ಕೆಜಿಎಫ್ ನಟಿ ಈಗ ಮೂಗುತಿ ಸುಂದ್ರಿ, ಸೀರೆಯಲ್ಲಿ ಈ ನಾರಿ ಹೇಗೆ ಕಾಣ್ತಾರೆ ನೋಡ್ರೀ..!

First Published | Aug 5, 2024, 7:55 PM IST

ಪ್ಯಾನ್ ಇಂಡಿಯಾ ಸುಂದರಿ ಕೆಜಿಎಫ್‌ ಚೆಲುವೆ ಶ್ರೀನಿಧಿ ಶೆಟ್ಟಿ ಯಶ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಸಖತ್ ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ತುಂಬಾ ಆಕ್ಟಿವ್ ಆಗಿರುವ ಈ ಸುಂದರಿ ಇದೀಗ ಸೀರೆಯಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್ ಚಿತ್ರದ ಸಕ್ಸಸ್‌ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿಗೆ ಅದಕ್ಕೆ ತಕ್ಕಂತೆ ಅವಕಾಶಗಳು ಸರಿಯಾಗಿ ಸಿಗುತ್ತಿಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು! ಶ್ರೀನಿಧಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೀರೆಯುಟ್ಟು ಫೋಟೋಸಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮೂಗೂತಿ ಸಹ ಧರಿಸಿದ್ದಾರೆ. ಈ ಫೋಟೋಗಳಲ್ಲಿ ಅಪ್ಪಟ ಭಾರತೀಯ ನಾರಿಯಂತೆ ಮುದ್ದು ಮುದ್ದಾಗಿ ಕಂಗೊಳಿಸಿದ್ದಾರೆ. 

Tap to resize

ಕೆಜಿಎಫ್ ಸುಂದರಿಯ ಶ್ರೀನಿಧಿ ಶೆಟ್ಟಿಯ ಈ ಫೋಟೋಗಳಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್‌ ಕಮೆಂಟ್ ಮಾಡುತ್ತಿದ್ದಾರೆ. ಮೂಗುತಿ ಸುಂದ್ರಿ, ಬ್ಯೂಟಿಫುಲ್, ಗಾರ್ಜಿಯಸ್‌, ಕೆಜಿಎಫ್‌ ಬೇಬಿ, ಇದು ನಮ್ ಸಂಸ್ಕೃತಿ ಎಂದೆಲ್ಲಾ ಹೊಗಳಿ ಕಮೆಂಟ್ ಮಾಡಿದ್ದಾರೆ.

ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಿತ್ರದಿಂದ ರೀನಾ ಅಂತಲೇ ಫೇಮಸ್ ಆಗಿದ್ದಾರೆ. ಅವರ ಈ ಸಿನಿಮಾ ನೋಡಿದವರು ಅವರ ಸೌಂದರ್ಯವನ್ನಷ್ಟೇ ಹೊಗಳಿಲ್ಲ. ಬದಲಾಗಿ ಅವರ ಆಕ್ಷಿಂಗ್‌ನ್ನು ಹೊಗಳಿದ್ದರು. ಶ್ರೀನಿಧಿ ಶೆಟ್ಟಿಗೆ  ಕೆಜಿಎಫ್ ಸಿನಿಮಾ ಅಪಾರ ಜನಮನ್ನಣೆ ನೀಡಿತ್ತು. 
 

ಶ್ರೀನಿಧಿ ಶೆಟ್ಟಿ  ಅಕ್ಟೋಬರ್ 21, 1992ರಂದು ಕರ್ನಾಟಕದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಹುಟ್ಟಿದರು. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 2015ರಲ್ಲಿ 'ಮಿಸ್ ಕರ್ನಾಟಕ' ಕಿರೀಟವನ್ನು ಮುಡಿಗೇರಿಸಿಕೊಂಡರು.

ಇನ್ನು ಶ್ರೀನಿಧಿ 'ಮಿಸ್ ದಿವಾ' 2016ರಲ್ಲಿ ಸೂಪರ್ ನ್ಯಾಷನಲ್ ಆಗಿ ಹೊರಹೊಮ್ಮಿದರು. ಜೊತೆಗೆ 'ಮಣಪ್ಪುರಂ ಮಿಸ್ ಕ್ವೀನ್ ಇಂಡಿಯಾ' ಕಿರೀಟವನ್ನು ಗೆದ್ದರು. ಇನ್ನು ಶ್ರೀನಿಧಿ ಅನೇಕ ಉತ್ಪನ್ನಗಳಿಗೆ ಮಾಡೆಲ್ ಆಗಿಯೂ ಸಹ ಕೆಲಸ ಮಾಡಿದ್ದಾರೆ.
 

ಕೆಜಿಎಫ್ 2 ಮಾಡುವಾಗಲೇ ಶ್ರೀನಿಧಿ ಶೆಟ್ಟಿ ಕಾಲಿವುಡ್‌ನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕ ಕೆಜಿಎಫ್‌ ಸುಂದರಿ ಗಮನ ಸೆಳೆದಿದ್ದರು. ಆದರೆ, ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.

Latest Videos

click me!