ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಅರಶಿನ ಶಾಸ್ತ್ರ ಕಾರ್ಯಕ್ರಮ ಮೋಜು ಮತ್ತು ಸಂತೋಷದ ಸಂದರ್ಭ ಆಗಿತ್ತು. ನಟಿಯ ಸಹೋದರಿ ಇಸಾಬೆಲ್ ಶನಿವಾರ ಅರಶಿನ ಶಾಸ್ತ್ರದ ದಿನ ಭಾವ ವಿಕ್ಕಿ ಕೌಶಲ್ ಅವರ ಮೋಜಿನ ಸಮಯವನ್ನು ಹಂಚಿಕೊಂಡಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಅರಶಿನ ಶಾಸ್ತ್ರದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಟ್ಟ ಕೆಲವೇ ನಿಮಿಷಗಳ ನಂತರ ಇಸಾಬೆಲ್ ಅವರ ಪೋಸ್ಟ್ ವೈರಲ್ ಆಗಿದೆ.
ರಾಜಸ್ಥಾನದ ಸವಾಯಿ ಮಾಧೋಪುರ್‌ನಲ್ಲಿರುವ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್‌ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ಒಂದು ದಿನದ ನಂತರ ಸೆಲೆಬ್ರಿಟಿಗಳು ಪೋಸ್ಟ್ ಶೇರ್ ಮಾಡುತ್ತಿದ್ದಾರೆ.
ಕತ್ರಿನಾ ಕೈಫ್(38) ಮತ್ತು ವಿಕ್ಕಿ ಕೌಶಲ್(33) 2019 ರಲ್ಲಿ ಡೇಟಿಂಗ್ ಆರಂಭಿಸಿದ್ದಾರೆ ಎಂದು ನಂಬಲಾಗಿದೆ. ಅವರು ತಮ್ಮ ಮದುವೆಯ ತನಕ ತಮ್ಮ ಸಂಬಂಧವನ್ನು ಖಾಸಗಿಯಾಗಿ ಇರಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ.
ಕತ್ರಿನಾ ಕೈಫ್ ಕೊನೆಯದಾಗಿ ಸೂರ್ಯವಂಶಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಸಲ್ಮಾನ್ ಖಾನ್ ಅವರ ಟೈಗರ್ ಸರಣಿಯ ಮೂರನೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್‌ಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ವಿಕ್ಕಿ ಕೌಶಲ್, ಈ ವರ್ಷ ಸರ್ದಾರ್ ಉಧಮ್‌ನಲ್ಲಿನ ಅವರ ಅಭಿನಯಕ್ಕಾಗಿ ಮೆಚ್ಚುಗೆ ಪಡೆದರು.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಯಾವಾಗಲೂ ತಮ್ಮ ಸಂಬಂಧದ ಬಗ್ಗೆ ಮಾತನಾಡಿಲ್ಲ. ಈಗ ಡೈರೆಕ್ಟ್ ಅವರು ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅವರ ಮದುವೆ ಸುದ್ದಿ ಮಾಡಿತ್ತು. ಏಕೆಂದರೆ ಅವರು ತಮ್ಮ ಮದುವೆ ವಿಚಾರ ರಹಸ್ಯವಾಗಿಟ್ಟಿದ್ದರು.