KGF 2 Updates: ಅಧೀರ ಪಾತ್ರದ ಡಬ್ಬಿಂಗ್ ಮುಗಿಸಿದ ಸಂಜಯ್ ದತ್

First Published | Dec 8, 2021, 11:54 AM IST
  • KGF 2: ಡಬ್ಬಿಂಗ್ ಮುಗಿಸಿದ ಸಂಜಯ್ ದತ್
  • ಅಧೀರ ಪಾತ್ರದ ಡಬ್ಬಿಂಗ್ ಕಂಪ್ಲೀಟ್

ನಟ ಸಂಜಯ್ ದತ್ ‘ಕೆಜಿಎಫ್ 2’ ಚಿತ್ರದಲ್ಲಿ ತಾವು ನಿರ್ವಹಿಸಿದ ಅಧೀರ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಕೆಲಸ ಮುಗಿಸಿರುವ ಸಂಭ್ರಮದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಂಜಯ್ ದತ್ ಜತೆಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಂಡಿದ್ದಾರೆ.

‘ಅಧೀರಾ ಈಸ್ ಬ್ಯಾಕ್. ಕೆಜಿಎಫ್ 2 ಚಿತ್ರದ ಅಧೀರನ ಪಾತ್ರಕ್ಕೆ ಡಬ್ಬಿಂಗ್ ಮುಗಿದಿದೆ. ದೊಡ್ಡ ಪರದೆ ಮೇಲೆ ಮುಂದಿನ ವರ್ಷ ಏಪ್ರಿಲ್ 24ಕ್ಕೆ ಸಿಗೋಣ’ ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದು, ಯಶ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ.

Tap to resize

ಅತ್ತ ನಟ ಯಶ್ ಕೂಡ ಹಿಂದಿಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ಕಿರಗಂದೂರು ನಿರ್ಮಾಣದ, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಏ.24ರಂದು ಏಕಕಾಲದಲ್ಲಿ ಐದು ಭಾಷೆಗಳಲ್ಲೂ ತೆರೆಗೆ ಬರುತ್ತಿದೆ.

ಭಾರತೀಯ ಚಿತ್ರರಂಗ ಕುತೂಹಲದಿಂದ ಕಾಯುತ್ತಿರುವ ‘ಕೆಜಿಎಫ್​​ 2’ ಸಿನಿಮಾ ಯಾವಾಗ ರಿಲೀಸ್‌ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು ಈ ಬಗ್ಗೆ ಚಿತ್ರತಂಡ ಸಿನಿ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿದ್ದು, 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದೆ. 

ಈ ಹಿಂದೆ 2021ರ ಜುಲೈ 16 ಕ್ಕೆ ಕೆಜಿಎಫ್ 2 ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಕೊರೋನಾದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಬಹುನಿರೀಕ್ಷಿತ ಕೆಜಿಎಫ್‌ 2 ಚಿತ್ರ ರಿಲೀಸ್ ಆಗಲಿದೆ. 

ಸದ್ಯ ಕೆಜಿಎಫ್‌ 2 ಸಿನಿಮಾದ ಪ್ಯಾಚ್ ವರ್ಕ್ ಕೆಲಸ ಬಾಕಿ ಇದೆ. ಬೆಂಗಳೂರಿನ ನೈಸ್ ರೋಡ್‌ನಲ್ಲಿ ಮೂರು ದಿನದ ಶೂಟಿಂಗ್ ಕೆಲಸ ಬಾಕಿ‌ ಇದೆ. ಅಲ್ಲದೇ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಅತ್ತ ಸಲಾರ್ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆನ್ನಲಾಗಿದೆ. 

Latest Videos

click me!