ್ತಾರಾ?

First Published | Mar 3, 2022, 8:01 PM IST

ಕಿಮ್ ಕಾರ್ಡಶಿಯಾನ್ (Kim Kardashian) ಈಗ ಕಾನ್ಯೆ ವೆಸ್ಟ್‌ನಿಂದ ( Kanye West) ಕಾನೂನುಬದ್ಧವಾಗಿ ಬೇರೆಯಾಗಿ ತಾನು ಏಕಾಂಗಿ ಎಂದು ಘೋಷಿಸಿದ್ದಾರೆ. ಈಗ Kimye (ಕಿಮ್ ಮತ್ತು ಕಾನ್ಯೆ) ಮುಗಿದಿದೆ. ಕಿಮ್ ಪ್ರಸ್ತುತ ತನ್ನ ಗೆಳೆಯ ಪೀಟ್ ಡೇವಿಡ್ಸನ್ ( Pete Davidson) ಜೊತೆ ತನ್ನ ಜೀವನವನ್ನು ಆನಂದಿಸುತ್ತಿದ್ದಾರೆ.

ಮಾರ್ಚ್ 02 ರಂದು, ಲಾಸ್ ಏಂಜಲೀಸ್ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಸ್ಟೀವ್ ಕೊಕ್ರಾನ್ ಅವರು ರಾಪರ್ ಕಾನ್ಯೆ ವೆಸ್ಟ್ ಅವರೊಂದಿಗಿನ ವಿವಾಹವನ್ನು ಡಿವೋರ್ಸ್‌ ಪ್ರಕ್ರಿಯೆಯ ಮೂಲಕ ಕೊನೆಗೊಳಿಸಲು ಕಿಮ್ ಕಾರ್ಡಶಿಯಾನ್ ಅವರ ಮನವಿಯನ್ನು ಅನುಮೋದಿಸಿದರು. 

'ನ್ಯಾಯಾಲಯವು ವೈವಾಹಿಕ ಸ್ಥಿತಿಯನ್ನು ಮುಕ್ತಾಯಗೊಳಿಸುತ್ತದೆ' ಎಂದು ನ್ಯಾಯಾಧೀಶರು ಸಾರ್ವಜನಿಕ ವಿಚಾರಣೆಯ ನಂತರ ನೀಡಿದ ಲಿಖಿತ ಆದೇಶದಲ್ಲಿ ಹೇಳಿದರು. ಸುಮಾರು ಎಂಟು ವರ್ಷಗಳ ದಾಂಪತ್ಯದ ನಂತರ, ಕಾನ್ಯೆ ವೆಸ್ಟ್‌ನಿಂದ ಕಾನೂನುಬದ್ಧವಾಗಿ ಬೇರೆಯಾಗಿದ್ದಾರೆ ಎಂದು ಘೋಷಿಸಲು ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್ ಅವರ ಕೋರಿಕೆಯನ್ನು ನ್ಯಾಯಾಲಯವು (Court) ಪುರಸ್ಕರಿಸಿತು. 
 

Tap to resize

ಕಳೆದ ವರ್ಷ, ಕಿಮ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ಕಾನ್ಯೆ ವೆಸ್ಟ್ ಅವರ ಜೊತೆ ಹೊಂದಾಣಿಕೆ ಮಾಡಲಾಗದ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ, ಅವರು ಕಾನೂನುಬದ್ಧವಾಗಿ ಕಾನ್ಯೆ ವೆಸ್ಟ್ ಯಿಂದ ಬೇರೆಯಾಗಲು ಕೋರಿದ್ದರು.

ಕಿಮ್ ಮತ್ತು ಕಾನ್ಯೆ ಅವರಿಗೆ ನಾರ್ತ್‌, ಚಿಕಾಗೊ, ಸೇಂಟ್ ಮತ್ತು ಪ್ಸಾಲ್ಮ್ ವೆಸ್ಟ್ ಎಂಬ ಹೆಸರಿನ 2 ರಿಂದ 8 ವರ್ಷ ವಯಸ್ಸಿನ ನಾಲ್ವರು ಮಕ್ಕಳಿದ್ದಾರೆ. ಹಿಂದೆ, 44 ವರ್ಷ ವಯಸ್ಸಿನ ಯೆ (Ye), ವಿಚ್ಛೇದನವನ್ನು (Divorce) ವಿರೋಧಿಸಿದರು, 
 

ಕಿಮ್ ತಮ್ಮ ವೈವಾಹಿಕ ಜೀವನಕ್ಕೆ ಮರಳುವಂತೆ ಸಾರ್ವಜನಿಕವಾಗಿ ವಿನಂತಿಸಿದರು. ತನ್ನ ಸಾಮಾಜಿಕ ಮಾಧ್ಯಮ  (Social Media) ಪೋಸ್ಟ್‌ಗಳಲ್ಲಿ, ಕಾನ್ಯೆ ಕಿಮ್‌ನ ಪೆರೇಂಟಿಗ್‌ ವಿಧಾನ ಟೀಕಿಸಿದ್ದಾರೆ ಮತ್ತು ದೂರಿದ್ದಾರೆ ಅಷ್ಟೇ ಅಲ್ಲ, ಕಿಮ್ ಜೊತೆ ಡೇಟಿಂಗ್ ಮಾಡುತ್ತಿರುವ ಹಾಸ್ಯನಟ-ನಟ ಪೀಟ್ ಡೇವಿಡ್ಸನ್ ಅವರನ್ನು ಕೂಡ ಯೆ ಟೀಕಿಸಿದ್ದರು.
 

SKIMS ಸಂಸ್ಥಾಪಕಿ ಕಿಮ್ ಕಾರ್ಡಶಿಯಾನ್ ಕಾನ್ಯೆ ವೆಸ್ಟ್‌ನೊಂದಿನ ವಿಚ್ಛೇದನವನ್ನು ಮರೆತು, ಜೀವನದಲ್ಲಿ ಮುಂದುವರಿಸಲು ಬಯಸುತ್ತಾರೆ. ವರದಿಗಳ ಪ್ರಕಾರ, ಅವರು ಪ್ರಸ್ತುತ ಪೀಟ್ ಡೇವಿಡ್ಸನ್ ಅವರೊಂದಿಗೆ ಸಂತೋಷವಾಗಿದ್ದಾರೆ. ಅವರು ಪೀಟ್ ಜೊತೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ ಮತ್ತು ಅವರೊಂದಿಗೆ ಡೇಟಿಂಗ್ ಮಾಡಲು ಇಷ್ಟಪಡುತ್ತಾರೆ. ಕಿಮ್ ಪೀಟ್ ಅವರನ್ನು ಮದುವೆಯಾಗುತ್ತಾರಾ? ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗಿದೆ.
 

ET ಯ ವರದಿಯ ಪ್ರಕಾರ, 'ಕಳೆದ ಕೆಲವು ವಾರಗಳಲ್ಲಿ ಕಿಮ್ ಮತ್ತು ಪೀಟ್ ಇನ್ನೂ ಹತ್ತಿರವಾಗಿದ್ದಾರೆ. ಕಾರ್ಡಶಿಯಾನ್-ಜೆನ್ನರ್ ಕುಟುಂಬದೊಂದಿಗೆ ಹೆಚ್ಚು ಸಂಪರ್ಕ ಸಾಧಿಸಲು ಪೀಟ್ ಬಹಳ ಪ್ರಯತ್ನ ಪಡುತ್ತಿದ್ದಾರೆ. ಅವರ ಮತ್ತು ಕಿಮ್ ನಡುವಿನ ಸಂಬಂಧ ಕೇವಲ ಒಂದು ಟೈಮ್‌ಪಾಸ್‌ ಅಲ್ಲ ಮತ್ತು ಅದು ಅದಕ್ಕಿಂತ ಹೆಚ್ಚು ಆಳವಾದದ್ದು ಎಂದು ಕಿಮ್‌ನ ಕುಟುಂಬವು ಅದು ಅಲ್ಲ ಎಂದು ತಿಳಿಯಬೇಕೆಂದು ಪೀಟ್‌ ಬಯಸುತ್ತಾರೆ. 

Latest Videos

click me!