ಶಾರ್ಟ್‌ ಡ್ರೆಸ್‌ ನೋ ಮೇಕಪ್‌ ಲುಕ್‌ನಲ್ಲಿ ವಿಚಿತ್ರವಾಗಿ ಕಾಣಿಸುತ್ತಿರುವ ಬೇಬೊ!

Suvarna News   | Asianet News
Published : Sep 30, 2021, 05:29 PM IST

ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಮುಂಬೈನಲ್ಲಿ ಮಾತ್ರವಲ್ಲದೆ ದೇಶದ ಹೊರಗೆ ಚಿತ್ರೀಕರಣ ನಡೆಸುತ್ತಿದ್ದರೆ, ಕೆಲವರು ನಗರದಲ್ಲಿಯೇ ಉಳಿದು ತಮ್ಮ ಚಿತ್ರಗಳ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸವನ್ನು ಮಾಡುತ್ತಿದ್ದಾರೆ. ಅಂತೆಯೇ, ಕೆಲವು ಸೆಲೆಬ್ರಿಟಿಗಳು ಪಾರ್ಟಿಗಳನ್ನು ಎಂಜಾಯ್ ಮಾಡುತ್ತಿದ್ದಾರೆ ಹಾಗೂ ಇನ್ನೂ ಕೆಲವರು ಲಂಚ್ ಮತ್ತು ಡಿನ್ನರ್ ಡೇಟ್ಸ್‌ನಲ್ಲಿ ಕಾಣುತ್ತಾರೆ. ಅದೇ ಸಮಯದಲ್ಲಿ, ಇತ್ತೀಚೆಗೆ ಕರೀನಾ ಕಪೂರ್ (Kareena Kapoor) ತನ್ನ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಮಾಲ್ಡೀವ್ಸ್ ನಿಂದ ಹಿಂದಿರುಗಿದ್ದಾರೆ. ಮನೆಗೆ ಹಿಂದಿರುಗಿದ ನಂತರ, ಅವರು ಸ್ನೇಹಿತರಿಗಾಗಿ ಪಾರ್ಟಿಯನ್ನು ಸಹ ಆಯೋಜಿಸಿದರು. ಅದೇ ಸಮಯದಲ್ಲಿ, ಕರೀನಾ ತಮ್ಮ ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರು ತಿಳಿ ನೀಲಿ ಬಣ್ಣದ ಶಾರ್ಟ್‌ ಫ್ರಾಕ್ ಧರಿಸಿದ್ದರು. ಮೇಕಪ್ ಇಲ್ಲದ, ಕರೀನಾರ ಮುಖ ವಿಚಿತ್ರವಾಗಿ ಕಾಣುತ್ತಿತ್ತು. ಕರೀನಾಳನ್ನು ಹೊರತುಪಡಿಸಿ, ಇತರೆ ಅನೇಕ ಖ್ಯಾತನಾಮರು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸೆಲೆಬ್ರಿಟಿಗಳ ಫೋಟೋಗಳು ಇಲ್ಲಿವೆ  ನೋಡಿ .

PREV
18
ಶಾರ್ಟ್‌ ಡ್ರೆಸ್‌ ನೋ ಮೇಕಪ್‌ ಲುಕ್‌ನಲ್ಲಿ ವಿಚಿತ್ರವಾಗಿ ಕಾಣಿಸುತ್ತಿರುವ  ಬೇಬೊ!

ಕರೀನಾ ಕಪೂರ್ ಸಣ್ಣ ಉಡುಪಿನಲ್ಲಿ ಮತ್ತು ಮೇಕಪ್ ಇಲ್ಲದೆ ಹೊರಗೆ ಕಾಣಿಸಿಕೊಂಡರು. ಮಾಲ್ಡೀವ್ಸ್‌ನಿಂದ ಕರೀನಾ ಹಿಂದಿರುಗಿದ ನಂತರ, ಆಕೆಯ ಚರ್ಮದ ಬಣ್ಣ ಬದಲಾಗಿರುವುದು ಫೋಟೋದಲ್ಲಿ ಗುರುತಿಸಬಹುದು. ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದರು. 

 

28

ಜಾನ್ವಿ ಕಪೂರ್ ಬಾಂದ್ರಾದ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಳು. ಈ ಸಮಯದಲ್ಲಿ, ಜಾನ್ವಿ ಬಿಳಿ ಶಾರ್ಟ್ ಫ್ರಾಕ್ ಧರಿಸಿದ್ದರು. ಇದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದಕ್ಕೆ ಕಾರಣ ಫೋಟೋಗಳಲ್ಲಿ, ಆಕೆಯ ಫ್ರಾಕ್‌ನ ಗುಂಡಿಗಳು ಹಿಂದಿನಿಂದ ಓಪನ್‌ ಆಗಿರುವಂತೆ ಕಾಣಿಸುತ್ತಿದೆ.

 

38

ಮಲೈಕಾ ಅರೋರಾ (Malaika Arora) ಬ್ರಾಂದ್ರಾದ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಳು. ಈ ಸಮಯದಲ್ಲಿ, ಅವರು ಬಿಳಿ ಕ್ರಾಪ್ ಟಾಪ್ ಮತ್ತು ಜಾಕೆಟ್  ಧರಿಸಿದ್ದರು. ಅದರ ಜೊತೆ ಟೋರ್ನ್‌  ಜೀನ್ಸ್ ಪೇರ್‌ ಮಾಡಿಕೊಂಡಿದ ಮಲೈಕಾ ಮ್ಯಾಂಚಿಂಗ್‌ ಮಾಸ್ಕ್‌ (matching mask) ಧರಿಸಿದ್ದರು.


 

48

ಫೇಮಸ್‌ ಕಾಮಿಡಿಯನ್‌ ಭಾರತಿ ಸಿಂಗ್ ಪತಿ ಹರ್ಷ ಲಿಂಬಾಚಿಯಾ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಛಾಯಾಗ್ರಾಹಕರಿಗೆ ಪೋಸ್ ನೀಡುವಾಗ ದಂಪತಿ ಒಬ್ಬರನ್ನೊಬ್ಬರು ಹಗ್‌ ಮಾಡಿದ್ದರು.

ಲಾಕ್‌ಡೌನ್‌ನಲ್ಲಿ ಸೈಫೀನಾ ಮಾಡಿದ್ದೇನು?

 

58

ಪೂಜಾ ಹೆಗ್ಡೆ (Pooja Hege) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರು ಶಾರ್ಟ್ಸ್ ಮತ್ತು ಟಾಪ್ ಧರಿಸಿದ್ದರು. ಇದರ ಮೇಲೆ, ಅವರು ಕಂದು ಬಣ್ಣದ ಜಾಕೆಟ್ ಅನ್ನು ಧರಿಸಿದ್ದು ಕಾಣಬಹುದು. ಈ ಸಮಯದಲ್ಲಿ ಪೂಜಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು.

68

ಮುಂಬರುವ ಶಿಡ್ಡತ್ ಸಿನಿಮಾದ ಸ್ಕ್ರೀನಿಂಗ್‌ ಸಮಯದಲ್ಲಿ  ಲೀಡ್‌ ತಾರೆಗಳಾದ ಸನ್ನಿ ಕೌಶಲ್ ಮತ್ತು ರಾಧಿಕಾ ಮದನ್ ಕ್ಯಾಮೆರಾಮೆನ್ ಮುಂದೆ ಒಬ್ಬರನ್ನೊಬ್ಬರು ಹಗ್‌ ಮಾಡಿ ಪೋಸ್ ನೀಡಿದ್ದರು.

ಕರೀನಾ ಅಲ್ಲ, ಕಂಗನಾ ಸೀತಾ ಪಾತ್ರಮ ಮಾಡುತ್ತಾರಂತೆ!

 

78

ಜಾಹೀರಾತು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ವಾಣಿ ಕಪೂರ್ ಕಾಣಿಸಿಕೊಂಡರು. ಈ ಸಮಯದಲ್ಲಿ ಅವಳು ಬಿಳಿ ಟಾಪ್ ಮತ್ತು ಜೀನ್ಸ್ ಧರಿಸಿದ್ದರು. ಸ್ಟೈಲಿಶ್‌ ಕನ್ನಡಕ ಧರಿಸಿದ ವಾಣಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

88

ಅದಿತಿ ಗೋವಿಟ್ರಿಕರ್ ಬಹಳ ಸಮಯದ ನಂತರ ಮುಂಬೈನಲ್ಲಿ ಕಾಣಿಸಿಕೊಂಡರು. ಅವರು ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಈ ಸಮಯದಲ್ಲಿ ಅವರು ಕ್ಯಾಶುವಲ್ ಡ್ರೆಸ್ ನಲ್ಲಿ ಮತ್ತು ಮೇಕಪ್ ಇಲ್ಲದೆ ಕಾಣಿಸಿಕೊಂಡರು.

click me!

Recommended Stories