ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಸಂಬಂಧವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಇವರಿಬ್ಬರು ಒಟ್ಟಿಗೆ ಕಾಣಸಿಕೊಳ್ಳುವ ರೀತಿ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ನಂಬಲಾಗಿದೆ.
ಬಾಲಿವುಡ್ ಲೈಫ್ ವರದಿ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ಪ್ಯಾಚ್ ಅಪ್ ಹಿಂದೆ ಕರಣ್ ಜೋಹರ್ ಇದ್ದಾರೆ. ವಾಸ್ತವವಾಗಿ, ಚಿತ್ರ ನಿರ್ಮಾಪಕರು ಇಬ್ಬರಿಗೂ ತುಂಬಾ ಹತ್ತಿರವಾಗಿದ್ದಾರೆ. ಅವರು ಸಿದ್ ಮತ್ತು ಕಿಯಾರಾ ಅವರನ್ನು ಒಟ್ಟಿಗೆ ಸೇರಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು.
ಇತ್ತೀಚೆಗೆ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಈ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿಯನ್ನು ಒಂದು ಮಾಡಿದ್ದರಂತೆ.
ಮಾಧ್ಯಮ ವರದಿಗಳ ಪ್ರಕಾರ, ಕರಣ್ ಈ ಜೋಡಿಯ ಬ್ರೇಕಪ್ ಬಗ್ಗೆ ತಿಳಿದಾಗ, ದುಃಖಿತರಾದರು ಮತ್ತು ಅವರಿಬ್ಬರನ್ನೂ ಒಟ್ಟಿಗೆ ಸೇರಿಸಲು ನಿರ್ಧರಿಸಿದ್ದರಂತೆ ಈ ಕಲಾವಿದರ ಗಾಡ್ ಫಾದರ್. ಕರಣ್ ಇಬ್ಬರ ಜೊತೆ ಪ್ರತ್ಯೇಕವಾಗಿ ಮಾತನಾಡಿದರು. ಯಾವ ವಿಚಾರವಾಗಿ ಇಬ್ಬರ ನಡುವೆ ಅಂತರವಿತ್ತೋ ಅದನ್ನು ಸರಿ ಮಾಡಿದರಂತೆ.
ಈಗ ಕಿಯಾರಾ ಮತ್ತು ಸಿದ್ಧಾರ್ಥ್ ಮತ್ತೆ ಒಂದಾಗಿದ್ದಾರೆ. ಅಷ್ಟೇ ಅಲ್ಲ ಇಬ್ಬರ ಬಾಂಧವ್ಯ ಮೊದಲಿಗಿಂತ ಗಟ್ಟಿಯಾಯಿತು. ಸದ್ಯ, ಇಬ್ಬರೂ ವೃತ್ತಿಪರ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇಬ್ಬರೂ ಶೀಘ್ರದಲ್ಲೇ ಒಟ್ಟಿಗೆ ಹಾಲಿಡೇಗೆ ಹೋಗುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಮುಂದಿನ ದಿನಗಳಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿಯಾರಾ ಅಡ್ವಾಣಿಯವರ ಚಿತ್ರ ಭೂಲ್ ಭುಲೈಯಾ 2 ಇತ್ತೀಚೆಗೆ ಬಿಡುಗಡೆಯಾಯಿತು, ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಅವರು ಜಗ್ ಜಗ್ ಜಿಯೋದಲ್ಲಿ ವರುಣ್ ಧವನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ನಾವು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಿಷನ್ ಮಜ್ನು ಮತ್ತು ಥ್ಯಾಂಕ್ ಗಾಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.