ದಿ ಆರ್ಚೀಸ್ ಪ್ರೀಮಿಯರ್‌: ಮೊಮ್ಮಗ ಅಗಸ್ತ್ಯ ನಂದನ ಖುಷಿಯ ಕ್ಷಣದಲ್ಲೂ ತಾಳ್ಮೆ ಕಳ್ಕೊಂಡ ಜಯಾ ಬಚ್ಚನ್‌

Published : Dec 06, 2023, 05:48 PM IST

ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂಗಳವಾರ ಮುಂಬೈನಲ್ಲಿ ನಡೆದ ಚಿತ್ರದ ಪ್ರಥಮ ಪ್ರದರ್ಶನದಲ್ಲಿ, ಇಡೀ ಬಚ್ಚನ್ ಮತ್ತು ನಂದಾ ಕುಟುಂಬವು ಅಗಸ್ತ್ಯರನ್ನು ಬೆಂಬಲಿಸಲು ಒಟ್ಟುಗೂಡಿತು. ಈ ಖುಷಿಯ ಸಮಯದಲ್ಲೂ ಛಾಯಾಗ್ರಾಹಕರ ಮೇಲೆ ಜಯಾ ಬಚ್ಚನ್ ಅವರು ಅಸಮಾಧಾನಗೊಂಡಿರುವುದು ಕಂಡುಬಂದಿದೆ.

PREV
19
ದಿ ಆರ್ಚೀಸ್ ಪ್ರೀಮಿಯರ್‌: ಮೊಮ್ಮಗ ಅಗಸ್ತ್ಯ ನಂದನ ಖುಷಿಯ ಕ್ಷಣದಲ್ಲೂ ತಾಳ್ಮೆ ಕಳ್ಕೊಂಡ ಜಯಾ ಬಚ್ಚನ್‌

ಜೋಯಾ ಅಖ್ತರ್ ಅವರ ಚಿತ್ರ ದಿ ಆರ್ಚೀಸ್ ನಿನ್ನೆ ರಾತ್ರಿ ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಇಡೀ ಬಚ್ಚನ್ ಕುಟುಂಬ ಭಾಗವಹಿಸಿತ್ತು. ಈ ಸಂದರ್ಭದಲ್ಲಿ ಜಯಾ ಬಚ್ಚನ್ ಅವರ ಮಾತ್ರ ಕೆಟ್ಟಿತ್ತು.

29

ಜಯಾ ಬಚ್ಚನ್ ಅವರು ಕ್ಯಾಮರಾಮನ್ ಮೇಲೆ ತುಂಬಾ ಕೋಪಗೊಂಡು ಕಿರುಚ ಬೇಡಿ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಅವರ ಮುಖದಲ್ಲಿ ಸಿಟ್ಟು ಸ್ಪಷ್ಟವಾಗಿ ಕಾಣುತ್ತಿತ್ತು

39

ಈ ಸಮಯದಲ್ಲಿ, ಅವರ ಮೊಮ್ಮಗ ಅಗಸ್ತ್ಯ ನಂದಾ ಜಯಾ ಬಚ್ಚನ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು ಮತ್ತು ಶಾಂತವಾಗಿರುವಂತೆ ಕೇಳಿಕೊಂಡರು. 

49

ಬಚ್ಚನ್ ಕುಟುಂಬದ ಮೂರನೇ ತಲೆಮಾರಿನ ಅಂದರೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ದಿ ಆರ್ಚೀಸ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ.
 

59

ನಿರ್ದೇಶಕ ಜೋಯಾ ಅಖ್ತರ್ ಅವರ ಚಿತ್ರ ದಿ ಆರ್ಚೀಸ್ ಡಿಸೆಂಬರ್ 7 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ ಮತ್ತು  ಅಗಸ್ತ್ಯ ಆರ್ಚಿ ಆಂಡ್ರ್ಯೂಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

69

'ಹೊಸಬರೊಂದಿಗೆ ಜೋಯಾ ತುಂಬಾ ತಾಳ್ಮೆಯಿಂದಿದ್ದಾರೆ.ನಾನು ಗಿಟಾರ್ ನುಡಿಸುವುದನ್ನು ಕಲಿಯಬೇಕಾಗಿತ್ತು. ನಾನು ಹಾಡುವುದನ್ನು ಕಲಿಯಬೇಕಾಗಿತ್ತು. ಹಾಡಲು ಕಲಿಯುವುದು  ಮತ್ತು ಗಿಟಾರ್ ನುಡಿಸುವುದು ಉತ್ತಮ ಕಲಿಕೆಯ ಅನುಭವವಾಗಿತ್ತು' ಎಂದು ಅಗಸ್ತ್ಯ ಹಂಚಿಕೊಂಡಿದ್ದಾರೆ.
 

79

ಅಮಿತಾಬ್ ಬಚ್ಚನ್, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಆರಾಧ್ಯ ಬಚ್ಚನ್, ನಿಖಿಲ್ ನಂದಾ, ನವ್ಯಾ ನವೇಲಿ ನಂದಾ, ಅಗಸ್ತ್ಯ ನಂದಾ, ಶ್ವೇತಾ ಬಚ್ಚನ್ ನಂದಾ ಮತ್ತು ಜಯಾ ಬಚ್ಚನ್ ದಿ ಆರ್ಚೀಸ್ ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಉಪಸ್ಥಿತರಿದ್ದರು. 

89

ಅಗಸ್ತ್ಯ ಜೊತೆಗೆ, ದಿ ಆರ್ಚೀಸ್ ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರ. ಶಾರುಖ್  ಖಾನ್‌ ಮತ್ತು ಇಡೀ ಖಾನ್ ಕುಟುಂಬ ಸುಹಾನಾ ಅವರನ್ನು ಬೆಂಬಲಿಸಲು ಅಲ್ಲಿತ್ತು.

99

ದಿ ಆರ್ಚೀಸ್ ಮೂಲಕ ಶ್ರೀದೇವಿ ಮತ್ತು ಬೋನಿ ಕಪೂರ್‌ ಕಿರಿಯ ಪುತ್ರಿ  ಖುಷಿ ಕಪೂರ್  ಸಹ ಬಾಲಿವುಡ್‌ಗೆ ಎಂಟ್ರಿ ಕೊಂಡುತ್ತಿದ್ದಾರೆ.   ಖುಷಿಯನ್ನು ಬೆಂಬಲಿಸಲು ಜಾನ್ವಿ ಮತ್ತು ಬೋನಿ ಕಪೂರ್ ಹಾಜರಿದ್ದರು. 

Read more Photos on
click me!

Recommended Stories