ಹೊಸ ಮನೆಗೆ ಶಿಫ್ಟ್‌ ಆದ Ankita Lokhande ಗೃಹ ಪ್ರವೇಶದ ಫೋಟೋಗಳು

Published : Jun 11, 2022, 05:37 PM IST

ಕಿರುತೆರೆ ಮತ್ತು ಚಲನಚಿತ್ರ ನಟಿ ಅಂಕಿತಾ ಲೋಖಂಡೆ (Ankita Lokhande) ಮತ್ತು ಅವರ ಪತಿ ವಿಕ್ಕಿ ಜೈನ್ (Vicky Jain)ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಜೂನ್ 10ರ ಶುಕ್ರವಾರ  ಆಕೆಯ ಗೃಹ ಪ್ರವೇಶದ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅಂಕಿತಾ ಅವರ ಅನೇಕ ಸ್ನೇಹಿತರು ಪಾಲ್ಗೊಂಡಿದ್ದರು. ಅಂಕಿತಾ-ವಿಕ್ಕಿ ಗೃಹ ಪ್ರವೇಶದ ಫೋಟೋಗಳು ಇಲ್ಲಿವೆ ನೋಡಿ.  

PREV
17
ಹೊಸ ಮನೆಗೆ ಶಿಫ್ಟ್‌ ಆದ Ankita Lokhande ಗೃಹ ಪ್ರವೇಶದ ಫೋಟೋಗಳು

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಇತ್ತೀಚೆಗೆ ದಂಪತಿ ಆಧಾರಿತ ರಿಯಾಲಿಟಿ ಶೋ 'ಸ್ಮಾರ್ಟ್ ಜೋಡಿ' ವಿಜೇತರಾದರು. ಇದರ ನಂತರ ಅವರು ತಮ್ಮ ಹೊಸ ಮನೆಗೆ ಹೋಗಲು ನಿರ್ಧರಿಸಿದರು.


 

27

ದಂಪತಿ ಹೊಸ ಮನೆ ಪ್ರವೇಶದ ಅನೇಕ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಅವರು ಪೂಜೆಯಿಂದ ಹಿಡಿದು ಸ್ನೇಹಿತರೊಂದಿಗೆ ಪಾರ್ಟಿ ಮಾಡುವವರೆಗಿನ ಹಲವು ಫೋಟೋ ಕಾಣಬಹುದು.

37

ಭಗವಾನ್ ಮಹಾವೀರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದಂಪತಿ ಮನೆ ಪ್ರವೇಶಿಸಿದರು. ಗೃಹ ಪ್ರವೇಶಕ್ಕೆ ಅಂಕಿತಾ ಗುಲಾಬಿ ಬಣ್ಣದ ನೌವಾರಿ ಸೀರೆಯನ್ನು ಧರಿಸಿದ್ದರೆ, ವಿಕ್ಕಿ ನೀಲಿಬಣ್ಣದ ಛಾಯೆಯ ಕುರ್ತಾದಲ್ಲಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಉಡುಗೆಯಲ್ಲಿ ದಂಪತಿ ಆಕರ್ಷಕವಾಗಿ ಕಾಣುತ್ತಿದ್ದರು.

47

ಹೊಸಮನೆಯ ಪ್ರವೇಶ ಸಮಾರಂಭಕ್ಕೆ ಅಂಕಿತಾರ ಸ್ನೇಹಿತೆಯೂ ಆಗಮಿಸಿದ್ದರು. ಅವರು ಈ ಸಂತೋಷದ ಸಂದರ್ಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಂಕಿತಾ ಮತ್ತು ವಿಕ್ಕಿಯನ್ನು ಅಭಿನಂದಿಸಿದ್ದಾರೆ.


 

57

ಇತ್ತೀಚೆಗೆ, 'ಸ್ಮಾರ್ಟ್ ಜೋಡಿ' ಶೋ ಗೆದ್ದ ನಂತರ, ಅಂಕಿತಾ ಅವರು ಮಾಜಿ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ತಮ್ಮ ಸಂಬಂಧದಲ್ಲಿ ತುಂಬಾ ಕೆಟ್ಟ ಹಂತವನ್ನು ಎದುರಿಸಬೇಕಾಯಿತು ಎಂದು ಹೇಳಿದ್ದರು. 

67

ಅಂಕಿತಾ ಪ್ರಕಾರ, ಸುಶಾಂತ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ವಿಕ್ಕಿಯನ್ನು ನಿಂದಿಸಲು ಪ್ರಾರಂಭಿಸಿದರು. ವಿಕ್ಕಿ ಜೈನ್ ಜೊತೆಯ ಸಂಬಂಧಕ್ಕೆ ಮೊದಲು ಅಂಕಿತಾ ಸುಮಾರು 6 ವರ್ಷಗಳ ಕಾಲ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ನಡೆಸಿದ್ದರು . 

77

ಅಂಕಿತಾ ಅವರು 2016 ರಲ್ಲಿ ಸುಶಾಂತ್‌ನಿಂದ ಬೇರ್ಪಟ್ಟರು ಮತ್ತು ಸುಮಾರು ಎರಡು ವರ್ಷಗಳ ನಂತರ, 2018 ರಲ್ಲಿ, ವೃತ್ತಿಯಲ್ಲಿ ಉದ್ಯಮಿಯಾಗಿರುವ ವಿಕ್ಕಿ ಜೈನ್‌ನೊಂದಿಗೆ ಅವರ ನಿಕಟತೆ ಹೆಚ್ಚಾಯಿತು. ಇಬ್ಬರೂ ಡಿಸೆಂಬರ್ 2021 ರಲ್ಲಿ ವಿವಾಹವಾದರು.

Read more Photos on
click me!

Recommended Stories