ಕಪ್ಪು ಪಾರದರ್ಶಕ ಸೀರೆಯಲ್ಲಿ ಕರಿಷ್ಮಾ ಕಪೂರ್; ಫೋಟೋ ವೈರಲ್‌!

Suvarna News   | Asianet News
Published : Mar 11, 2022, 05:34 PM IST

ಬಾಲಿವುಡ್‌ನ 'ಹೀರೋಯಿನ್ ನಂ. 1' ಕರಿಷ್ಮಾ ಕಪೂರ್ (Karishma Kapoor) 47ನೇ ವಯಸ್ಸಿನಲ್ಲಿಯೂ ತುಂಬಾ ಸುಂದರವಾಗಿ ಕಾಣುತ್ತಾರೆ. ಇಂದಿಗೂ ಇವರ ಫಿಟ್ನೆಸ್ ಮತ್ತು ಸೌಂದರ್ಯದ ಮುಂದೆ ಅನೇಕ ನಟಿಯರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಲೋಲೋ ಪ್ರತಿದಿನ ತಮ್ಮ ಸುಂದರವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಕರೀನಾ ಕಪೂರ್ (Kareena Kapoor) ಅವರ ಅಕ್ಕ ಕಪ್ಪು ಸೀರೆಯಲ್ಲಿ ಕೆಲವು ಫೋಟೋಗಳನ್ನು ತಮ್ಮ Instagram ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವು ವೈರಲ್ ಆಗಿದೆ.  

PREV
17
ಕಪ್ಪು ಪಾರದರ್ಶಕ ಸೀರೆಯಲ್ಲಿ ಕರಿಷ್ಮಾ ಕಪೂರ್; ಫೋಟೋ ವೈರಲ್‌!

ಕರಿಷ್ಮಾ ಕಪೂರ್ ಅವರನ್ನು ಇತ್ತೀಚೆಗೆ ರೇಡಿಯೋ ಮಿರ್ಚಿ ಗೌರವಿಸಿತು. Face of Iconic Bollywood Hits ಆವಾರ್ಡ್‌ ಅನ್ನು  ಅವರಿಗೆ ನೀಡಲಾಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಿಷ್ಮಾ ಕಪ್ಪು ಸೀರೆ ಧರಿಸಿ  ಆಗಮಿಸಿದ್ದರು.

27

ಕರಿಷ್ಮಾ ಕಪ್ಪು ಬಣ್ಣದ ಪಾರದರ್ಶಕ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಾಕಿದ್ದಾರೆ ಮತ್ತು ಅವು ಸಖತ್ ವೈರಲ್‌ ಆಗಿವೆ.
 

37

ಕರಿಷ್ಮಾ ಕಪೂರ್ ಕಪ್ಪು ಸೀರೆಯೊಂದಿಗೆ ಕಿವಿಯೋಲೆ ಧರಿಸಿದ್ದಾರೆ. ಇದರೊಂದಿಗೆ ತಲೆಗೂದಲನ್ನು ಕಟ್ಟಿಕೊಂಡಿದ್ದಾರೆ. ನಟಿ ತನ್ನ ಮೇಕಪ್ ಅನ್ನು ಅತ್ಯಂತ ಕಡಿಮೆ ಇರಿಸಿಕೊಂಡಿದ್ದಾರೆ. ಇದರ ಹೊರತಾಗಿಯೂ, ಅವರು ಸಖತ್‌ ಗಾರ್ಜಿಯಸ್‌ ಆಗಿ  ಕಾಣಿಸಿಕೊಂಡಿದ್ದಾರೆ

47

ಕರಿಷ್ಮಾ ಕಪೂರ್ ಖ್ಯಾತ ಡಿಸೈನರ್ ಸಬ್ಯಸಾಚಿ ಅವರ ಸೀರೆಯನ್ನು ಧರಿಸಿದ್ದರು. ಅದೇ ಸಮಯದಲ್ಲಿ, ಸಬ್ಯಸಾಚಿ ಡಿಸೈನ್‌ ಮಾಡಿದ ಆಭರಣವನ್ನು ಸಹ ಧರಿಸಿದ್ದರು. ನಟಿಯ ಈ ಫೋಟೋಗಳು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ (Celebrities) ಸಾಕಷ್ಟು ಲೈಕ್ಸ್‌ ಗಿಟ್ಟಿಸಿದೆ.

57

ಕರಿಷ್ಮಾ ಕಪೂರ್ ಅವರ ಈ ಪೋಸ್ಟ್‌ಗೆ ಅಥಿಯಾ ಶೆಟ್ಟಿ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅಮೃತಾ ಅರೋರಾ, 'ಮೈ ಗಾರ್ಜಿಯಸ್ ಗರ್ಲ್' ಎಂದು ಬರೆದಿದ್ದಾರೆ. ಇದರ ಹೊರತಾಗಿ, ಅನೇಕ ಸೆಲೆಬ್ರಿಟಿಗಳು ಫೈರ್ ಮತ್ತು ಹಾರ್ಟ್‌ನ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ನಟಿಯ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ.

 

67

ಅದೇ ಸಮಯದಲ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಫೋಟೋಗೆ ಸಾಕಷ್ಟು ಕಾಮೆಂಟ್ (comment) ಮಾಡುತ್ತಿದ್ದಾರೆ. 'ನೀವು ಕಪ್ಪು ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದೀರಿ' ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ. ಒಬ್ಬ ಬಳಕೆದಾರರು 'ಸೌಂದರ್ಯದ ರಾಣಿ' (Beauty Queen) ಎಂದು ಬರೆದಿದ್ದಾರೆ. ಕರಿಷ್ಮಾ ಅವರ ಫೋಟೋವನ್ನು ನವ್ಯಾ ನಂದಾ ಸೇರಿದಂತೆ ಸುಮಾರು  126K ಜನರು ಇಷ್ಟಪಟ್ಟಿದ್ದಾರೆ.

77

ಕರಿಷ್ಮಾ ಕಪೂರ್ ಅವರ ಕೆಲಸದ ಬಗ್ಗೆ ಹೇಳುವುದಾದರೆ, 1991 ರಲ್ಲಿ 'ಪ್ರೇಮ್ ಖೈದಿ' (Prem Kaidi) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಅವರು ಇತ್ತೀಚೆಗೆ ಬಾಲಿವುಡ್‌ನಲ್ಲಿ ತಮ್ಮ 30 ವರ್ಷಗಳನ್ನು ಪೂರೈಸಿದರು. ನಟಿ ಕೊನೆಯದಾಗಿ 2020 ರ ವೆಬ್ ಸರಣಿ (Web Series) 'ಮೆಟಲ್‌ಹುಡ್' ನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು. 

Read more Photos on
click me!

Recommended Stories