ಬಾಲಿವುಡ್‌ ಕ್ವೀನ್‌ ಖಾತೆಗೆ ಮತ್ತೊಂದು ಫ್ಲಾಫ್‌ ಸಿನಿಮಾ: ಪ್ರೇಕ್ಷಕರಿಲ್ಲದೇ ತೇಜಸ್‌ನ ಹಲವು ಪ್ರದರ್ಶನಗಳು ರದ್ದು!

Published : Nov 02, 2023, 05:25 PM IST

ಕಂಗನಾ ರಣಾವತ್ (Kangana Ranaut) ಅಭಿನಯದ ವೈಮಾನಿಕ ಆಕ್ಷನ್ ಚಿತ್ರ ತೇಜಸ್ (Tejas) ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಬೆಳವಣಿಗೆಯ ಯಾವುದೇ ಲಕ್ಷಣಗಳಿಲ್ಲ. ತೇಜಸ್' ಪ್ರತಿದಿನ ಗಲ್ಲಾಪೆಟ್ಟಿಗೆಯಲ್ಲಿ ನೆಲ ಕಚ್ಚುತ್ತಲೇ ಇದೆ. ಕಂಗನಾ ರಣಾವತ್ ಅವರ ತೇಜಸ್ ನವೆಂಬರ್ 1 ರಂದು ಕೇವಲ 5 ಲಕ್ಷ ಗಳಿಸಿ ಬಾಕ್ಸ್ ಆಫೀಸ್ ದುರಂತ ಎಂದು ಸಾಬೀತಾಗಿದೆ.

PREV
17
ಬಾಲಿವುಡ್‌ ಕ್ವೀನ್‌ ಖಾತೆಗೆ ಮತ್ತೊಂದು ಫ್ಲಾಫ್‌ ಸಿನಿಮಾ: ಪ್ರೇಕ್ಷಕರಿಲ್ಲದೇ ತೇಜಸ್‌ನ ಹಲವು ಪ್ರದರ್ಶನಗಳು ರದ್ದು!

ಕಂಗನಾ ರಣಾವತ್ ವಾಯುಪಡೆಯ ಅಧಿಕಾರಿ ತೇಜಸ್ ಗಿಲ್ ಪಾತ್ರವನ್ನು ನಿರ್ವಹಿಸಿರುವ  ಸರ್ವೇಶ್ ಮೇವಾರ ನಿರ್ದೇಶನದ ತೇಜಸ್ ಚಿತ್ರವು  ಅಕ್ಟೋಬರ್ 27 ರಂದು  ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

27

ಚಿತ್ರದ ಪ್ರಥಮ ಪ್ರದರ್ಶನದ ನಂತರ ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ. 'ತೇಜಸ್' ನವೆಂಬರ್ 1ರ ಬುಧವಾರದಂದು ಸುಮಾರು 5 ಲಕ್ಷ ರೂ. ಗಳಿಸಿದೆ. ಹಿಂದಿನ ದಿನದ ಕಲೆಕ್ಷನ್‌ 45 ಲಕ್ಷ ರೂ.ಗೆ ಹೋಲಿಸಿದರೆ ಗಣನೀಯ ಇಳಿಕೆಯಾಗಿದೆ. ಇದರಿಂದಾಗಿ ಭಾರತದ ಒಟ್ಟು ಬಾಕ್ಸ್ ಆಫೀಸ್ ಗಳಿಕೆಯು ಪ್ರಸ್ತುತ 5.15 ಕೋಟಿ ರೂ ಎಂದು ವರದಿಯಾಗಿದೆ. 

37

ವಿವಿಧ ಕಡೆ ಭಾರೀ ಪ್ರಚಾರಗಳ ನಂತರ ತೇಜಸ್‌ ಸಿನಿಮಾ ಭಾರೀ ನೀರಿಕ್ಷೆಯನ್ನು ಹುಟ್ಟು ಹಾಕಿತ್ತು. ಆದರೆ ಕಂಗನಾ ವಾರ ಈ ಸಿನಿಮಾ ಜನರನ್ನು ಸೆಳೆಯುವಲ್ಲಿ ವಿಫಲವಾಗಿದ್ದು ಕಂಗನಾ ಅವರ ಖಾತೆಗೆ ಇನ್ನೊಂದು ಫ್ಲಾಪ್‌ ಸಿನಿಮಾ ಸೇರಿಕೊಂಡಿದೆ,

47

ಸೋಮವಾರ, ಪ್ರೇಕ್ಷಕರಿಲ್ಲದ ಕಾರಣ ತೇಜಸ್‌ನ ಹಲವು ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ತೇಜಸ್‌ನ ಗಲ್ಲಾಪೆಟ್ಟಿಗೆಯ ಪ್ರದರ್ಶನವು ನಟಿಯ ಕೊನೆಯ ನಾಲ್ಕು ಚಲನಚಿತ್ರಗಳಾದ  ಧಕಡ್, ತಲೈವಿ, ಪಂಗಾ ಮತ್ತು ಜಡ್ಜ್‌ಮೆಂಟಲ್ ಹೈ ಕ್ಯಾ ನಂತೆ ಸಂಪೂರ್ಣವಾಗಿ ನೆಲ ಕಚ್ಚಿದೆ. 

57

ಅದಕ್ಕೂ ಮೊದಲು, 2019 ರಲ್ಲಿ ಬಿಡುಗಡೆಯಾದ ಮಣಿಕರ್ಣಿಕಾ ಬಾಕ್ಸ್ ಆಫೀಸ್‌ನಲ್ಲಿ ಸರಾಸರಿ ವ್ಯಾಪಾರ ಮಾಡಿತು. ಆದರೆ ಅದು ಕೂಡ  ರಂಗೂನ್, ಸಿಮ್ರಾನ್ ಮತ್ತು ಕತ್ತಿ ಬಟ್ಟಿ ಸೇರಿದಂತೆ ನಾಲ್ಕು ನೇರ ಫ್ಲಾಪ್‌ಗಳನ್ನು ಅನುಸರಿಸಿತ್ತು.

67

ತೇಜಸ್‌ನ ವಿನಾಶಕಾರಿ ಗಲ್ಲಾಪೆಟ್ಟಿಗೆಯ ಪ್ರದರ್ಶನದೊಂದಿಗೆ, ಕಂಗನಾ ಅವರ ಅಭಿಮಾನಿಗಳು ಈಗ ಅವರ ಮುಂಬರುವ ರಾಜಕೀಯ ನಾಟಕ ಎಮರ್ಜೆನ್ಸಿ ಮೇಲೆ ತಮ್ಮ ನಂಬಿಕೆಯನ್ನು ಇರಿಸುತ್ತಿದ್ದಾರೆ. ಇದು 2024 ರಲ್ಲಿ ಬಿಡುಗಡೆಯಾಗಲಿದೆ.

77

ಸರ್ವೇಶ್ ಮೇವಾರ ಚಿತ್ರಕಥೆ ಬರೆದು  ತೇಜಸ್ ಚಿತ್ರವನ್ನು ನಿರ್ದೇಶಿಸಿದರೆ, ರೋನಿ ಸ್ಕ್ರೂವಾಲಾ ನಿರ್ಮಾಣವನ್ನು ನಿಭಾಯಿಸಿದರು. ಕಂಗನಾ ಜೊತೆ ಅನ್ಶುಲ್ ಚೌಹಾನ್, ವರುಣ್ ಮಿತ್ರ, ಆಶಿಶ್ ವಿದ್ಯಾರ್ಥಿ, ವಿಶಾಕ್ ನಾಯರ್, ಕಶ್ಯಪ್ ಶಂಗಾರಿ, ಸುನೀತ್ ಟಂಡನ್, ರಿಯೊ ಕಪಾಡಿಯಾ, ಮೋಹನ್ ಅಗಾಶೆ ಮತ್ತು ಮುಷ್ತಾಕ್ ಕಾಕ್ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories