ಸಿನಿಮಾಗೆ ಬಂದು 7 ವರ್ಷದಲ್ಲೇ ಬಿಲೇನಿಯರ್ ಒಡತಿಯಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ!

First Published | Dec 5, 2023, 8:52 PM IST

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿ ವಿವಿಧ ಭಾಷೆಗಳಲ್ಲಿ ನಟಿಸಿ ಅದ್ಧೂರಿ ಯಶಸ್ಸು ಗಳಿಸಿರುವ ನ್ಯಾಷನಲ್‌ ಕ್ರಷ್‌ ಎಂದೇ ಖ್ಯಾತಿಯಾದ ರಶ್ಮಿಕಾ ಮಂದಣ್ಣ 27 ವರ್ಷಕ್ಕೆ ಅರ್ಧ ಬಿಲೇನಿಯರ್ ಒಡತಿಯಾಗಿದ್ದಾಳೆ. ದೇಶದ ಪ್ರತಿಷ್ಠಿತ ನಗರಗಳಲ್ಲಿ ದುಬಾರಿ ಮನೆಗಳನ್ನು ಹೊಂದಿದ್ದಾಳೆ.  ಅವರ ಆಸ್ತಿ, ಮನೆ, ಸಂಪಾದನೆ ವಿವರ ಇಲ್ಲಿದೆ ನೋಡಿ...

ರಶ್ಮಿಕಾ ಮಂದಣ್ಣ ಎಂದಾಕ್ಷಣ ಕನ್ನಡಿಗರಿಗೆ ಕಿರಿಕ್‌ ಪಾರ್ಟಿಯ ಸಾನ್ವಿ ನೆನಪಾಗುತ್ತಾಳೆ. ಇವರ ಮೂಲ ಕನ್ನಡ ನಾಡಿನ ಕಿತ್ತಳೆಯ ಕೋಟೆ ಕೊಡಗು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು 2016ರಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಈಗ 7 ವರ್ಷಕ್ಕೆ ಅರ್ಧ ಬಿಲೇನಿಯರ್ ಒಡತಿ ಆಗಿದ್ದಾಳೆ.

ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರ ಹಿಟ್ ಆದ ನಂತರ ರಶ್ಮಿಕಾಗೆ ತೆಲುಗು ಚಿತ್ರರಂಗದಿಂದಲೂ ಭರ್ಜರಿ ಸಿನಿಮಾ ಅವಕಾಶಗಳು ಬಂದವು. ನಂತರ ರಶ್ಮಿಕಾ ತೆಲುಗು ಚಿತ್ರ 'ಗೀತ ಗೋವಿಂದಂ'ನಲ್ಲಿ ವಿಜಯ್ ದೇವರಕೊಂಡ ಲಿಪ್‌ಲಾಕ್ ಮಾಡಿ ನಟಿಸುವ ಮೂಲಕ ಟಾಲಿವುಡ್‌ನಲ್ಲಿ ಒಮ್ಮೆಲೆ ಪ್ರಸಿದ್ಧರಾದರು. ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಯಿತು.

Tap to resize

ತೆಲುಗಿನ ಗೀತ ಗೋವಿಂದಂ ಚಿತ್ರದ ಯಶಸ್ಸಿಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕೆಮಿಸ್ಟ್ರಿಯೇ ಕಾರಣ. ಇದೇ ಯಶಸ್ಸಿನ ಬೆನ್ನಲ್ಲಿಯೇ ಕಾಮ್ರೆಡ್‌ ಚಿತ್ರದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿ ಕಮಾಲ್ ಮಾಡಿದೆ. ಈ ಚಿತ್ರವೂ ಭರ್ಜರಿ ಯಶಸ್ಸು ಕಂಡಿದ್ದರಿಂದ ರಶ್ಮಿಕಾ ಸಿನಿ ಪಯಣದ ಹಾಗೂ ಸಂಭಾವನೆಯ ಮೌಲ್ಯ ಗಗನಕ್ಕೇರಿದೆ. 

ಟಾಲಿವುಡ್ ನಂತರ, ಕಾರ್ತಿ ಅವರ ಸುಲ್ತಾನ್ ಚಿತ್ರದ ಮೂಲಕ ಕಾಲಿವುಡ್‌ಗೆ ಎಂಟ್ರಿ ನೀಡಿದ ರಶ್ಮಿಕಾ ಅಲ್ಲಿಯೂ ಕೂಡ ಯಶಸ್ಸು ಗಳಿಸುತ್ತಾರೆ. ಜೊತೆಗೆ, ತಮ್ಮ ಸಂಭಾವನೆ ಮೊತ್ತವನ್ನು ಹಿಗ್ಗಿಸುತ್ತಲೇ ಹೋಗುತ್ತಾರೆ. ಸದ್ಯಕ್ಕೆ ರಶ್ಮಿಕಾ ತಮಿಳಿನಲ್ಲಿ ರೈನ್ಬೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಅನಿಮಲ್ ಚಿತ್ರದ ನಾಯಕಿ ರಶ್ಮಿಕಾ:  ಇನ್ನು ಬಾಲಿವುಡ್‌ಗೂ ಕಾಲಿಟ್ಟಿರುವ ರಶ್ಮಿಕಾ ಅನಿಮಲ್ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಇನ್ನು ಅನಿಮಲ್ ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 425 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.

ರಶ್ಮಿಕಾ ಮಂದಣ್ಣ ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಸೇರಿದಂತೆ ಹಲವು ಸ್ಟಾರ್‌ ನಟರೊಂದಿಗೆ ನಟಿಸುವ ಮೂಲಕ ಸ್ಟಾರ್‌ ನಾಯಕಿಯಾಗಿ ಹೊರಹೊಮ್ಮಿದರು. ಈಗ ಅನಿಮಲ್ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಲಿಪ್‌ಲಾಕ್‌ ಮಾಡಿದ್ದು, ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ಯಾನ್-ಇಂಡಿಯನ್ ಜನಪ್ರಿಯ ನಟಿಯಾಗಿದ್ದಾಳೆ. ಪ್ರಸ್ತುತ, ರಶ್ಮಿಕಾ ತಮಿಳಿನಲ್ಲಿ 2 ಚಿತ್ರಗಳು, ತೆಲುಗಿನಲ್ಲಿ 2 ಚಿತ್ರಗಳು ಮತ್ತು ಹಿಂದಿಯಲ್ಲಿ 3 ಚಿತ್ರಗಳು ಸೇರಿದಂತೆ ಅರ್ಧ ಡಜನ್ ಚಿತ್ರಗಳನ್ನು ಹೊಂದಿದ್ದಾರೆ.

ಸಾಲು ಸಾಲು ಸಿನಿಮಾದ ಅವಕಾಶಗಳನ್ನು ಪಡೆಯುತ್ತಿರುವ ರಶ್ಮಿಕಾ ತಮ್ಮ ಸಂಭಾವನೆಯನ್ನೂ ಚಿತ್ರದಿಂದ ಚಿತ್ರಕ್ಕೆ ಏರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷದವರೆಗೂ ಚಿತ್ರವೊಂದಕ್ಕೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ, ಬಾಲಿವುಡ್‌ಗೆ ಹೋದ ನಂತರ ತಮ್ಮ ಸಂಭಾವನೆಯನ್ನು 4 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಆಸ್ತಿಯ ಮೌಲ್ಯ:  ಕೊಡಗಿನ ಕುವರಿ ರಶ್ಮಿಕಾ 27 ವರ್ಷಕ್ಕೆ ಅರ್ಧ ಬಿಲಿಯನೇರ್ ಆಗಿದ್ದಾಳೆ. ರಶ್ಮಿಕಾ ಅವರು ಬೆಂಗಳೂರು, ಗೋವಾ, ಕೂರ್ಗ್, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ನಗರಗಳಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ ರಶ್ಮಿಕಾ ಹೊಂದಿರುವ ಐಷಾರಾಮಿ ಬಂಗಲೆಯ ಮೌಲ್ಯ ಬರೋಬ್ಬರಿ 8 ಕೋಟಿ ರೂ. ಆಗಿದೆ.
 

ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿಯೇ ಕೋಟಿ ಕೋಟಿ ದುಡಿಯುತ್ತಿದ್ದಾರೆ. ಆದರೆ, ಜಾಹೀರಾತಿನಿಂದ ಬರುವ ಆದಾಯ ಸಿನಿಮಾಗಿಂತಲೂ ದುಪ್ಪಟ್ಟಾಗಿದೆ ಎಂದರೆ ತಪ್ಪಾಗುವುದಿಲ್ಲ. ಜಾಹೀರಾತಿನ ಮೂಲಕ ರಶ್ಮಿಕಾ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಅವರ ಆಸ್ತಿ ಮೌಲ್ಯ ಬರೋಬ್ಬರಿ 45 ರಿಂದ 50 ಕೋಟಿ ರೂ. ಆಗಿದೆ.

ರಶ್ಮಿಕಾ ಮಂದಣ್ಣ ಕಾರು ಸಂಗ್ರಹ: ನಟಿ ರಶ್ಮಿಕಾಗೆ ಕಾರುಗಳನ್ನು ಸಂಗ್ರಹಣೆ ಮಾಡಿವ ಫ್ಯಾಷನ್ ಹೊಂದಿದ್ದಾರೆ. ಹಾಗಾಗಿ ಅವರ ಬಳಿ ಆಡಿ ಕ್ಯೂ3, ರೇಂಜ್ ರೋವರ್ ಸ್ಪೋರ್ಟ್, ಟೊಯೊಟಾ ಇನ್ನೋವಾ, ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್, ಹ್ಯುಂಡೈ ಕ್ರೆಟಾ ಮುಂತಾದ ಕಾರುಗಳಿವೆ. ಆಧುನಿಕ ಫೀಚರ್‌ಗಳಿಂದ ತುಂಬಿರುವ ಜರ್ಮನ್ ಎಸ್‌ಯುವಿ ಹೊಂದಿರುವ ಆಡಿ ಕ್ಯೂ3 ಕಾರನ್ನು ರಶ್ಮಿಕಾ ಬಳಸುತ್ತಿದ್ದಾರೆ. ಜೊತೆಗೆ, ಸಿನಿಮಾದಲ್ಲಿ ಕೋಟಿಗಟ್ಟಲೆ ದುಡಿದ ಹಣವನ್ನು ಹೆಚ್ಚಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
 

Latest Videos

click me!