ಮದುವೆಗೆ ಒಂದು ವಾರ ಮೊದಲು ಆಸ್ಪತ್ರೆ ಸೇರಿದ ಅಂಕಿತಾ ಲೋಖಂಡೆ!

First Published | Dec 10, 2021, 4:26 PM IST

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ (Sushanth Singh Rajput) ಅವರ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ (Ankita Lokhande) ಬಾಯ್‌ ಫ್ರೆಂಡ್‌ ವಿಕ್ಕಿ ಜೈನ್ (Vicky Jain) ಜೊತೆ ಮದುವೆಯಾಗಲಿದ್ದಾರೆ. ಡಿಸೆಂಬರ್ 12 ಮತ್ತು 14 ರ ನಡುವೆ ದಂಪತಿಗಳು ವಿವಾಹವಾಗಲಿದ್ದಾರೆ. ಈ ನಡುವೆ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಮೊನ್ನೆ ರಾತ್ರಿ ಅಂಕಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರಣವೇನು? ಇಲ್ಲಿದೆ ಘಟನೆಯ ಪೂರ್ತಿ ವಿವರ.

ನಟಿ  ಅಂಕಿತಾ ಲೋಖಂಡೆ ಅವರ ಬಾಯ್‌ಫ್ರೆಂಡ್‌ ವಿಕ್ಕಿ ಜೈನ್ ಜೊತೆ ಮದುವೆಯಾಗಲಿದ್ದಾರೆ. ಡಿಸೆಂಬರ್ 12 ಮತ್ತು 14 ರ ನಡುವೆ ದಂಪತಿಗಳು ವಿವಾಹವಾಗಲಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಕೊಡಲು ಆರಂಭಿಸಿದ್ದಾರೆ.

ಅದೇ ಹೊತ್ತಿಗೆ  ಅಂಕಿತಾ ಮತ್ತು ವಿಕ್ಕಿ ಅವರ  ಮದುವೆಯ ಪೂರ್ವ ಕಾರ್ಯಕ್ರಮಗಳೂ ಶುರುವಾಗಿವೆ. ಈ ನಡುವೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ನಿನ್ನೆ ರಾತ್ರಿ ಅಂಕಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Tap to resize

ಪಿಂಕ್ವಿಲ್ಲಾ ವರದಿ ಪ್ರಕಾರ, ಅಂಕಿತಾ ಅವರ ಕಾಲು  ಹಠಾತ್ ಆಗಿ ಉಳುಕಿದ ಕಾರಣದಿಂದ ನೋವು ಉಂಟಾಗಿದ್ದು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈಗ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಆದರೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. 

Ankita Lokhande and Vicky Jain to wed in Mumbai

ಅಂಕಿತಾ ಲೋಖಂಡೆ ತನ್ನ ಮದುವೆಯ ಬಗ್ಗೆ ತುಂಬಾ ಉತ್ಸುಕಳಾಗಿದ್ದಾರೆ ಮತ್ತು ಈಗಾಗಗಲೇ ಪ್ರೀ ವೆಡ್ಡಿಂಗ್‌ ಫಂಕ್ಷನ್‌ಗಳು ಸಹ ಪ್ರಾರಂಭವಾಗಿದೆ. ಈ ಮದುವೆ ಮೂರು ದಿನಗಳ ವರೆಗೆ ಇರುತ್ತದೆ. 

Ankita Lokhande and Vicky Jain to wed in Mumbai

ಅಂಕಿತಾ ಮತ್ತು ವಿಕ್ಕಿ ಅವರ ಆಪ್ತ ಮೂಲಗಳ ಪ್ರಕಾರ, ದಂಪತಿಗಳು ಡಿಸೆಂಬರ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಮದುವೆ ಡಿಸೆಂಬರ್ 12 ರಿಂದ 14 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. 

Ankita Lokhande

ಕಾರ್ಡ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಡಿಸೆಂಬರ್ 12 ರಂದು ಮೆಹಂದಿ ಸಮಾರಂಭ ನಡೆಯಲಿದೆ. ಇದಾದ ಬಳಿಕ ಸಂಜೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮರುದಿನ ಅಂದರೆ ಡಿಸೆಂಬರ್ 13 ರಂದು ದಂಪತಿಗಳ ಅರಿಶಿನ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸಂಜೆ ಸಂಗೀತವನ್ನೂ ಇಡಲಾಗಿದೆ. 

ಡಿಸೆಂಬರ್ 14 ರಂದು, ಮದುವೆಯು ಹಗಲಿನಲ್ಲಿ ನಡೆಯುತ್ತದೆ, ಆದರೆ ಆರತಕ್ಷತೆ ಸಂಜೆ ನಡೆಯುತ್ತದೆ. ಎಲ್ಲಾ ಸಮಾರಂಭಗಳು ಥೀಮ್ ಆಧಾರಿತವಾಗಿರುತ್ತದೆ. ವರದಿಗಳ ಪ್ರಕಾರ, ಅಂಕಿತಾ-ವಿಕ್ಕಿ ಮೆಹಂದಿ ಸಮಾರಂಭಕ್ಕಾಗಿ  ಪಾಪ್ ಥೀಮ್ ಅನ್ನು ಆಯ್ಕೆ ಮಾಡಿದ್ದಾರೆ. ಅದೇ ಸಮಯದಲ್ಲಿ, ನಿಶ್ಚಿತಾರ್ಥಕ್ಕಾಗಿ ಗ್ಲಿಟ್ಜ್ ಮತ್ತು ಗ್ಲಾಮ್ ಥೀಮ್ ಇರಿಸಲಾಗಿದೆ. 
 

ಹಲ್ದಿ ಸಮಾರಂಭದಲ್ಲಿ, ಎಲ್ಲಾ ಅತಿಥಿಗಳು ಹಳದಿ ಉಡುಪಿನಲ್ಲಿ ಆಗಮಿಸುತ್ತಾರೆ. ಸಂಗೀತದ ದಿನದಂದು, ಥೀಮ್ ಅನ್ನು ಇಂಡೋ-ವೆಸ್ಟರ್ನ್ ಇರಿಸಲಾಗಿದೆ. ಡಿಸೆಂಬರ್ 3 ರಿಂದ ಅಂಕಿತಾ ಮತ್ತು ವಿಕ್ಕಿ ಜೈನ್‌ ಅವರ ವಿವಾಹ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಇಬ್ಬರೂ ಸಾಂಪ್ರದಾಯಿಕ ಮರಾಠಿ ಉಡುಗೆಯಲ್ಲಿ ಕಾಣಿಸಿಕೊಂಡ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಂಕಿತಾ ಮತ್ತು ವಿಕ್ಕಿ ಕಳೆದ 3 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.  ಅವರು ಸಾಮಾನ್ಯ ಸ್ನೇಹಿತನ ಮೂಲಕ ಭೇಟಿಯಾಗಿದ್ದರು. ವಿಕ್ಕಿ ಜೈನ್‌ಗಿಂತ ಮೊದಲು, ಅಂಕಿತಾ ಬಾಲಿವುಡ್‌ ನಟ ದಿವಗಂತ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಪವಿತ್ರ ರಿಶ್ತಾ ಎಂಬ ಟಿವಿ ಶೋನಲ್ಲಿ ಕೆಲಸ ಮಾಡುವ ಮೂಲಕ ಅಂಕಿತಾ ಲೋಖಂಡೆ ಫೇಮಸ್‌ ಆದರು. 

Latest Videos

click me!