ಬ್ಯಾಕ್ ಆನ್ ಸೆಟ್: ವರ್ಷಗಳ ಬಳಿಕ ನಟಿಸ್ತಿದ್ದಾರೆ ಕಾಜೊಲ್

Published : Sep 30, 2021, 04:49 PM ISTUpdated : Sep 30, 2021, 04:55 PM IST

ಬಾಲಿವುಡ್ ನಟಿ ಬ್ಯಾಕ್ ಆನ್ ಸೆಟ್ ರಂಗ್ ದೇ ತು ಮೋಹೆ ಗೇರುವಾ ಹಾಡಲ್ಲಿ ಸೂಪರ್ ಹಿಟ್ ಆಗಿದ್ದ ನಟಿ ಈಗ ಮತ್ತೊಂದು ಹಿಟ್ ಸಿನಿಮಾ ಕೊಡ್ತಾರಾ ?  

PREV
17
ಬ್ಯಾಕ್ ಆನ್ ಸೆಟ್: ವರ್ಷಗಳ ಬಳಿಕ ನಟಿಸ್ತಿದ್ದಾರೆ ಕಾಜೊಲ್

90ರ ದಶಕದ ಬಾಲಿವುಡ್‌ನ ಕ್ಯೂಟ್ ನಟಿ ಕಾಜೊಲ್ ಮದುವೆಯಾದ(Marriage) ನಂತರ ನಟನೆಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದರೂ ಯಾವುದೂ ಅಂಥಾ ಹಿಟ್ ಸಿನಿಮಾ ಎನಿಸಲಿಲ್ಲ. ಈಗ ಮತ್ತೆ ಕೆಲವು ವರ್ಷಗಳ ನಂತ್ರ ಬಣ್ಣ ಹಚ್ಚುತ್ತಿದ್ದಾರೆ.

27

2015ರಲ್ಲಿ ರಿಲೀಸ್ ಆದ ದಿಲ್‌ವಾಲೆ ಸಿನಿಮಾ ಸಖತ್ ಸುದ್ದಿಯಾಗಿತ್ತು. ಶಾರೂಖ್‌ಗೆ ಜೋಡಿಯಾದ ಕಾಜೊಲ್ ಈ ಸಿನಿಮಾದ ರಂಗ್ ದೇ ತು ಮೋಹೆ ಗೇರುವಾ ಹಾಡಿನ ಮೂಲಕ ಸಖತ್ತಾಗಿಯೇ ಮಿಂಚಿದ್ದರು. ಹಾಡು, ಸಿನಿಮಾ ಎರಡೂ ಹಿಟ್ ಆಗಿತ್ತು.

37

ಆಮೇಲೆ ನಟಿ 2018ರಲ್ಲಿ ಹೆಲಿಕಾಪ್ಟರ್ ಈಲಾ ಸಿನಿಮಾ ಮಾಡಿದರೂ ಅದು ಸುದ್ದಿಯಾಗಲಿಲ್ಲ. ಮೂರೂವರೆ ಸ್ಟಾರ್‌ಗೆ ತೃಪ್ತಿಪಟ್ಟುಕೊಂಡಿತ್ತು ಆ ಸಿನಿಮಾ. ಕಾಜೊಲ್‌ನನ್ನು(Kajol) ಮತ್ತೆ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು

47

ಈಗ ಕಾಜೊಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಟಿ ಮತ್ತೆ ನಟಿಸುತ್ತಿದ್ದಾರೆ. ಕೆಲಸ ಶುರುವಾಗಿದೆ ಎಂದು ನಟಿ ಖುಷಿಯಿಂದ ತಮ್ಮ ತಂಡದೊಂದಿಗೆ ಫೋಟೋ ಶೇರ್ ಮಾಡಿದ್ದಾರೆ

57

ಆನ್‌ಸೆಟ್, ದೆಹಲಿ, ಮುಂಬೈ, ಕಾಜೊಲ್ ಟೀಂ ಇತ್ಯಾದಿ ಟ್ಯಾಗ್‌ಗಳನ್ನು ಹಾಕಿ ಟೀಂ ಕಾಜೊಲ್ ಫೋಟೋ ಶೇರ್ ಮಾಡಿದ್ದು, ಇದರಲ್ಲಿ ನಟಿ ಫುಲ್ ಸ್ಮೈಲ್‌ನಲ್ಲಿ ಶೈನ್ ಆಗಿದ್ದಾರೆ

67
Kajol

ಆರು ಜನರಿರುವ ಬ್ಲಾಕ್ & ವೈಟ್ ಫೋಟೋದಲ್ಲಿರುವ ಇತರರ ಬಗ್ಗೆ ಯಾವುದೇ ಟ್ಯಾಗ್ ಮಾಡಿಲ್ಲ. ಎಲ್ಲರೂ ಒಂದೇ ಕಡೆ ನೋಡುತ್ತಾ ನಗುವುದು ಫೋಟೋದಲ್ಲಿ ಕಾಣಬಹುದು

77
Kajol

ನಟಿ ಕಲರ್‌ ಫೋಟೋ ಶೇರ್ ಮಾಡಿದ್ದು ದೃಷ್ಟಿ ತಾಕದಿರಲಿ, ಕೆಲಸ ಶುರುವಾಗಿದೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅದೇ ಸಂದರ್ಭದ ಇನ್ನೊಂದು ಫೋಟೋವನ್ನು ಟೀಂ ಕಾಜೊಲ್ ಶೇರ್ ಮಾಡಿದೆ

click me!

Recommended Stories