ಕರೀನಾ ಕಪೂರ್ ಬರೆದಿರುವ ಪುಸ್ತಕದಲ್ಲಿ ಅವರ ಎರಡನೇಯ ಮಗ ಜಹಾಂಗೀರ್ ಅಲಿ ಖಾನ್ ಬಗ್ಗೆ ಉಲ್ಲೇಖಿಸಲಾಗಿದೆ. ಮಗನ ಹೆಸರು ಬಹಿರಂಗಗೊಂಡ ನಂತರ ಜನರು ಕರೀನಾ-ಸೈಫ್ ದಂಪತಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಸ್ವಂತಃ ಕರೀನಾ ಅವರೇ ಮಗನ ಹೆಸರು ಜೆಹ್ ಅಲಿ ಖಾನ್ ಎಂದು ಹೇಳಿದರು.
ಮಗ ಜೆಹ್ ಹುಟ್ಟು ಹಬ್ಬದಂದು ಕರೀನಾ ಕಪೂರ್ Instagram ನಲ್ಲಿ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಜೆಹ್ ಹಿರಿಯ ಸಹೋದರ ತೈಮೂರ್ ಹಿಂದೆ ಅಂಬೆಗಾಲಿನಲ್ಲಿ ನಡೆಯುತ್ತಿರುವುದು ಕಂಡು ಬರುತ್ತದೆ. ಇಬ್ಬರೂ ಸಹೋದರರ ಹಿಂದಿನಿಂದ ಫೋಟೋ ಕ್ಲಿಕ್ ಮಾಡಲಾಗಿದೆ.
'ಅಣ್ಣ, ನನಗಾಗಿ ಕಾಯುತ್ತಿರು. ನನಗೆ ಇಂದು ಒಂದು ವರ್ಷ, ನಾವು ಒಟ್ಟಿಗೆ ಜಗತ್ತನ್ನು ಸುತ್ತೋಣ. ಅಮ್ಮ ಕೂಡ ನಮ್ಮ ಹಿಂದೆ ಎಲ್ಲ ಕಡೆ ಬರುತ್ತಾರೆ. ಜನ್ಮದಿನದ ಶುಭಾಶಯಗಳು ಜೇ ಬಾಬಾ ಮೈ ಲೈಫ್' ಫೋಟೋಗೆ ಕರೀನಾ ಕ್ಯಾಪ್ಷನ್ ನೀಡಿದ್ದಾರೆ.
ನಂತರ ಕರೀನಾ ಕಪೂರ್ ಪತಿ ಸೈಫ್ ಜೊತೆ ಜೆಹ್ ಅವರ ಇನ್ನೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಜೆಹ್ ತನ್ನ ತಂದೆಯೊಂದಿಗೆ ಸೋಫಾದಲ್ಲಿ ಕುಳಿತು, ಗಿಡವನ್ನು ಹಿಡಿದು ಕೊಂಡಿರುವುದು ಕಂಡುಬರುತ್ತದೆ. ಅಬ್ಬಾ ಸಹ ಫಾಲೋ ಮಾಡುತ್ತಾರೆ. ಐ ಲವ್ ಯೂ ಎಂದು ಕರೀನಾ ಕಪೂರ್ ಫೋಟೋ ಜೊತೆ ಬರೆದಿದ್ದಾರೆ.
ಇನ್ನೊಂದೆಡೆ, ಕರಿಷ್ಮಾ ಕಪೂರ್ ಕೂಡ ಜೇಹ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಆಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಜೆಹ್ ದೊಡ್ಡಮ್ಮನ ಮಡಿಲಲ್ಲಿ ನಿಂತಿರುವುದು ಕಂಡುಬರುತ್ತದೆ. 'ಜೆಹ್ ಬಾಬಾನಿಗೆ ಮೊದಲ ಜನ್ಮದಿನದ ಶುಭಾಶಯಗಳು. ತುಂಬಾ ಹೆಚ್ಚು ಪ್ರೀತಿಸುತ್ತೇನೆ. ಅವರ್ ಬಂಡಲ್ ಆಫ್ ಜಾಯ್' ಎಂದು ಕರಿಷ್ಮಾ ಕ್ಯಾಪ್ಷನ್ ನೀಡಿದ್ದಾರೆ.
ಕರೀನಾ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನ್ನ ಇಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್ (Taimur Ali Khan) ಮತ್ತು ಜೆಹ್ ಅಲಿ ಖಾನ್ ಬಗ್ಗೆ ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಇಬ್ಬರು ಪುತ್ರರಲ್ಲಿ ಯಾರು ಹೆಚ್ಚು ಆಹಾರವನ್ನು ಚೆಲ್ಲುತ್ತಾರೆ ಮತ್ತು ಯಾರು ಹೆಚ್ಚು ತುಂಟ ಎಂದು ಕರೀನಾ ಹೇಳಿದ್ದಾರೆ.
ತೈಮೂರ್ ಮತ್ತು ಜೆಹ್ ಅವರ ಊಟದ ಬಗ್ಗೆ ಮಾತನಾಡಿದ ಕರೀನಾ ಕಪೂರ್, ಜೆಹ್ ಈಗಷ್ಟೇ ಘನ ಆಹಾರವನ್ನು ತಿನ್ನಲು ಪ್ರಾರಂಭಿಸಿದ್ದಾನೆ ಮತ್ತು ಅವನು ಯಾವಾಗ ತಿಂದರೂ ಅದನ್ನು ತನ್ನ ಮೇಲೆ ಎಸೆಯುತ್ತಾನೆ ಎಂದು ಹೇಳಿದರು. ಆತನಿಗೆ ತಲೆಯಿಂದ ಕಾಲಿನವರೆಗೆ ಆಹಾರವನ್ನು ಬೀಳಿಸುವ ಅಭ್ಯಾಸ. ಜೆಹ್ ಆಹಾರದ ವಿಷಯದಲ್ಲಿ ಸ್ವಲ್ಪ ತುಂಟ ಎಂದಿದ್ದಾರೆ.
ಜೇಹ್ ಕರೀನಾರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದಲ್ಲಿ ಜೆಹ್ ಕೂಡ ಕೆಲಸ ಮಾಡಿದ್ದಾನಂತೆ. ವಾಸ್ತವವಾಗಿ, ಚಿತ್ರದ ಹಾಡಿನಲ್ಲಿ ಜೆಹ್ ಕಾಣಿಸಿಕೊಳ್ಳಲಿದ್ದಾರೆ ಎಂದು ಕರೀನಾ ಹೇಳಿದ್ದಾರೆ. ನನ್ನ ಮಗ ಪ್ರಾಯೋಗಿಕವಾಗಿ ಚಿತ್ರದಲ್ಲಿ ಇದ್ದಾನೆ. ಅವನು ಆಮೀರ್ ಮತ್ತು ನನ್ನೊಂದಿಗೆ ರೊಮ್ಯಾಂಟಿಕ್ ಹಾಡಿನಲ್ಲಿದ್ದಾನೆ. ತಮ್ಮ ಪ್ರೆಗ್ನೆನ್ಸಿಯಲ್ಲಿಯೇ ಬೇಬೋ ಶೂಟಿಂಗ್ ಮಾಡಿದ್ದರು.
ಜೆಹ್ ಹುಟ್ಟಿದಾಗಿನಿಂದ, ಅವನ ಕ್ಯುಟ್‌ನೆಸ್ ಹಿರಿಯ ಸಹೋದರ ತೈಮೂರ್‌ಗೆ ಹೋಲಿಸಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಜೆಹ್ ತುಂಬಾ ಮುದ್ದಾಗಿದ್ದಾನೆ, ಆದರೆ ತೈಮೂರ್ ಅದಕ್ಕಿಂತ ಹೆಚ್ಚು ಮುದ್ದಾಗಿದ್ದಾನೆ ಎಂದು ಹೇಳುತ್ತಾರೆ.
ಜೆಹ್ ಅಲಿ ಖಾನ್ ಆಗಾಗ್ಗೆ ಪೋಷಕರೊಂದಿಗೆ ಕಾಣಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಈಗ ಕ್ಯಾಮೆರಾ ನೋಡಿಯೂ ನಗಲು ಶುರು ಮಾಡಿದ್ದಾನೆ. ಮಾಧ್ಯಮ ಛಾಯಾಗ್ರಾಹಕರು ಯಾವಾಗಲೂ ಜೆಹ್ ಫೋಟೋಗಳನ್ನು ಕ್ಲಿಕ್ ಮಾಡಲು ಕಾಯುತ್ತಿರುತ್ತಾರೆ.