ವೀರ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿ ಇಟ್ಟಿದ್ದ ಸೆಲ್ ಗೆ ಭೇಟಿ ನೀಡಿದ ಕಂಗನಾ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.
ಮಾನವೀಯತೆ ಎನ್ನುವುದು ಸತ್ತೇ ಹೋಗಿದ್ದ ಕಾಲದಲ್ಲಿ ಸಾವರ್ಕರ್ ಎಂಬ ಚೇತನದಿಂದ ಮಾನವೀಯತೆಗೆ ಹೊಸ ಅರ್ಥ ಸಿಕ್ಕಿತು,. ಅವರ ಕಣ್ಣಿನ ದೃಷ್ಟಿಯಿಂದಲೇ ಕ್ರೂರತ್ವದ ನಾಶ ಆರಂಭವಾಯಿತು ಎಂದು ಕಂಗನಾ ಹೇಳಿದ್ದಾರೆ.
ಈ ನಡುಗಡ್ಡೆಯಲ್ಲಿ ಕಾಲಾಪಾನಿ ಶಕ್ಷೆ ಅನುಭವಿಸಬೇಕಿದ್ದರೆ ಅವರ ಎದೆಯಲ್ಲಿ ಎಂಥ ಶಕ್ತಿ ಮನೆಮಾಡಿತ್ತು? ಎಂದು ಪ್ರಶ್ನೆ ಕೇಳುತ್ತಲೇ ವೀರ ಸಾವರ್ಕರ್ ಅವರನ್ನು ಸ್ಮರಿಸಿದ್ದಾರೆ.'
ಈ ಸೆಲ್ ಸ್ವಾತಂತ್ರ್ಯದ ನಿಜವಾದ ಕತೆಯನ್ನು ಹೇಳುತ್ತದೆ. ಪಠ್ಯ ಪುಸ್ತಕಗಳು ತಿಳಿಸದ ಸಂಗತಿಯನ್ನು, ಹೋರಾಟವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಕಂಗನಾ ರಣಾವತ್ ವಿವಾದಿತ ಹೇಳಿಕೆಗಳಿಂದಲೂ ಕೆಲವೊಮ್ಮೆ ಸುದ್ದಿ ಮಾಡುತ್ತಾರೆ. ಬೋಲ್ಡ್ ಅವತಾರದಲ್ಲಿಯೂ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಾರೆ.
ರಾಷ್ಟ್ರ ಪ್ರಶಸ್ತಿ ಸ್ವೀಕಾರ ಮಾಡಿರುವ ನಟಿ ಕಂಗನಾ ರಣಾವತ್ ಅಂಡಮಾನ್ ನಲ್ಲಿದ್ದಾರೆ. ವೀರ ಸಾವರ್ಕರ್ ಇದ್ದ ಸೆಲ್ ಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.