ಕೆಡಿ ಸಿನಿಮಾದ ಅಶ್ಲೀಲ ಸರ್ಸೆ ಸೆರಗ ಹಾಡು ಯೂಟ್ಯೂಬ್‌ನಿಂದ ಡಿಲೀಟ್, ಸಿನಿ ತಂಡಕ್ಕೆ NHRC ನೋಟಿಸ್

Published : Mar 17, 2026, 01:41 PM IST

ಕೆಡಿ ಸಿನಿಮಾದ ಅಶ್ಲೀಲ ಸರ್ಸೆ ಸೆರಗ ಹಾಡು ಯೂಟ್ಯೂಬ್‌ನಿಂದ ಡಿಲೀಟ್, ಸಿನಿ ತಂಡಕ್ಕೆ NHRC ನೋಟಿಸ್, ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಹಾಡಿಗೆ ಬಾರಿ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಸಿನಿಮಾ ತಂಡಕ್ಕೆ ಸಂಕಷ್ಟ ತೀವ್ರಗೊಂಡಿದೆ. 

PREV
15
ಸರ್ಸೆ ಸೆರಗ ಹಾಡಿಗೆ ಭಾರಿ ವಿರೋಧ

ಕಿವಿಎನ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ಕೆಡಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಪ್ರೇಮ್ ನಿರ್ದೇಶನ ಹಾಗೂ ಧ್ರುವ ಸರ್ಜಾ ನಾಯಕ ನಟನಾಗಿ ಕಾಣಿಸಿಕೊಂಡ ಕೆಡಿ ಸಿನಿಮಾದ ಸರ್ಸೆ ಸೆರಗ ಹಾಡು ಭಾರಿ ಕೋಲಾಹಲ ಸೃಷ್ಟಿಸಿದೆ. ಅತ್ಯಂತ ಕೀಳುಮಟ್ಟದ ಹಾಗೂ ಅಶ್ಲೀಲ ಸಾಹಿತ್ಯದ ಹಾಡಿಗೆ ಕನ್ನಡ ಹಾಗೂ ಬಾಲಿವುಡ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹಲವು ಸಿನಿ ದಿಗ್ಗಜರೂ ಈ ಹಾಡಿಗೆ ತೀವ್ರ ಆಕ್ರಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಸೆ ಸೆರಗ ಹಾಡೂ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ.

25
ಸರ್ಕೆ ಚುನರ್ ಸಾಂಗ್ ಡಿಲೀಟ್

ಈ ಅಶ್ಲೀಲ ಹಾಡಿಗೆ ಬಾಲಿವುಡ್‌ನ ನೋರಾ ಫತೇಹಿ ಹಾಗೂ ಸಂಜಯ್ ದತ್ ಹೆಜ್ಜೆ ಹಾಕಿದ್ದರು. ಕನ್ನಡ ಹಾಗೂ ಬಾಲಿವುಡ್‌ನಲ್ಲಿ ಈ ಹಾಡು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಲಿವುಡ್‌ನ ಗಾಯಕರು, ಸಿನಿಮಾ ದಿಗ್ಗಜರು ಆಕ್ರೋಶ ಹೊರಹಾಕಿದ್ದರು. ಕನ್ನಡದಲ್ಲಿ ಸರ್ಸೆ ಸೆರಗ ಸಾಂಗ್ ಬಾಲಿವುಡ್‌ನಲ್ಲಿ ಸರ್ಕೆ ಚುನರ್ ಸಾಂಗ್ ಆಗಿ ಬಿಡುಗಡೆಯಾಗಿದೆ. ಇದೀಗ ಹಿಂದಿ ಹಾಡು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ.

35
ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್

ಕೆವಿನ್ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಪ್ರೇಮ್ ಸೇರಿದಂತೆ ಸಿನಿಮಾ ತಂಡಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ. ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ದೆಹಲಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಮಾನವ ಹಕ್ಕುಗಳ ಆಯೋಗ ಅಶ್ಲೀಲ ಹಾಡು ಕುರಿತು ನೋಟಿಸ್ ನೀಡಿದೆ. ಈ ಹಾಡಿನಲ್ಲಿ ಕಾಣಿಸಿಕೊಂಡ ನೋರಾ ಫತೇಹಿ, ಸಂಜಯ್ ದತ್ ಸೇರಿದಂತೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ.

45
ಶೀಘ್ರದಲ್ಲೇ ಕನ್ನಡ ಹಾಡು ಡಿಲೀಟ್

ಮಾನವ ಹಕ್ಕುಗಳ ಆಯೋಗದ ನೋಟಿಸ್, ಹಲವು ಠಾಣೆಗಳಲ್ಲಿ ದೂರು, ಜೊತೆಗೆ ಕನ್ನಡಿಗರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಕನ್ನಡದಲ್ಲಿರುವ ಸರ್ಸೆ ಸೆರಗ ಹಾಡು ಕೂಡ ಡಿಲೀಟ್ ಮಾಡುವ ಸಾಧ್ಯತೆ ಹೆಚ್ಚಿದೆ. ಕಾನೂನು ಸಂಕಷ್ಟ ಹೆಚ್ಚಾಗುತ್ತಿರು ಕಾರಣ ಈ ಹಾಡು ಸಿನಿಮಾದಿಂದಲೇ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಿದೆ.

55
ಪ್ರೇಮ್ ವಿರುದ್ಧ ಆಕ್ರೋಶ

ಬೇಡುವೆನು ವರವನ್ನು ಕೊಡುತಾಯಿ ಜನ್ಮವನು ಅನ್ನೋ ತಾಯಿ ಪ್ರೀತಿ ವಾತ್ಸಲ್ಯದ ಕುರಿತ ಹಾಡು ಬರೆದು ಜನರಿಗೆ ಅತೀ ಹೆಚ್ಚು ಇಷ್ಟವಾಗಿದ್ದ ನಿರ್ದೇಶಕ ಪ್ರೇಮ್ ಇದೀಗ ಸರ್ಸೆ ಸೆರಗ ಹಾಡಿನಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರೇಮ್ ಹಾಗೂ ಕನ್ನಡ ಸಿನಿಮಾ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories