ಸಿದ್ಧಾಂತ್ ಚತುರ್ವೇದಿ ನವ್ಯಾ ನವೇಲಿ ನಂದಾ ಸಂಬಂಧ ಖಚಿತ? ಡಿನ್ನರ್‌ ಡೇಟ್‌ ವೀಡಿಯೋ ವೈರಲ್‌!

First Published | Oct 31, 2023, 5:08 PM IST

ಕೆಲವು ಕಾಲದಿಂದ ನಟ ಸಿದ್ಧಾಂತ್ ಚತುರ್ವೇದಿ (Siddhanth Chaturvedi) ಮತ್ತು ಅಮಿತಾಬ್‌ ಬಚ್ಚನ್‌ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ನಡುವಿನ  ಸಂಬಂಧದ ಬಗ್ಗೆ  ವದಂತಿಗಳು ಸುತ್ತುತ್ತಿವೆ, ಆದರೂ ಇಬ್ಬರೂ ಈ ವಿಷಯದಲ್ಲಿ ಮೌನವಾಗಿ ಉಳಿದಿದ್ದಾರೆ. ಆದರೆ ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಮತ್ತೆ ಇವರ ಆಫೇರ್‌ ವಿಷಯ ಮುನ್ನಲೆಗೆ ಬಂದಿದೆ. 

ಸಿದ್ಧಾಂತ್ ಚತುರ್ವೇದಿ ಮತ್ತು ನವ್ಯಾ ನವೇಲಿ ಅವರ ಡಿನ್ನರ್‌ ಡೇಟ್‌ನ ವೀಡಿಯೋವೊಂದು ವೈರಲ್‌ ಆಗಿದ್ದು ಇಬ್ಬರ ಡೇಟಿಂಗ್ ಊಹಾಪೋಹಗಳಿಗೆ ತುಪ್ಪ ಸುರಿದ ಹಾಗಿದೆ. 

ಅಮಿತಾಬ್‌ ಬಚ್ಚನ್‌ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಮತ್ತು ನಟ ಸಿದ್ಧಾಂತ್‌ ಚತುರ್ವೇದಿ ಒಟ್ಟಿಗೆ ಡಿನ್ನರ್‌ಮುಗಿಸಿ ಹೋರ ಬರುವಾಗ ಕ್ಯಾಮಾರಾಗೆ ಸೆರೆ ಸಿಕ್ಕಿದ್ದಾರೆ.

Tap to resize

ನವ್ಯಾ ಅವರ ತಾಯಿ ಶ್ವೇತಾ ಬಚ್ಚನ್ ಕೂಡ ಈ ರೂಮರ್ಡ್‌ ಕಪಲ್‌ ಜೊತೆಯಲ್ಲಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ಅವರ ಜೊತೆಯಲ್ಲಿ ಗೆಹ್ರೈಯಾನ್‌ ಚಿತ್ರನಿರ್ಮಾಪಕ ಶಕುನ್ ಬಾತ್ರಾ ಕೂಡ ಇದ್ದರು

ಸಿದ್ದಾಂತ್ ಚತುರ್ವೇದಿ ಮತ್ತು ನವ್ಯಾ ನವೇಲಿ ನಂದಾ ಕುತೂಹಲ ಹುಟ್ಟಿಸಿದ್ದು ಇದೇ ಮೊದಲಲ್ಲ. ಏಪ್ರಿಲ್‌ನಲ್ಲಿ, ಅವರು ವಿಮಾನ ನಿಲ್ದಾಣದಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ವಿಹಾರದ ಸಮಯದಲ್ಲಿ, ಜೋಡಿಯು ಬಿಳಿ ಬಟ್ಟೆಯನ್ನು ಟ್ವಿನ್ನಿಂಗ್ ಮಾಡಿಕೊಂಡಿದ್ದರು.

ಇಷ್ಟೇ ಅಲ್ಲದೆ, ಇಬ್ಬರು  ಪರಸ್ಪರರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಮಾಡುವುದು, ಇನ್ನಷ್ಟು ಇವರ ನಡುವಿನ ಸಂಬಂಧದ ಊಹಾಪೋಹಗಳಿಗೆ ಕಾರಣವಾಗಿದೆ.

ಸಿದ್ಧಾಂತ್ ಚತುರ್ವೇದಿ ಕೊನೆಯಾದಾಗಿ ಫೋನ್ ಭೂತ್‌ನಲ್ಲಿ ಕತ್ರಿನಾ ಕೈಫ್ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ನಟಿಸಿದ್ದಾರೆ.

ಮುಂಬರುವ ಯೋಜನೆಗಳಲ್ಲಿ ಜೋಯಾ ಅಖ್ತರ್ ಅವರ ಖೋ ಖೋ ಗಯೇ ಹಮ್ ಕಹಾನ್ ಸೇರಿದೆ, ಇದರಲ್ಲಿ ಅವರು  ಅನನ್ಯಾ ಪಾಂಡೆ ಮತ್ತು ಆದರ್ಶ್ ಗೌರವ್ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಾರೆ. ಮಾಳವಿಕಾ ಮೋಹನನ್ ಜೊತೆಗೆ ಅವರು ಯುದ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!