Priyanka Chopra ನ್ಯೂಯಾರ್ಕ್ ರೆಸ್ಟೋರೆಂಟ್ 'ಸೋನಾ'ದಲ್ಲಿ Katrina-Vicky ದಂಪತಿ

Published : May 14, 2022, 06:34 PM IST

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina Kaif- Vicky Kaushal) ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈ ಜೋಡಿ  ಕತ್ರಿನಾ ಅವರ ನೆಚ್ಚಿನ ಕೆಫೆಗೆ ಭೇಟಿ ನೀಡಿದ್ದರು. ಇದೀಗ, ಪ್ರಿಯಾಂಕಾ ಚೋಪ್ರಾ ಅವರ ರೆಸ್ಟೋರೆಂಟ್ (Priyanka Chopra)  ಸೋನಾಗೆ  (Sona) ಕತ್ರಿನಾ-ವಿಕ್ಕಿ ದಂಪತಿ ಭೇಟಿ ನೀಡಿದ್ದಾರೆ ಮತ್ತು  ಅಲ್ಲಿನ ಫೋಟೋ ಶೇರ್‌ ಮಾಡಿದ್ದಾರೆ.

PREV
19
Priyanka Chopra ನ್ಯೂಯಾರ್ಕ್ ರೆಸ್ಟೋರೆಂಟ್ 'ಸೋನಾ'ದಲ್ಲಿ Katrina-Vicky ದಂಪತಿ

ಕತ್ರಿನಾ ತನ್ನ Instagram ಸ್ಟೋರಿಗಳಲ್ಲಿ ವಿಕ್ಕಿ ಕೌಶಲ್ ಮತ್ತು ಸಹ-ಮಾಲೀಕ ಮನೀಶ್ ಎಂ ಗೋಯಲ್ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಅವರ  ಸೋನಾ ರೆಸ್ಟೋರೆಂಟ್‌ನಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ. 

29

'Home away from home- @sonanewyork ವೈಬ್  ಇಷ್ಟವಾಯಿತು  @ಪ್ರಿಯಾಂಕಚೋಪ್ರಾ ಯಾವಾಗಲೂ ನೀವು ಮಾಡುವ ಎಲ್ಲವೂ ಅದ್ಭುತವಾಗಿದೆ' ಎಂದು ಕತ್ರಿನಾ ಬರೆದಿದ್ದಾರೆ. 

39

ಫೋಟೋದಲ್ಲಿ ವಿಕ್ಕಿ ಬೇಸಿಕ್ ಗ್ರೇ ಶರ್ಟ್ ಧರಿಸಿದ್ದರೆ, ಕತ್ರಿನಾ ಹೂವಿನ ಬೇಜ್ ಉಡುಪನ್ನು ಧರಿಸಿದ್ದಾರೆ ಮತ್ತು ಈ ಕಪಲ್‌ ಜೊತೆ ಫೋಟೋದಲ್ಲಿ ರೆಸ್ಟೋರೆಂಟ್ ಸೋನಾದ ಸಹ-ಮಾಲೀಕ ಮನೀಶ್ ಎಂ ಗೋಯಲ್ ಸಹ ಇದ್ದಾರೆ.

49

ವಿಕ್ಕಿ ಕೌಶಲ್ ಅವರು ಐಸ್ ಕ್ರೀಮ್ ಶೇಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಇದು ಅವರು ಸೋನಾ ರೆಸ್ಟೋರೆಂಟ್‌ನಲ್ಲಿ ಹೊಂದಿದ್ದ ಭಕ್ಷ್ಯಗಳಲ್ಲಿ ಒಂದಾಗಿದೆ.

59

 ಕತ್ರಿನಾ ಅವರ ಸ್ಟೋರಿಯನ್ನು ಪ್ರಿಯಾಂಕಾ ಚೋಪ್ರಾ  ಶೇರ್‌ ಮಾಡಿ   ಪ್ರತಿಕ್ರಿಯಿಸಿದ್ದಾರೆ. 'ಲವ್ ಯು ಹನಿ! ನೀವು ಭೇಟಿ ನೀಡಿದ್ದು ಸಂತೋಷವಾಗಿದೆ. @sonanewyork ನಿಮ್ಮನ್ನು ಯಾವುದೇ ಸಮಯದಲ್ಲಿ ಸ್ವಾಗತಿಸುತ್ತದೆ...#Homeawayfromhome'ಎಂದು ಪಿಸಿ ಬರೆದಿದ್ದಾರೆ.

69

ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾದಲ್ಲಿ ಕತ್ರಿನಾ ಜೊತೆ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ ಮತ್ತು  ಇದರಲ್ಲಿ ಆಲಿಯಾ ಭಟ್ ಕೂಡ ನಟಿಲಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ, ಇದು ಮಾರುಕಟ್ಟೆಗೆ ಬರಲಿದೆ.

79

ಕತ್ರಿನಾ ಕೈಫ್ ಅವರು ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭವಾಗಿತ್ತು. ಮತ್ತೊಂದೆಡೆ, ವಿಕ್ಕಿ ಕೌಶಲ್ ಅವರ ಪ್ರತಿನಿಧಿ ವದಂತಿಯನ್ನು ತಿರಸ್ಕರಿಸಿದರು ಮತ್ತು ಸುದ್ದಿ ಸುಳ್ಳು ಎಂದು ಘೋಷಿಸಿದರು. ವರದಿಗಳ ಪ್ರಕಾರ ಕತ್ರಿನಾ ಕೈಫ್ ಈಗಾಗಲೇ ಎರಡು ತಿಂಗಳ ಗರ್ಭಿಣಿ.


 

89

ಶ್ರೀರಾಮ್ ರಾಘವನ್ ನಿರ್ದೇಶನದ ಮತ್ತು ವಿಜಯ್ ಸೇತುಪತಿ ಅಭಿನಯದ ಮೆರ್ರಿ ಕ್ರಿಸ್‌ಮಸ್ ಚಿತ್ರದಲ್ಲಿ ಕತ್ರಿನಾ ಕೈಫ್ ಇದ್ದಾರೆ ಮತ್ತು ಅವರು ಜೀ ಲೇ ಜರಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ವಿಕ್ಕಿ ಕೌಶಲ್ ಅವರು ಬ್ಯುಸಿ ಶೆಡ್ಯೂಲ್‌  ಹೊಂದಿದ್ದಾರೆ. 

99

ಅವರು ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್‌ನಲ್ಲಿ ಫಾತಿಮಾ ಸನಾ ಶೇಖ್ ಮತ್ತು ಸನ್ಯಾ ಮಲ್ಹೋತ್ರಾ ಮತ್ತು ಗೋವಿಂದ ನಾಮ್ ಮೇರಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ಮಾನುಷಿ ಚಿಲ್ಲರ್ ಅವರೊಂದಿಗೆ YRF ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತದೆ.

Read more Photos on
click me!

Recommended Stories