ಹೃತಿಕ್ ರೋಷನ್ ಜೊತೆ ಗಲಾಟೆಗೂ ಮುನ್ನ ಆಮೀರ್ ಖಾನ್ ನನ್ನ ಬೆಸ್ಸ್‌ ಫ್ರೆಂಡ್‌ ಆಗಿದ್ದರು: ಕಂಗನಾ

Published : Apr 19, 2023, 05:56 PM IST

ಬಾಲಿವುಡ್ ನಟಿ ಕಂಗನಾ ರಣಾವತ್  (Kangana Ranaut) ಒಂದಲ್ಲ ಒಂದು ಕಾರಣಕ್ಕೆ ಹೆಡ್ ಲೈನ್ಸ್ ನಲ್ಲಿ ಇರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ಆಮೀರ್ ಖಾನ್ (Aamir Khan)  ಅವರನ್ನು ಟಾರ್ಗೆಟ್‌ ಮಾಡಿದ್ದಾರೆ. ಇದರೊಂದಿಗೆ ಹೃತಿಕ್ ರೋಷನ್‌ನಿಂದಾಗಿ (Hrithik Roshan) ತಮ್ಮ ಮತ್ತು ಆಮೀರ್ ಸ್ನೇಹ ಕೊನೆಗೊಂಡಿತು ಎಂದು ಅವರು ಹೇಳಿದ್ದಾರೆ. 

PREV
18
ಹೃತಿಕ್ ರೋಷನ್ ಜೊತೆ ಗಲಾಟೆಗೂ  ಮುನ್ನ ಆಮೀರ್ ಖಾನ್ ನನ್ನ ಬೆಸ್ಸ್‌ ಫ್ರೆಂಡ್‌ ಆಗಿದ್ದರು: ಕಂಗನಾ

ಕಂಗನಾ ರಣಾವತ್  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ತಾನು ಮತ್ತು ಆಮೀರ್ ಖಾನ್ ಉತ್ತಮ ಸ್ನೇಹಿತರಾಗಿದ್ದ ಸಮಯವಿತ್ತ ಆದರೆ ಹೃತಿಕ್ ರೋಷನ್ ಜೊತೆಗಿನ ಕಾನೂನು ಹೋರಾಟದ ನಂತರ ಅವರ ಸ್ನೇಹ ಕೊನೆಗೊಂಡಿತು ಎಂದು ಹೇಳಿದ್ದಾರೆ.

28

ಕಂಗನಾ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿರುವ ಥ್ರೋಬ್ಯಾಕ್ ವೀಡಿಯೊದಲ್ಲಿ, ಟಿವಿ ಶೋ ಸತ್ಯಮೇವ ಜಯತೆಯಲ್ಲಿ ಆಮೀರ್ ಖಾನ್ ಎದುರು ಕಾಣಿಸಿಕೊಂಡಿದ್ದರು. ಈ ಥ್ರೋಬ್ಯಾಕ್ ವಿಡಿಯೋದಲ್ಲಿ ಕಂಗನಾ ಐಟಂ ಸಾಂಗ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ. 

38

ವಿಡಿಯೋವನ್ನು ಹಂಚಿಕೊಂಡಿರುವ ಕಂಗನಾ, 'ಆಮೀರ್ ಸರ್ ನನ್ನ ಆತ್ಮೀಯ ಸ್ನೇಹಿತರಾಗಿದ್ದ ಆ ದಿನಗಳು ನನಗೂ ಕೆಲವೊಮ್ಮೆ ನೆನಪಾಗುತ್ತವೆ. ಆ ದಿನಗಳು ಎಲ್ಲಿ ಹೋದವೋ ಗೊತ್ತಿಲ್ಲ. ಎಂದು ಕಂಗನಾ ಬರೆದಿದ್ದಾರೆ.

48

'ಒಂದು ವಿಷಯ ನಿಜ, ಅವರು ಯಾವಾಗಲೂ ನನಗೆ ಮಾರ್ಗದರ್ಶನ ನೀಡುತ್ತಿದ್ದರು ಮತ್ತು ನನ್ನ ಕೆಲಸವನ್ನು ಮೆಚ್ಚುತ್ತಿದ್ದರು. ಸೂಕ್ತ ವಿಷಯಗಳನ್ನು ಆಯ್ಕೆ ಮಾಡಲು ಸಹಾಯ ಮಾಡಿದರು, ಆದರೆ ಹೃತಿಕ್ ರೋಷನ್ ನನ್ನ ವಿರುದ್ಧ ಕಾನೂನು ಮೊಕದ್ದಮೆ ಹೂಡುವವರೆಗೆ ಮಾತ್ರ. ಆದರ ನಂತರ ಅವರು ತನ್ನ ನಿಷ್ಠೆಯನ್ನು ಸ್ಪಷ್ಟಪಡಿಸಿದರು. ಇದು ಒಬ್ಬ ಮಹಿಳೆಯ ವಿರುದ್ಧ ಇಡೀ ಉದ್ಯಮದ ನಿಲುವನ್ನು ಪ್ರತಿನಿಧಿಸುತ್ತದೆ, ಎಂದೂ ಹೇಳಿದ್ದಾರೆ ಬಾಲಿವುಡ್ ಕ್ವೀನ್.

58

ಕಂಗನಾ ಮತ್ತು ಹೃತಿಕ್ ಜಗಳ ಸಖತ್‌ ವೈರಲ್‌ ಆಗಿತ್ತು. ವಾಸ್ತವವಾಗಿ ಹೃತಿಕ್ ಮತ್ತು ಕಂಗನಾ 'ಕೈಟ್ಸ್' ಮತ್ತು 'ಕ್ರಿಶ್-3' ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅದೇ ಸಮಯದಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆದರೆ ನಂತರ ಅವರು ಬೇರ್ಪಟ್ಟರು. 

68

ಇದಾದ ನಂತರ ಸಂದರ್ಶನವೊಂದರಲ್ಲಿ ಕಂಗನಾ ಹೃತಿಕ್ ರೋಷನ್ ಅವರನ್ನು ಸಿಲ್ಲಿ-ಎಕ್ಸ್ ಎಂದು ಕರೆದರು, ನಂತರ ಇಬ್ಬರ ನಡುವೆ ಕಾನೂನು ಹೋರಾಟ ಪ್ರಾರಂಭವಾಯಿತು. 


 

78

ಕಂಗನಾ ಶೀಘ್ರದಲ್ಲೇ ಮುಂಬರುವ 'ಎಮರ್ಜೆನ್ಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಇಂದಿರಾ ಗಾಂಧಿ ಪಾತ್ರ ಮಾಡಲಿದ್ದಾರೆ. ಕಂಗನಾ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.

88

ಇದಲ್ಲದೆ, ಕಂಗನಾ ಮುಂದೆ ಪಿ ವಾಸು ಅವರ 'ಚಂದ್ರಮುಖಿ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಬ್ಲಾಕ್ಬಸ್ಟರ್ ಹಿಟ್ ತಮಿಳಿನ ಹಾರರ್ ಕಾಮಿಡಿ ಚಿತ್ರ 'ಚಂದ್ರಮುಖಿ' ಯ ಮುಂದುವರಿದ ಭಾಗವಾಗಿದೆ.

Read more Photos on
click me!

Recommended Stories