ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ರಿಸೆಪ್ಷನ್‌: ದಿಶಾ ಪಟಾನಿ ಅವತಾರಕ್ಕೆ ಟ್ರೋಲ್!

Published : Feb 13, 2023, 05:57 PM IST

ಬಾಲಿವುಡ್ ನಟಿ ದಿಶಾ ಪಟಾನಿ  (Disha patani) ಅವರ ಬೋಲ್ಡ್‌ ಔಟ್‌ಫಿಟ್‌ಗಾಗಿ ಆಗಾಗ್ಗೆ ಟೀಕೆಗಳು ಮತ್ತು ಟ್ರೋಲ್‌ಗಳನ್ನು ಎದುರಿಸುವುದು ಸಾಮಾನ್ಯ. ಆದರೂ ನಟಿ ವಿಚಿತ್ರವಾದ ಬಟ್ಟೆಗಳನ್ನು ಧರಿಸುವುದರಿಂದ ಹಿಂದೆ ಸರಿಯಲಿಲ್ಲ. ಅದೇ  ರೀತಿ ಈ ಬಾರಿ ಮತ್ತೆ ದಿಶಾ ಪಟಾನಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

PREV
110
ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ರಿಸೆಪ್ಷನ್‌:  ದಿಶಾ ಪಟಾನಿ ಅವತಾರಕ್ಕೆ ಟ್ರೋಲ್!

ದಿಶಾ ಪಟಾನಿ ತಮ್ಮ ಡ್ರೆಸ್‌ ಕಾರಣದಿಂದಾಗಿ  ಮತ್ತೆ ಅಪಹಾಸ್ಯ ಮತ್ತು ಟ್ರೋಲ್ ಆಗುತ್ತಿದ್ದಾರೆ . ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಆರತಕ್ಷತೆಯಲ್ಲಿ ರಿವೀಲಿಂಗ್ ಉಡುಪನ್ನು ಧರಿಸಿದ್ದಕ್ಕಾಗಿ ನಟಿ  ಈ ಬಾರಿ ಟೀಕೆಗೆ ಒಳಗಾಗಿದ್ದಾರೆ.

210

ಸಿದ್-ಕಿಯಾರಾ ಅವರ ಮದುವೆ ರಿಸೆಪ್ಷನ್‌ಗೆ ಹಸಿರು ಮಿನುಗುವ ಬ್ಯಾಕ್‌ಲೆಸ್ ಟಾಪ್ ಮತ್ತು ತೊಡೆಯ ವರೆಗೆ ಸ್ಲೀಟ್‌ ಹೊಂದಿರುವ ಸೆಕ್ಸಿ ಮ್ಯಾಚಿಂಗ್ ಸ್ಕರ್ಟ್ ಧರಿಸಿದ್ದರು.

310

ಆದರೆ ಒಂದಷ್ಷು ಇಂಟರ್ನೆಟ್‌ ಯೂಸರ್ಸ್‌ ಅವರ ಈ  ಉಡುಗೆಯಿಂದ ಸಂತೋಷವಾಗಲಿಲ್ಲ. ಮದುವೆ ಸಮಾರಂಭದಲ್ಲಿ ದಿಶಾ ಅವರ 'ಅನುಚಿತ' ಉಡುಪನ್ನು ಅನೇಕ ಜನರು ಟ್ರೋಲ್‌ ಮಾಡಿದರು.
 


 

410

'ಅವಳು ಮದುವೆಯಲ್ಲಿ ಬೆಲ್ಲಿ ಡ್ಯಾನ್ಸರ್‌ನಂತೆ ಏಕೆ ಧರಿಸಿದ್ದಾಳೆ?' ಎಂದು  ಒಬ್ಬ ವ್ಯಕ್ತಿ  ಕಾಮೆಂಟ್‌ ಮಾಡಿದ್ದಾರೆ. 'ಅವಳು ಮದುವೆ ಕಾರ್ಯಕ್ರಮಕ್ಕೆ ಅಥವಾ ಕ್ಲಬ್‌ಗೆ ಬಂದಿದ್ದಾಳಾ?' ಎಂದು ಮತ್ತೊಬ್ಬರು ಕೇಳಿದರು. 
 

510

'ಅವಳಿಗೆ ಫ್ಯಾಶನ್ ಸೆನ್ಸ್ ಇಲ್ಲ' ಎಂದು ಮತ್ತೊಬ್ಬರು ಹೇಳಿದರೆ  "ಉಡುಪು ತುಂಬಾ ಚೀಪ್‌ ಮತ್ತು ಅನ್‌ಪ್ರೋಫೆಷನಲ್‌ ಆಗಿದೆ' ಎಂದಿದ್ದಾರೆ ಮತ್ತೊಬ್ಬರು.

610

ದಿಶಾ  ಎತ್ತರದ  ಹೀಲ್ಡ್‌ ಬೂಟುಗಳೊಂದಿಗೆ ಕೋ-ಆರ್ಡ್ ಉಡುಪನ್ನು ಧರಿಸಿದ್ದರು  ಮತ್ತು ಡಿವ್ಯೂ ಫಿನಿಶ್‌ ಮೇಕ್ಅಪ್ ಮಾಡಿದ್ದರು. ಅವರು ಲುಕ್‌ ಅನ್ನು ಸಾಫ್ಟ್‌ ಕರ್ಲ್‌, ಸ್ಮೋಕಿ ಐಸ್‌  ಮತ್ತು ಶೈನಿಂಗ್‌ ಲಿಪ್ಸ್‌ ಜೊತೆ ಪೂರ್ಣಗೊಳಿಸಿದ್ದಾರೆ 

710

ಬಾಲಿವುಡ್‌ನ ಸ್ಟಾರ್ ಕಪಲ್‌  ಕಿಯಾರಾ  ಅಡ್ವಾಣಿ ಮತ್ತು ಮತ್ತು ಸಿದ್ಧಾರ್ಥ್ ಮಲ್ಹೋತ್ರ ಇದೇ ತಿಂಗಳ 7ರಂದು ರಾಜಸ್ಥಾನದಲ್ಲಿ ಮದುವೆಯಾದರು. ನಂತರ ದೆಹಲಿಯಲ್ಲಿ ಮತ್ತು ಮುಂಬೈಯಲ್ಲಿ ವಿವಾಹದ ಆರತಕ್ಷತೆ ಹಮ್ಮಿಕೊಂಡಿದ್ದರು.
 

810

ದಿಶಾ ಪಟಾನಿ  ಸೌತ್‌ ಸೂಪರ್‌ಸ್ಟಾರ್‌ ಸೂರ್ಯ ಅವರೊಂದಿಗೆ ಸೂರ್ಯ 42,   ತಮಿಳು  ಚಿತ್ರದ ಮೂಲಕ ಕಾಲಿವುಡ್ ಸಿನಿರಂಗಕ್ಕೆ ಎಂಟ್ರಿ ನೀಡಿದ್ದಾರೆ. ಹಿಂದಿಯಲ್ಲಿ ಅಷ್ಟೇನೂ ಅವಕಾಶಗಳಿಲ್ಲದ ದಿಶಾ ತಮ್ಮ ಡ್ರೆಸ್‌ನಿಂದ ವಿಪರೀತ ಟೀಕೆಗೆ ಒಳಗಾಗುತ್ತಿದ್ದಾರೆ. 


 

910

ಸಿದ್ದಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ಧರ್ಮ ಪ್ರೊಡಕ್ಷನ್ಸ್‌ನ ಯೋಧ ಸಿನಿಮಾದಲ್ಲಿ ದಿಶಾ ಅವರು  ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

1010

ಇದ್ಲಲದೆ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಸಹ ನಟಿಸಿರುವ ಪ್ರಾಜೆಕ್ಟ್ ಕೆ ನಲ್ಲಿ ದಿಶಾ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories