ದುರ್ಗಾ ಪೂಜೆಯಲ್ಲಿ ತಂಗಿ ಜೊತೆ ಜಗಳವಾಡಿದ ಕಾಜೋಲ್ ವಿಡೀಯೋ ವೈರಲ್!
First Published | Oct 21, 2021, 4:36 PM ISTಬಾಲಿವುಡ್ ಉದ್ಯಮದಲ್ಲಿ, ಸೆಲೆಬ್ರಿಟಿಗಳು ಪರಸ್ಪರ ಜಗಳ ಮಾಡುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಆದರೆ ಸಹೋದರರು ಅಥವಾ ಸಹೋದರಿಯರ ನಡುವಿನ ಜಗಳದ ಸುದ್ದಿಗಳು ವಿರಳವಾಗಿ ಕೇಳಿಬರುತ್ತವೆ. ಆದರೆ, ಅಂತಹ ಒಂದು ಸುದ್ದಿ ಹೊರಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಇಬ್ಬರು ಸಹೋದರಿಯರು ಅಂದರೆ ಕಾಜೋಲ್ (Kajol) ಮತ್ತು ತನಿಶಾ ಮುಖರ್ಜಿ ( Tanishaa Mukerjee) ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು.