ರೋಹಿತ್ ಶೆಟ್ಟಿಯ ತಾಯಿ ಕೂಡ ಡೇಂಜರಸ್ ಸ್ಟಂಟ್‌ಗಳನ್ನು ಮಾಡುವುದರಲ್ಲಿ ಎಕ್ಸ್‌ಪರ್ಟ್
First Published | Jul 26, 2022, 4:55 PM ISTಈ ದಿನಗಳಲ್ಲಿ ರೋಹಿತ್ ಶೆಟ್ಟಿ (Rohit Shetty) ರಿಯಾಲಿಟಿ ಶೋ ಖತ್ರೋನ್ ಕೆ ಕಿಲಾಡಿ ಸೀಸನ್ 12 (Khatron Ke Khiladi 12) ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಈ ಶೋನಲ್ಲಿ ಸ್ಪರ್ಧಿಗಳು ಒಂದಕ್ಕಿಂತ ಹೆಚ್ಚು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಅಂದಹಾಗೆ, ರೋಹಿತ್ ಬಾಲಿವುಡ್‌ನಲ್ಲಿ ಸಾಹಸ ನಿರ್ದೇಶಕರಾಗಿಯೂ ಪರಿಗಣಿಸಲ್ಪಟ್ಟಿದ್ದಾರೆ. ಅವರ ಪ್ರತಿಯೊಂದು ಚಿತ್ರದಲ್ಲೂ ಅದ್ಭುತ ಆಕ್ಷನ್ ಮತ್ತು ಸಾಹಸಗಳನ್ನು ಕಾಣಬಹುದು. ಈ ಕಲೆಯನ್ನು ಅವರು ತಮ್ಮ ಹೆತ್ತವರಿಂದ ಪಡೆದಿದ್ದಾರೆಂದು. ಅಂದಹಾಗೆ, ರೋಹಿತ್ ತಂದೆ ಎಂ.ಬಿ.ಶೆಟ್ಟಿ ಬಗ್ಗೆ ಎಲ್ಲರಿಗೂ ಗೊತ್ತು. ಎಂ.ಬಿ.ಶೆಟ್ಟಿ ಅವರು 70ರ ದಶಕದ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರು ಸಾಹಸ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ಆದರೆ ರೋಹಿತ್ ತಾಯಿ ಕೂಡ ಸಿನಿಮಾಗಳಲ್ಲಿ ಸ್ಟಂಟ್ ಮತ್ತು ಬಾಡಿ ಡಬಲ್ ವರ್ಕ್ ಮಾಡುತ್ತಿದ್ದರು ಅನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ ಕೆಲವರಿಗೆ ಗೊತ್ತು. ಅವರ ತಾಯಿ ರತ್ನಾ ಶೆಟ್ಟಿ (Ratna Shetty) ಅವರು ಶೋಲೆ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಡಿ ಡಬಲ್ ಆಗಿ ನಟಿಸಿದ್ದಾರೆ. ರೋಹಿತ್ ಶೆಟ್ಟಿ ಅವರ ತಾಯಿ ರತ್ನ ಅವರಿಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.