Bollywood Girls' Party: ಗರ್ಲ್ ಗ್ಯಾಂಗ್ ಜೊತೆ ಕರೀನಾ ಕಪೂರ್ ಲೇಟ್ ನೈಟ್ ಪಾರ್ಟಿ!

First Published | Dec 8, 2021, 7:48 PM IST

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್  (Vicky Kaushal)  ಮದುವೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕರೀನಾ ಕಪೂರ್ ಖಾನ್ (Kareena Kapoor)ತನ್ನ ಗರ್ಲ್ ಗ್ಯಾಂಗ್‌ನೊಂದಿಗೆ ತಡರಾತ್ರಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಪಾರ್ಟಿಯ ಅವರ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಪಾರ್ಟಿಯನ್ನು ಅನಿಲ್ ಕಪೂರ್  (Anil Kapoor) ಅವರ ಕಿರಿಯ ಮಗಳು ರಿಯಾ ಕಪೂರ್ (Rhea Kapoor) ಅವರ ಮನೆಯಲ್ಲಿ ಆಯೋಜಿಸಿದ್ದರು. ರಿಯಾ ಕಪೂರ್ ಮನೆಯಲ್ಲಿ ನಡೆದ ಪಾರ್ಟಿಯ ಕೆಲವು ಫೋಟೋಗಳು ಇಲ್ಲಿವೆ.

ಮಲೈಕಾ ಅರೋರಾ (Malaika Arora), ಕರಿಷ್ಮಾ ಕಪೂರ್  (Karisma Kapoor), ಅಮೃತಾ ಅರೋರಾ (Amrita Arora), ಮಸಾಬಾ ಗುಪ್ತಾ  (Masaba Gupta) ಮತ್ತು ಇತರರು ಈ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿರುವುದು ಕಾಣಬಹುದು.

ಪಾರ್ಟಿಯಲ್ಲಿ, ಕರೀನಾ ಕಪೂರ್ ಅವರ ಬೆಸ್ಟ್ ಫ್ರೆಂಡ್ಸ್‌ ಆದ ಅಮೃತಾ ಅರೋರಾ ಮತ್ತು ಮಲೈಕಾ ಅರೋರಾ ಅವರ ಜೊತೆ ಸಾಕಷ್ಟು ಮಜ ಮಾಡಿದರು. ಅಷ್ಟೇ ಅಲ್ಲ, ಮೂವರು ಒಟ್ಟಿಗೆ ಪೋಸ್ ಕೂಡ ನೀಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Tap to resize

ಕರೀನಾ ಕಪೂರ್  ರಿಯಾ ಕಪೂರ್ ಜೊತೆ ಕೂಡ ಪೋಸ್ ಕೊಟ್ಟಿದ್ದಾರೆ. ರಿಯಾ ಚಲನಚಿತ್ರ ನಿರ್ಮಾಪಕಿ ಮತ್ತು ಅವರು ಕರೀನಾ ಜೊತೆ ವೀರೆ ದಿ ವೆಡ್ಡಿಂಗ್ ಚಿತ್ರವನ್ನು ಮಾಡಿದ್ದಾರೆ ಹಾಗೂ ಇಬ್ಬರೂ ಆತ್ಮೀಯ ಗೆಳೆತಿಯರು.

ಕರಿಷ್ಮಾ ಕಪೂರ್ ಮತ್ತು ನೀನಾ ಗುಪ್ತಾರ ಪುತ್ರಿ ಮಸಾಬಾ ಗುಪ್ತಾ ಕೂಡ ಫನ್‌ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಖತ್ ಎಂಜಾಯ್ ಮಾಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.

ತಡರಾತ್ರಿ ಮಲೈಕಾ ಅರೋರಾ ಪಾರ್ಟಿಯಲ್ಲಿ ಭಾಗವಹಿಸಿಲು ರಿಯಾ ಕಪೂರ್ ಅವರ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ, ಅವರು ಕಪ್ಪು ಪಟ್ಟಿಗಳನ್ನು ಹೊಂದಿರುವ ಬಿಳಿ ಬಣ್ಣದ ಡ್ರೆಸ್‌ ಧರಿಸಿದ್ದರು.

ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಲೈಕಾ ಅರೋರಾ ಕರೀನಾ ಕಪೂರ್ ಅವರ ಜೊತೆ  ಕಾರಿನಲ್ಲಿ ಆಗಮಿಸಿದ್ದರು. ಮುಂದಿನ ಸೀಟಿನಲ್ಲಿ ಕರೀನಾ ಹಾಗೂ ಹಿಂಬದಿ ಸೀಟಿನಲ್ಲಿ ಮಲೈಕಾ ಕುಳಿತಿರುವುದನ್ನು ಫೋಟೋದಲ್ಲಿ ಕಾಣಬಹುದು.

ಅಷ್ಟೇ ಅಲ್ಲ ಕರಿಷ್ಮಾ ಕಪೂರ್ ಕೂಡ ಸಹೋದರಿ ಕರೀನಾ ಕಪೂರ್ ಖಾನ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ  ವೈರಲ್ ಆಗುತ್ತಿದ್ದು, ಅದರಲ್ಲಿ ಇಬ್ಬರೂ ಸಹೋದರಿಯರು ಏನೋ ಹೇಳಿ ನಗುತ್ತಿದ್ದಾರೆ.

ರಿಯಾ ಕಪೂರ್‌ ಪಾರ್ಟಿಗೆ ಕರೀನಾ ಕಪೂರ್ ತುಂಬಾ ಸ್ಟೈಲಿಶ್ ಲುಕ್‌ನಲ್ಲಿ ಆಗಮಿಸಿದ್ದರು. ಅವರು ನೀಲಿ ಬಣ್ಣದ ಔಟ್‌ಫಿಟ್‌ ಧರಿಸಿದ್ದರು. ಅದೇ ಸಮಯದಲ್ಲಿ, ಕರಿಷ್ಮಾ ಕಪೂರ್ ಗ್ರೀನ್‌ ಕಲರ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.

Latest Videos

click me!