ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಕಾಜೋಲ್‌ Thigh-slit ರೆಡ್‌ ಬಾಡಿಕಾನ್ ಗೌನ್‌ ಹಾಟ್‌ ಲುಕ್‌!

First Published | Jan 7, 2022, 2:17 PM IST

ರಣವೀರ್ ಸಿಂಗ್ (Ranveer Singh) ಹೋಸ್ಟ್ ಮಾಡುವ ದಿ ಬಿಗ್ ಪಿಕ್ಚರ್ (The Big Picture) ಮುಂಬರುವ ಎಪಿಸೋಡ್‌ನಲ್ಲಿ ನಟಿ ಕಾಜೋಲ್ (Kajol) ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಹಾಜರಾಗುತ್ತಿದ್ದಾರೆ. ಈ ಸಮಯದಲ್ಲಿ  ಕಾಜೋಲ್ ಥೈ-ಸ್ಲಿಟ್‌ನ ಹಾಟ್‌ ಕೆಂಪು ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್‌ ಅವರ ಪೋಟೋಗಳು ಸಖತ್‌ ವೈರಲ್‌ ಆಗಿದ್ದು, ಇಂಟರ್ನೆಟ್‌ಗೆ ಬೆಂಕಿ ಹಚ್ಚಿವೆ. ಇಲ್ಲಿವೆ ಕಾಜೋಲ್‌ ಅವರ ಹಾಟ್‌ ಪೋಟೋಗಳು.

ಕಾಜೋಲ್‌ ಬಾಲಿವುಡ್‌ನ ಟ್ಯಾಲೆಂಟೆಡ್‌ ನಟಿಯರಲ್ಲಿ (Talented Actress) ಒಬ್ಬರು. ತಮ್ಮ ನ್ಯಾಚುರಲ್‌ ಆ್ಯಕ್ಟಿಂಗ್‌ (Natural Acting) ಮೂಲಕ ಜನರನ್ನು ಗೆದ್ದಿರುವ ಈ ನಟಿ, ಎಂದಿಗೂ ಟ್ರೆಂಡ್‌ಗಳಿಗೆ ಮಣಿಯುವುದಿಲ್ಲ ಮತ್ತು ಅವರಿಗೆ ಕಂಫರ್ಟಬಲ್‌ ಆಗಿರವ ಔಟ್‌ಫಿಟ್‌ಗಳನ್ನು ಧರಿಸುವುದಕ್ಕೆ ಫೇಮಸ್‌ ಆಗಿದ್ದಾರೆ. 

ಕಾಜೋಲ್ ಮತ್ತು ಕರಣ್ ಜೋಹರ್ (Karan Johar) ಇತ್ತೀಚೆಗೆ ರಣವೀರ್ ಸಿಂಗ್ (Ranveer Singh) ಅವರ ಕ್ವಿಜ್ ಗೇಮ್ ಶೋ ದಿ ಬಿಗ್ ಪಿಕ್ಚರ್‌ನ ಸಂಚಿಕೆಗಳಲ್ಲಿ ಕಾಣಿಸಿಕೊಂಡರು. ಕರಣ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಕಾರ್ಯಕ್ರಮದ ಪ್ರಚಾರದ ವೀಡಿಯೊವನ್ನು ಹಂಚಿಕೊಂಡಿದ್ದರು.

Tap to resize

Kajol burns up the internet in hot red gown with thigh-slit for Ranveer Singh's The Big Picture

ಕರಣ್, ಕಾಜೋಲ್ ಮತ್ತು ರಣವೀರ್ ನಡುವಿನ ಕೆಲವು ತೆರೆಮರೆಯ ಕ್ಷಣಗಳನ್ನು ವೀಡಿಯೊ ಹೊಂದಿದೆ. ಕರಣ್‌ ಕಾಜೋಲ್ ಜೊತೆಗೆ ಕಭಿ ಖುಷಿ ಕಭಿ ಘಮ್ ಸಿನಿಮಾದ, ಬೋಲೆ ಚೂಡಿಯನ್ ಹಾಡನ್ನು ಮರುಸೃಷ್ಟಿಸುವುದನ್ನು ಸಹ ಕಾಣಬಹುದು. 

Kajol burns up the internet in hot red gown with thigh-slit for Ranveer Singh's The Big Picture

ಸ್ಟಾರ್ ಸ್ಟೈಲಿಸ್ಟ್, ಆಸ್ತಾ ಶರ್ಮಾ, ಕಾರ್ಯಕ್ರಮದ ಸಮಯದ ಕಾಜೋಲ್ ಅವರ ಹಲವಾರು ಫೋಟೋಗಳನ್ನು   Instagram ನಲ್ಲಿ ಶೇರ್‌ ಮಾಡಿದ್ದಾರೆ. 'ರೆಡ್ ಅಲರ್ಟ್, ದಿ ಬಿಗ್ ಪಿಕ್ಚರ್‌ನಲ್ಲಿ ವೇದಿಕೆಯನ್ನು ಸುಡುತ್ತಿರುವ ಕಾಜೋಲ್' ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಈ ಶೋಗಾಗಿ ಕಾಜೋಲ್ ನ್ಯೂಯಾರ್ಕ್ ಮೂಲದ ಏಸ್ ಡಿಸೈನರ್ ಪ್ರಬಲ್ ಗುರುಂಗ್ ಅವರ ಅದ್ಭುತ ಗೌನ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಥೈ ಸ್ಲಿಟ್‌ಗಳೊಂದಿಗೆ ಫ್ಲಂಗಿಗ್‌ V ನೆಕ್‌ಲೈನ್ ಬಾಡಿಕಾನ್ ಫಿಟ್ ರೆಡ್‌ ಗೌನ್‌ನಲ್ಲಿ ಕಾಜೋಲ್ ಏಂಜಲ್‌ನಂತೆ ಕಾಣುತ್ತಿದ್ದರು. 

ಕಡಿಮೆ ಆಭರಣಗಳೊಂದಿಗೆ ನ್ಯೂಡ್‌ ಪಿಂಕ್‌ ಲಿಪ್‌ಸ್ಟಿಕ್‌, ನ್ಯೂಡ್‌ ನೇಲ್‌ಪಾಲಿಶ್‌, ಸಿಲ್ಕಿ ಐಲೈನರ್‌ ಧರಿಸಿ ಕೂದಲನ್ನು ಬಿಟ್ಟಿದ್ದರು ಮತ್ತು ನ್ಯೂಡ್‌ ಪೀಪ್-ಟೋ ಪಂಪ್‌ಗಳನ್ನು ಧರಿಸಿದ್ದರು. ಕ್ರಿಸ್ಟಲ್ ಡ್ರಾಪ್ ಕಿವಿಯೋಲೆಗಳು ಮತ್ತು ಉಂಗುರಗಳು ಕಾಜೋಲ್‌ ಲುಕ್‌ ಅನ್ನು ಕಂಪ್ಲೀಟ್‌ ಮಾಡಿದ್ದವು.

ಈ ಹಿಂದೆ, ಕಾಜೋಲ್ ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು, ಅದರಲ್ಲಿ ಕೆಂಪು ಬಾಡಿಕಾನ್ ಔಟ್‌ಫಿಟ್‌ ಧರಿಸಿರುವ ಹಲವಾರು ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು ನಟಿ. ಕಾಜೋಲ್‌ ಅವರ ಹಾಟ್ ರೆಡ್ ಬಾಡಿಕಾನ್ ಗೌನ್‌ನಲ್ಲಿನ ಇತ್ತೀಚಿನ ಲುಕ್‌ ಸಕತ್‌ ವೈರಲ್‌ ಆಗಿದೆ. 

Latest Videos

click me!