ವಿಜಯ್‌ ದೇವರಕೊಂಡ ಅನನ್ಯಾ ಪಾಂಡೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

First Published | Oct 21, 2021, 4:25 PM IST

ನಟ ಚಿಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ (Ananya Panday) ಬಾಲಿವುಡ್‌ನ (Bollywood) ಫೇಮಸ್‌ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬರು. ತಮ್ಮ ಅಭಿನಯ ಹಾಗೂ ಲುಕ್‌ನಿಂದ ನಿಧಾನವಾಗಿ ಫೇಮಸ್‌ ಆಗುತ್ತಿದ್ದಾರೆ ಅನನ್ಯಾ. ಕೇವಲ ಮೂರು ಸಿನಿಮಾಗಳಅನುಭವ ಹೊಂದಿರುವ ಅನನ್ಯಾ ಈಗ ಸೌತ್‌ಗೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ದಕ್ಷಿಣದ ಹಾರ್ಟ್‌ಥ್ರೋಬ್‌ ವಿಜಯ್‌ ದೇವರಕೊಂಡ (Vijay Deverakonda) ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ  ಲಿಗರ್‌ನಲ್ಲಿ (Liger) ನಟಿ ಕಾಣಿಸಿಕೊಂಡಿದ್ದಾರೆ. ಇವರ ಬಗ್ಗೆ ದೇವರಕೊಂಡ ಏನು ಹೇಳಿದ್ದಾರೆ ಗೊತ್ತಾ?  ಇಲ್ಲಿದೆ ಪೂರ್ತಿ ವಿವರ. 

ಬಾಲಿವುಡ್ ನಟಿ ಅನನ್ಯಾ ಪಾಂಡೆ ಶೀಘ್ರದಲ್ಲೇ ದೊಡ್ಡ ಬಜೆಟ್ ಚಿತ್ರ ಲಿಗರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಪ್ಯಾನ್-ಇಂಡಿಯಾ ಸಿನಿಮಾವೂ ಆಗಿದೆ. ಈ ಚಿತ್ರದಲ್ಲಿ ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಕೂಡ ಇದ್ದಾರೆ. ಲಿಗರ್‌ ಸಿನಿಮಾ ಮೂಲಕ ಅನನ್ಯಾ ರಿಜಿನಲ್‌ ಡೆಬ್ಯೂ ಮಾಡಲು ರೆಡಿಯಾಗಿದ್ದಾರೆ.

ಈ ವರ್ಷ ಅನನ್ಯ ಅನೇಕ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳನ್ನು ಮಾಡಿದ್ದಾರೆ.ಉದ್ಯಮದಲ್ಲಿ ದೊಡ್ಡ ಸ್ಟಾರ್ಸ್ ಜೊತೆ ಕೆಲವು ಸಿನಿಮಾಗಳನ್ನು ಶೂಟ್‌ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಸಿದ್ದಾಂತ್ ಚತುರ್ವೇದಿ ಜೊತೆ ಶಕುನ್ ಬಾತ್ರಾ ಅವರ ಇನ್ನೂ ಹೆಸರಿಡದ ಸಿನಿಮಾದಲ್ಲಿ ಅನ್ಯನಾ ಕಾಣಿಸಿಕೊಳ್ಳುತ್ತಾರೆ. ಅನಂತ್ ಅರ್ಜುನ್ ವರೈನ್ ಅವರ  ಖೋ ಗಯೇ ಹಮ್ ಕಹಾನ್ ಸಿನಿಮಾಕ್ಕಾಗಿ ಸಿದ್ದಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಜೊತೆ  ಅನನ್ಯಾ ಸಹಿ ಹಾಕಿದ್ದಾರೆ.

Tap to resize

ಲಿಗರ್‌ ಸಿನಿಮಾದ ಕೋಸ್ಟಾರ್‌ ವಿಜಯ್ ದೇವರಕೊಂಡ, ಇತ್ತೀಚೆಗೆ ಆಕೆಯ ಬಗ್ಗೆ ಮಾತನಾಡಿದರು ಮತ್ತು ಅನನ್ಯಾರ ಲಿಗರ್ ಅಭಿನಯಕ್ಕಾಗಿ ಪ್ರಶಂಸಿಸಿದರು. 'ಅನನ್ಯ ಪಾಂಡೆ ಚಿತ್ರದಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆ' ಎಂದು ವಿಜಯ್ ದೇವರಕೊಂಡ  ಹೇಳಿದ್ದಾರೆ. 

'ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ  ಮತ್ತು ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಏಕೆಂದರೆ ಅವರ ವೃತ್ತಿಜೀವನ ಯಶಸ್ವಿಯಾಗಬೇಕೆಂದು ಅವರು ಬಯಸುತ್ತಾರೆ. ಅವರು ತಮ್ಮ ಕೈಲಾದಷ್ಟು ಮಾಡಲು ಬಯಸುತ್ತಾರೆ. ಚಲನಚಿತ್ರ ಉದ್ಯಮವು ಸ್ಪರ್ಧಾತ್ಮಕ ವ್ಯಾಪಾರವಾಗಿದ್ದು, ಅಲ್ಲಿ ಯಶಸ್ಸು ಮಾತ್ರ ಬದುಕುಳಿಯುವುದನ್ನು ಖಾತ್ರಿಪಡಿಸುತ್ತದೆ. ನೀವು ಉಳಿಯಬೇಕಾದರೆ, ನೀವು ಪ್ರದರ್ಶನವನ್ನು ನೀಡಬೇಕಾಗುತ್ತದೆ. ಇಲ್ಲದಿದ್ದರೆ, ಒಂದು ಹಂತದ ನಂತರ ಯಾರೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಉದ್ಯಮದಲ್ಲಿ ಇರಲು  ನಾವೆಲ್ಲರೂ ಕಷ್ಟ ಪಟ್ಟು ಕೆಲಸ ಮಾಡಬೇಕು ಮತ್ತು ಅನನ್ಯಾ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾಳೆ ಮತ್ತು ಲಿಗರ್‌ನಲ್ಲಿ ತನ್ನ ಪಾತ್ರವನ್ನು ಚೆನ್ನಾಗಿ ಮಾಡಿದ್ದಾಳೆ. ಅನನ್ಯಾ ಚಿತ್ರದಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದಾಳೆ. ಅವಳ ಕೆಲಸ ನೋಡಿದಾಗ ಎಲ್ಲರೂ ಅವಳನ್ನು ಪ್ರೀತಿಸುತ್ತಾರೆ' ಎಂದು ವಿಜಯ್ ದೇವರಕೊಂಡ ಹೇಳಿದರು.

ಅನನ್ಯಾ, ವಿಜಯ್ ಅವರ ಲಿಗರ್ ಸಿನಿಮಾ ಆನೌನ್ಸ್‌ ಆದ ಕ್ಷಣದಿಂದಲೂ ಹೆಚ್ಚು ಪ್ರಚಾರ ಪಡೆದಿದೆ. ಈ ಚಿತ್ರವು ವಿಜಯ್ ದೇವರಕೊಂಡ ಅವರ ಬಾಲಿವುಡ್‌ನ  ಚೊಚ್ಚಲ ಚಿತ್ರವಾಗಿದೆ. ಹಾಗಾಗಿ, ಅವರ ಅಭಿಮಾನಿಗಳು ಸಿನಿಮಾದ  ಬಿಡುಗಡೆಗಾಗಿ  ಹೆಚ್ಚು ಕಾತುರದಿಂದ  ಕಾಯುತ್ತಿದ್ದಾರೆ.

ಮಾಜಿ ಬಾಕ್ಸಿಂಗ್ ವರ್ಲ್ಡ್ ಹೆವಿವೇಟ್ ಚಾಂಪಿಯನ್ ಮೈಕ್ ಟೈಸನ್ ಅವರ ಅತಿಥಿ ಪಾತ್ರವನ್ನು ಸಹ ಲಿಗರ್ ಸಿನಿಮಾ ಹೊಂದಿದೆ. ಚಿತ್ರದ ಕೊನೆಯಲ್ಲಿ ವಿಜಯ್ ಮತ್ತು ಮೈಕ್  ಟೈಸನ್‌ ಅವರು ಫೈಟ್‌ ಮಾಡುತ್ತಾರೆ ಎಂದು ಹೇಳಲಾಗಿದೆ.

ಈ ಚಿತ್ರವನ್ನು ಪುರಿ ಜಗನ್ನಾಥ್ ಬರೆದು ನಿರ್ದೇಶಿಸಿದರೆ  ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಮತ್ತು ಜಗನ್ನಾಥ್ ಜಂಟಿಯಾಗಿ ನಿರ್ಮಿಸಿದ್ದಾರೆ.

Latest Videos

click me!