Happy Anniversary Virushka: ಸ್ಟಾರ್ ಜೋಡಿಯ ಚಂದದ ಪ್ರೇಮಕಥೆ

First Published | Dec 11, 2021, 10:03 AM IST
  • Happy Anniversary Virushka: ಕ್ರಿಕೆಟರ್-ನಟಿಯ ಚಂದದ ಲವ್‌ಸ್ಟೋರಿ
  • ಬಾಲಿವುಡ್ ಕ್ಯೂಟ್ ಜೋಡಿಗಿಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ 

ಭಾರತದ ಸ್ಟಾರ್ ಸೆಲೆಬ್ರಿಟಿ ಜೋಡಿಗಳಲ್ಲಿ ವಿರುಷ್ಕಾ (Virushka)ಕೂಡಾ ಇದ್ದಾರೆ. ಕ್ರಿಕೆಟರ್ ಹಾಗೂ ನಟಿಯ ಜೋಡಿ ಟಾಪ್ ಸ್ಟಾರ್ ಕಪಲ್. ಅವರ ಲವ್(Love) ಆರಂಭವಾದಾಗಿನಿಂದಲೂ ಜೋಡಿ ಸುದ್ದಿಯಲ್ಲಿದ್ದಾರೆ. ಪ್ರೀತಿ, ಮದುವೆ, ನಂತರ ಮಗಳು ವಮಿಕಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ಈ ಜೋಡಿ

2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಅವರ ಲವ್ ಶುರುವಾಗಿದ್ದು 2013ರಲ್ಲಿ. ಹಾಗಾಗಿ ಇವರ ಪ್ರೀತಿಗೆ ಈಗ 8 ವರ್ಷ.

Tap to resize

ಮೊದಲ ಭೇಟಿ: 2013ರಲ್ಲಿ ಶಾಂಪೂ ಬ್ರ್ಯಾಂಡ್‌ಗಾಗಿ ಜಾಹೀರಾತು ಶೂಟಿಂಗ್ ಸೆಟ್‌ನಲ್ಲಿ ಈ ಜೋಡಿ ಭೇಟಿಯಾಗಿತ್ತು. ಅನುಷ್ಕಾ ಸೆಟ್‌ಗೆ ಬರುತ್ತಿದ್ದಂತೆ ಕೊಹ್ಲಿ ನರ್ವಸ್ ಆಗಿದ್ದರು. ನಟಿಯನ್ನು ನೋಟಿ ನಿಮಗೆ ಹೀಲ್ಸ್ ಇರಲಿಲ್ವೇ ಎಂದು ಕೇಳಿದ್ದಾರೆ ವಿರಾಟ್ ಕೊಹ್ಲಿ. ಎಕ್ಸ್‌ಕ್ಯೂಸ್ಮಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು ಅನುಷ್ಕಾ. ತಕ್ಷಣ ಎಚ್ಚೆತುಕೊಂಡ ಕೊಹ್ಲಿ ಜಸ್ಟ್ ತಮಾಷೆ ಮಾಡಿದೆ ಎಂದು ತೇಪೆ ಹಚ್ಚಿದ್ದರು.

ಆದರೆ ಆ ಮೊದಲ ಭೇಟಿಯಲ್ಲಿ ಕೊಹ್ಲಿ ಜೋಕ್ ನಿಜಕ್ಕೂ ಸ್ವಲ್ಪ ವಿಚಿತ್ರವಾಗಿತ್ತು. ನಾನು ಫೂಲ್ ಆಗಿದ್ದೆ, ಆದರೆ ಆಕೆ ತುಂಬಾ ವಿಶ್ವಾಸದಿಂದ ಇದ್ದಳು ಎಂದು ನೆನಪಿಸಿಕೊಂಡಿದ್ದರು ಕೊಹ್ಲಿ.

ಇಬ್ಬರ ಲವ್ ಕುರಿತು ಸುದ್ದಿ ಹರಿದಾಡುತ್ತಿದ್ದಾಗ ಕೊಹ್ಲಿ ಲವ್ ಕನ್ಫರ್ಮ್ ಮಾಡಿದ್ದರು. ನಾವೇನನ್ನೂ ಅಡಗಿಸುತ್ತಿಲ್ಲ. ನಾವು ಪ್ರೀತಿಯಲ್ಲಿರುವ ಸಾಮಾನ್ಯ ಯುವ ಜೋಡಿ ಎಂದಿದ್ದರು. ಐಎಸ್‌ಎಲ್ ಸಮಯದಲ್ಲಿ ಇಬ್ಬರು ಜೊತೆಯಾಗಿ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಒಂದು ವರ್ಷದ ನಂತರ, ಭಾರತವು ಐಸಿಸಿ ವಿಶ್ವಕಪ್‌ನ ಸೆಮಿಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಾಗ, ಸೋಲಿಗೆ ಅಭಿಮಾನಿಗಳು ಅನುಷ್ಕಾ ಅವರನ್ನು ದೂಷಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ ಕೊಹ್ಲಿ, ವಿಶ್ವಕಪ್ ಸೆಮಿಫೈನಲ್ ನಂತರ ನಡೆದ ಸಂಗತಿಗಳು, ನನ್ನ ವೈಯಕ್ತಿಕ ಜೀವನ ಮತ್ತು ವಿಶೇಷವಾಗಿ ಅನುಷ್ಕಾ ಬಗ್ಗೆ ಜನರು ಪ್ರತಿಕ್ರಿಯಿಸಿದ ರೀತಿ ನಿಜವಾಗಿಯೂ ಅಗೌರವಕಾರಿಯಾಗಿದೆ ಎಂದಿದ್ದರು.

ನಿಶ್ಚಿತಾರ್ಥದ ಸುದ್ದಿ: 2016 ರಲ್ಲಿ, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಊಹಾಪೋಹಗಳು ಇತ್ತು. ಆದರೆ, ನಾವು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ, ಮತ್ತು ನಾವು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದರೆ, ನಾವು ಅದನ್ನು ಅಡಗಿಸುವುದಿಲ್ಲ ಎಂದಿದ್ದರು. 
ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ ಅವರ ವಿವಾಹದ ಸಮಯದಲ್ಲಿ ಈ ಜೋಡಿ ಜೊತೆಯಾಗಿ ಭಾಗವಹಿಸಿದ್ದರು.

2017 ರಲ್ಲಿ, ಪ್ರೇಮಿಗಳ ದಿನದಂದು ಅನುಷ್ಕಾ ಜೊತೆಗಿನ ಕೊಹ್ಲಿ ಫೋಟೋ ವೈರಲ್ ಆಗಿತ್ತು. ನೀವು ಬಯಸಿದಲ್ಲಿ ಪ್ರತಿ ದಿನವೂ ಪ್ರೇಮಿಗಳ ದಿನವಾಗಿದೆ ಎಂದು ಅವರು ಫೋಟೋಗೆ ಶೀರ್ಷಿಕೆ ನೀಡಿದ್ದರು. ವರ್ಷದ ಅಂತ್ಯದ ವೇಳೆಗೆ, ಅವರು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ದಂಪತಿ ದೆಹಲಿ ಮತ್ತು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಸಹ ಆಯೋಜಿಸಿದ್ದರು.

2020 ರಲ್ಲಿ, ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು. COVID ಲಾಕ್‌ಡೌನ್‌ನಲ್ಲಿ ಕ್ರಿಕೆಟ್ ಅನ್ನು ಸ್ಥಗಿತಗೊಳಿಸಲಾಯಿತು. ಜನವರಿ 2021 ರಲ್ಲಿ ಅವರು ವಮಿಕಾ ಎಂಬ ಹೆಣ್ಣು ಮಗುವಿಗೆ ಪೋಷಕರಾದರು.

ಕರ್ವಾಚೌತ್: 2019 ರಲ್ಲಿ, ಅವರ ಕರ್ವಾಚೌತ್ ಆಚರಣೆಯ ಸಮಯದಲ್ಲಿ, ಕೊಹ್ಲಿ ಹಂಚಿಕೊಂಡ ಫೋಟೋ ವೈರಲ್ ಆಗಿತ್ತು. ಒಟ್ಟಿಗೆ ಉಪವಾಸ ಮಾಡುವವರು ಒಟ್ಟಿಗೆ ನಗುತ್ತಾರೆ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು. ಅವರ ಎಲ್ಲಾ ಅಭಿಮಾನಿಗಳು ಫೋಟೋವನ್ನು ಇಷ್ಟಪಟ್ಟಿದ್ದರು.

ಇಬ್ಬರು ತಮ್ಮ ಪ್ರೇಮಕಥೆಯಲ್ಲಿ ಇಲ್ಲಿಯವರೆಗೆ ಅದ್ಭುತವಾದ ಏರಿಕೆಯನ್ನು ಕಂಡಿದ್ದಾರೆ. ಅದು ಕುಟುಂಬವಾಗಿ ಸುಂದರವಾಗಿ ಕೊನೆಗೊಂಡಿದೆ. ಅಭಿಮಾನಿಗಳು ಕ್ಯೂಟ್ ದಂಪತಿಗಳ ಕುರಿತು ಪ್ರತಿಬಾರಿ ಸಂಭ್ರಮಿಸುತ್ತಾರೆ. ಸುಂದರ ಜೋಡಿಗೆ Happy Wedding Anniversary

Latest Videos

click me!