ಮೊದಲ ವಿವಾಹ ವಾರ್ಷಿಕೋತ್ಸವ: ರಣಬೀರ್ ಜೊತೆಯ ಅಪರೂಪದ ಫೋಟೋ ಹಂಚಿಕೊಂಡ ಆಲಿಯಾ!
First Published | Apr 14, 2023, 6:27 PM ISTಆಲಿಯಾ ಭಟ್ ( ಮತ್ತು ರಣಬೀರ್ ಕಪೂರ್ ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಕಳೆದ ವರ್ಷ ಏಪ್ರಿಲ್ 14 ರಂದು ಆತ್ಮೀಯ ಸಮಾರಂಭದಲ್ಲಿ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರು ಬಯಸಿದಂತೆಯೇ ಅವರ ತಮ್ಮ ಸ್ವಂತ ಮನೆಯಲ್ಲಿ ಮದುವೆಯಾದರು. ಮದುವೆಯಲ್ಲಿ ಅವರ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಈಗ ಈ ಜೋಡಿಯ ಮದುವೆಗೆ ಒಂದು ವರ್ಷ ಕಳೆದಿದ್ದು, ಆಲಿಯಾ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.