ಕ್ರೂಸ್ ಪಾರ್ಟಿ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಈಗ ಆರ್ಯನ್ ಖಾನ್ ಮತ್ತು ಚಂಕಿ ಪಾಂಡೆಯ ಮಗಳು ಅನನ್ಯಾ ಪಾಂಡೆಯನ್ನು ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ, ಎನ್‌ಸಿಬಿ ಅನನ್ಯ ಪಾಂಡೆಯನ್ನು ವಿಚಾರಣೆಗೆ ಕರೆದಿತ್ತು. ಆದರೆ ಅವರು ವಿಚಾರಣೆಗೆ ಸುಮಾರು 3 ಗಂಟೆಗಳ ಕಾಲ ತಡವಾಗಿ ತಲುಪಿದರು. ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ನಡುವೆ, ಅನನ್ಯಾಗೆ ಸೌತ್ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ 66 ನೇ ಚಿತ್ರ 'ದಳಪತಿಯಿಂದ' ಕೋಕ್ ನೀಡಲಾಗಿದೆ ಎನ್ನುವ ಸುದ್ದಿ ಬಂದಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯ ಇದೆ ಅನ್ನೋದು ಸಮಯ ಬಂದಾಗ ತಿಳಿಯಬೇಕಿದೆ. ಆದರೆ ಬಾಲಿವುಡ್ ಲೈಫ್ ಸುದ್ದಿಯ ಪ್ರಕಾರ ಅನನ್ಯಾರಿಗೆ ಈ ಸಿನಿಮಾ ಆಫರ್ ಬಂದೇ ಇಲ್ಲ . ಹೀಗಿರುವಾಗ ಚಿತ್ರದಿಂದ ಹೊರಬರುವ ಪ್ರಶ್ನೆಯೇ ಇಲ್ಲ ಎಂದು ಆಪ್ತ ಮೂಲ ಹೇಳಿದೆ ಅಂತೆ.
3 ಡ್ರಗ್ಸ್ ಪ್ರಕರಣದಲ್ಲಿ ಅನನ್ಯಾರನ್ನು ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಸುದ್ದಿ ಪ್ರಕಾರ, ಆರ್ಯನ್ ಮತ್ತು ಅನನ್ಯಾ ನಡುವಿನ ಚಾಟ್‌ನ ಕೆಲವು ವಿವರಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಅನನ್ಯಾ ಇದೀಗ ಎನ್‌ಸಿಬಿಯ ಕಣ್ಣಿಗೆ ಬಿದ್ದಿದ್ದಾರೆ.
ಇದರಲ್ಲಿ ಅನನ್ಯಾಗೆ ಸಂಬಂಧಿಸಿದ ಮೂರು ಚಾಟ್‌ಗಳು ಪ್ರಮುಖವಾಗಿವೆ. 2018 ಮತ್ತು 2019 ರ ನಡುವೆ ಗಾಂಜಾ ಬಗ್ಗೆ ಈ ಚಾಟ್‌ಗಳು ನಡೆದಿವೆ. ಹಿರಿಯ NCB ಅಧಿಕಾರಿಯ ಪ್ರಕಾರ, ಅನನ್ಯಾಳ ಚಾಟ್‌ಗಳಲ್ಲಿ, ಅವಳು ಆರ್ಯನ್‌ಗೆ ತಾನು ಮೊದಲು ಗಾಂಜಾವನ್ನು ಪ್ರಯತ್ನಿಸಿದ್ದೇನೆ ಮತ್ತು ಮತ್ತೆ ಟ್ರೈ ಮಾಡಲು ಬಯಸುವುದಾಗಿ ಅನನ್ಯಾ ಹೇಳಿದ್ದಾರೆ ಎನ್ನಲಾಗಿದೆ.
NCB ಯ ವರದಿಗಳ ಪ್ರಕಾರ, ಚಾಟ್‌ನಲ್ಲಿ, ಆರ್ಯನ್ ಅನನ್ಯಳನ್ನು ಗಾಂಜಾ ಸಿಗಬಹುದೇ ಎಂದು ಕೇಳುತ್ತಿದ್ದನು.ಮತ್ತು ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಅನನ್ಯಾ ಚಾಟ್‌ನಲ್ಲಿ ಹೇಳಿದ್ದಾರೆ. ಈ ಚಾಟ್ ಅನ್ನು ಅನನ್ಯಾಗೆ ತೋರಿಸುವ ಮೂಲಕ NCB ಪ್ರಶ್ನೆ ಕೇಳಿದೆ.
ಇದರಿಂದ ಶಾಕ್ ಆದ ಅನನ್ಯಾ ತಾನು ತಮಾಷೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ನಡುವೆ ನೆಡೆದಿರುವ ಎಲ್ಲಾ ಸಂಭಾಷಣೆ ಸಿಗರೇಟ್ ಬಗ್ಗೆಯೇ ಎಂದು ಅನನ್ಯಾ ಹೇಳಿದ್ದಾರೆ. ಅನನ್ಯಾ ಡ್ರಗ್ಸ್ ಸೇವಿಸಿದ್ದೀರಾ ಎಂದು ಕೇಳಿದಾಗ ಅವರು ಸಾರಾಸಗಟಾಗಿ ನಿರಾಕರಿಸಿದರು. ಈಗ ಇಬ್ಬರೂ ಡ್ರಗ್ಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎನ್‌ಸಿಬಿ ಶಂಕಿಸಿದೆ.
ಎನ್‌ಸಿಬಿಯ ವಿಚಾರಣೆಯಿಂದಾಗಿ, ಅನನ್ಯಾರ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ. ಎನ್‌ಸಿಬಿ ಅನನ್ಯ ಅವರ ಫೋನ್ ಅನ್ನು ವಶ ಪಡಿಸಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಅನನ್ಯಾ ತಮ್ಮ ಟೀಮ್‌ಗೆ ಕೆಲವು ದಿನಗಳ ಕಾಲ ತಮ್ಮ ಶೂಟಿಂಗ್ ಅನ್ನು ರೀ-ಶೆಡ್ಯೂಲ್ ಮಾಡುವಂತೆ ಕೇಳಿಕೊಂಡಿದ್ದಾರೆ.