'ಲವ್‌ಸ್ಟೋರಿ' ಸಿನಿಮಾ ಮಾಡಿದ್ರು ಇದುವರೆಗೂ ಕಿಸ್ಸಿಂಗ್ ಸೀನ್ ಮಾಡಿಲ್ಲ ಸಾಯಿ ಪಲ್ಲವಿ

First Published | Sep 30, 2021, 5:26 PM IST
  • ಹೆಚ್ಚೆಚ್ಚು ರೊಮ್ಯಾಂಟಿಕ್ ಸಿನಿಮಾದಲ್ಲಿ ನಟನೆ
  • ಆದ್ರೂ ಒಮ್ಮೇನೂ ಕಿಸ್ ಸೀನ್ ಮಾಡಿಲ್ಲ ಎಂದ ಸಾಯಿ ಪಲ್ಲವಿ
  • ಕ್ಯಾಮೆರಾ ಮ್ಯಾನ್ ಹೇಗೋ ಆಂಗಲ್ ತಗೊಂಡು ಎಡ್ಜಸ್ಟ್ ಮಾಡ್ತಾರೆ ಎಂದ ನಟಿ

ಟಾಲಿವುಡ್‌ ಸಿನಿಮಾ ಲವ್ ಸ್ಟೋರಿ ಸಖತ್ ಸೌಂಡ್ ಮಾಡುತ್ತಿದೆ. ನಟನಾಗಿ ನಾಗ ಚೈತನ್ಯಗೆ ಇದು ಸೂಪರ್ ಹಿಟ್ ಸಿನಿಮಾವಾಗಿದ್ದರೆ ಸಾಯಿ ಪಲ್ಲವಿಯ ಡ್ಯಾನ್ಸ್ ನಂಬರ್ ಇಲ್ಲಿಯೂ ಮಿಸ್ ಆಗಿಲ್ಲ.

ನಟಿ ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಒಟ್ಟಿಗೆ ನಟಿಸಿದ ಮೊದಲ ಸಿನಿಮಾ ಇದು. ಲವ್‌ಸ್ಟೋರಿ ಹೆಸರಿನ ರೊಮ್ಯಾಂಟಿಕ್ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

Tap to resize

ಇಷ್ಟೊಂದು ಸೂಪರ್ ಹಿಟ್ ಸಿನಿಮಾದಲ್ಲಿ, ಅದೂ ರೊಮ್ಯಾಂಟಿಕ ಲವ್ ಸ್ಟೋರಿಯಲ್ಲಿ ಕಿಸ್ಸಿಂಗ್ ಸೀನ್ ನೇರವಾಗಿ ಮಾಡಿಲ್ಲ ಎಂದರೆ ನಂಬುತ್ತೀರಾ ? ಆದರೆ ಇದು ಹೌದು. ಈ ಸಿನಿಮಾದಲ್ಲಿ ಡೈರೆಕ್ಟ್ ಕಿಸ್ಸಿಂಗ್ ಸೀನ್ ಶೂಟ್ ಮಾಡಿಲ್ಲ

ಲವ್‌ಸ್ಟೋರಿ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಗಳಿಗೆ ಅನೇಕ ಪ್ರೇಕ್ಷಕರು ಭಾವನಾತ್ಮಕವಾಗಿ ಫಿದಾ ಆಗಿದ್ದಾರೆ. ಈ ಸಿನಿಮಾದಲ್ಲಿ ಹಾಟ್ ಫೇವರೇಟ್ ಕಿಸ್ಸಿಂಗ್ ಸೀನ್‌ಗಳು ವೈರಲ್ ಆಗಿವೆ. ಆದರೆ ಆ ಚುಂಬನಗಳು ನಕಲಿ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ನಾನು ಎಂದಿಗೂ ಚುಂಬಿಸುವ ದೃಶ್ಯಗಳಲ್ಲಿ ನಟಿಸುವುದಿಲ್ಲ. ನಾನು ಅದಕ್ಕೆ ವಿರುದ್ಧವಾಗಿಲ್ಲ. ನನಗೆ ಇಷ್ಟವಿಲ್ಲದ ಯಾವುದೇ ಕೆಲಸಕ್ಕಾಗಿ ಶೇಖರ್ ಕಮ್ಮುಲ ನನಗೆ ಯಾವತ್ತೂ ಬಲವಂತ ಮಾಡಿ ತೊಂದರೆ ಕೊಡುವುದಿಲ್ಲ. ದೃಶ್ಯದಲ್ಲಿ ನಾನು ನಾಗ ಚೈತನ್ಯನನ್ನು ಚುಂಬಿಸಲಿಲ್ಲ ಎಂದಿದ್ದಾರೆ ನಟಿ

ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ನಟಿ ಇದನ್ನು ರಿವೀಲ್ ಮಾಡಿದ್ದಾರೆ. ಏನೇ ಆಗಲಿ ಸಾಯಿ ಪಲ್ಲವಿ ತಮ್ಮ ಎಥಿಕ್ಸ್ ಬಿಟ್ಟು ಕೊಡದೆ ಸಕ್ಸಸ್ ಸಿನಿಮಾ ಕೊಡ್ತಿರೋದನ್ನು ಮಾತ್ರ ಮೆಚ್ಚಲೇಬೇಕು.

Latest Videos

click me!