ಹೆಂಡತಿ ಮಕ್ಕಳಿದ್ದರೂ ಸ್ಮಿತಾ ಪಾಟೀಲ್‌ನಿಂದ ದೂರವಾಗಲಿಲ್ಲ ರಾಜ್ ಬಬ್ಬರ್!
First Published | Jun 23, 2022, 6:38 PM ISTಹಿರಿಯ ಬಾಲಿವುಡ್ ನಟ ರಾಜ್ ಬಬ್ಬರ್ (Raj Babbar) ಇಂದು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, 23 ಜೂನ್ 2022 ರಂದು. ರಾಜ್ ಅವರು ಜೂನ್ 23, 1952 ರಂದು ಯುಪಿಯ ತುಂಡ್ಲಾದಲ್ಲಿ ಜನಿಸಿದ ರಾಜ್ ಬಬ್ಬರ್ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಅದಕ್ಕಾಗಿಯೇ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಗೆ ಸೇರಿದರು. 1975 ರಲ್ಲಿ ನಟನೆ ಕೋರ್ಸ್ ಮುಗಿಸಿದ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ರಾಜ್ ಬಬ್ಬರ್ ಒಬ್ಬ ಅನುಭವಿ ನಟ, ಅವರು ಇನ್ನೂ ಚಲನಚಿತ್ರ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ರಾಜಕೀಯದಲ್ಲಿಯೂ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ರಾಜ್ ಬಬ್ಬರ್ ಅವರ ಪರ್ಸನಲ್ ಸಹ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಇವರ ಮತ್ತು ಸ್ಮಿತಾ ಪಾಟೀಲ್ (Smita Patil ) ಅವರ ಸಂಬಂಧವು ಸಾಕಷ್ಟು ಸದ್ದು ಮಾಡಿತ್ತು.