Anil Kapoor ಮೇಲೆ ಜಾಕಿ ಶ್ರಾಫ್‌ಗೆ ಅಸೂಯೆ ; ಅಷ್ಟಕ್ಕೂ ಕಾರಣವೇನು?

Published : Jun 23, 2022, 07:08 PM ISTUpdated : Jun 23, 2022, 07:32 PM IST

ಅನಿಲ್ ಕಪೂರ್ (Anil Kapoor) ಅವರನ್ನು ಹಿಂದಿ ಚಲನಚಿತ್ರೋದ್ಯಮದ ಫಿಟ್ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಫಿಟ್ನೆಸ್‌ ವಿಷಯದಲ್ಲಿ  65ರ ವಯಸ್ಸಿನಲ್ಲೂ ಅನಿಲ್‌ ಕಪೂರ್‌ ಇಂದಿನ ಪೀಳಿಗೆಯ ಯುವ ನಟರಿಗೆ ಸಮನಾಗಿದ್ದಾರೆ.  ಸಂದರ್ಶನವೊಂದರಲ್ಲಿ, ಅವರ ಸ್ನೇಹಿತರೊಬ್ಬರು ತಮ್ಮ ಫಿಟ್ನೆಸ್ ಬಗ್ಗೆ  ಅಸೂಯೆಪಡುತ್ತಾರೆ ಎಂದು ಹೇಳಿದರು. ಅಷ್ಟಕ್ಕೂ ಅವರು ಯಾರು ಗೊತ್ತಾ? 

PREV
17
Anil Kapoor ಮೇಲೆ ಜಾಕಿ  ಶ್ರಾಫ್‌ಗೆ ಅಸೂಯೆ ; ಅಷ್ಟಕ್ಕೂ ಕಾರಣವೇನು?

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ, ಅನಿಲ್ ಕಪೂರ್ ಅವರು ಜಾಕಿ ಶ್ರಾಫ್ ಅವರೊಂದಿಗೆ ಹಲವು ಬಾರಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ, ಜಾಕಿ ಶ್ರಾಫ್ ಅವರು ತಮ್ಮ  ಬಗ್ಗೆ ಅಸೂಯೆ ಹೊಂದಿದ್ದಾರೆಂದು ಅನಿಲ್  ಕಪೂರ್  ಹೇಳಿದರು.
 

27

 'ಜಗ್ ಜಗ್ ಜಿಯೋ' ಚಿತ್ರದ ಪ್ರಚಾರದ ವೇಳೆ, ಸಂದರ್ಶನವೊಂದರಲ್ಲಿ 'ಅನಿಲ್ ಬೆವರಲು ಕಾರಿನ ಎಸಿ ಸ್ವಿಚ್ ಆಫ್ ಮಾಡುತ್ತಿದ್ದರು' ಎಂದು ಜಾಕಿ ಶ್ರಾಫ್  ಹೇಳಿದ್ದಾರೆ ಎಂದು ಅನಿಲ್ ಕಪೂರ್‌ಗೆ ಹೇಳಿದಾಗ, 'ಇದೆಲ್ಲ ಸಂಪೂರ್ಣ ಅಸಂಬದ್ಧ. ಜಾಕಿಗೆ ನನ್ನ ಮೇಲೆ ಹೊಟ್ಟೆಕಿಚ್ಚು. ಇಲ್ಲಿಯೂ ಎಲ್ಲರೂ ನನ್ನ  ಫಿಟ್ನೆಸ್ ಬಗ್ಗೆ ಅಸೂಯೆಪಡುತ್ತಾರೆ' ಎಂದು ಅನಿಲ್‌ ಹೇಳಿದ್ದಾರೆ.

37

ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ 'ಯುದ್ಧ', 'ಪರಿಂದಾ', 'ರಾಮ್ ಲಖನ್', 'ಕರ್ಮ' ಮತ್ತು 'ಅಂದರ್‌-ಬಹರ್' ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹವಿದೆ. 

47

ಚಿತ್ರಗಳ ಬಗ್ಗೆ ಅನಿಲ್ ಕಪೂರ್‌  ಅವರ ಸಮರ್ಪಣೆ  ಅದ್ಭುತವಾಗಿದೆ. ಆದರೆ, ಅವರಿಗಿಂತ ಅನೇಕ ಪಟ್ಟು ಹೆಚ್ಚು ಕೆಲಸ ಮಾಡುವ ನಟರು ಇದ್ದಾರೆ ಎಂದು ಅವರು ಭಾವಿಸುತ್ತಾರೆ.  ಅನಿಲ್ ಪ್ರಕಾರ, 'ಇಂಡಸ್ಟ್ರಿಯಲ್ಲಿ ನನಗಿಂತ ಹೆಚ್ಚು ಶ್ರಮವಹಿಸುವ ಇಬ್ಬರು ನೆಚ್ಚಿನ ನಟರಿದ್ದಾರೆ. ಒಬ್ಬರು ರಣಬೀರ್ ಕಪೂರ್ ಮತ್ತು ಒಬ್ಬರು ರಣವೀರ್ ಸಿಂಗ್. ಇಬ್ಬರೂ ಸಾಕಷ್ಟು ಕೆಲಸ ಮಾಡುತ್ತಾರೆ' ಎನ್ನುತ್ತಾರೆ.

57

'ಜಗ್ ಜಗ್ ಜಿಯೋ' ಚಿತ್ರದ ಕುರಿತು ಮಾತನಾಡುತ್ತಾ, ಇದು ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅನಿಲ್ ಕಪೂರ್ ಜೊತೆಗೆ ವರುಣ್ ಧವನ್, ಕಿಯಾರಾ ಅಡ್ವಾಣಿ, ನೀತು ಕಪೂರ್ ಮತ್ತು ಮನೀಶ್ ಪಾಲ್ ಮುಂತಾದ ನಟರು ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

67

ನಿರ್ದೇಶಕ ರಾಜ್ ಮೆಹ್ತಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವರುಣ್ ಧವನ್ ಪೋಷಕರ ಪಾತ್ರದಲ್ಲಿ ಅನಿಲ್ ಮತ್ತು ನೀತು ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಕಿಯಾರಾ ಅಡ್ವಾಣಿ ಚಿತ್ರದಲ್ಲಿ ವರುಣ್ ಧವನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

77

 'ಫೈಟರ್' ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಇದ್ದರೆ, ಅವರು ಸಲ್ಮಾನ್ ಖಾನ್ ಜೊತೆ 'ನೋ ಎಂಟ್ರಿ 2' ನಲ್ಲಿ
ಜೋಡಿಯಾಗಲಿದ್ದಾರೆ. ಇದಲ್ಲದೆ, ಗ್ಯಾಂಗ್‌ಸ್ಟರ್ ಡ್ರಾಮಾ 'ಅನಿಮಲ್' ನಲ್ಲಿ  ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories