ಕೈಯಲ್ಲಿ ಬೇಕಾದಷ್ಟು ಹಣವಿತ್ತು; ದಿಢೀರನೆ ಸೂರ್ಯನ ಜೊತೆ ಮದುವೆ ಮಾಡಿಕೊಳ್ಳಲು ಕಾರಣ ಬಿಚ್ಚಿಟ್ಟ ಜ್ಯೋತಿಕಾ!

First Published Dec 5, 2023, 3:27 PM IST

ಹೆಣ್ಣು ಮಕ್ಕಳಿಗೆ ಗೌರವ ತುಂಬಾ ಮುಖ್ಯವಾಗುತ್ತದೆ. ಆ ವ್ಯಕ್ತಿಯಲ್ಲಿ ನನಗೆ ಕಂಡಿದ್ದು ಗೌರವ ಎಂದ ಜ್ಯೋತಿಕಾ....

ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿರುವ ಹಾಗೂ ಮಿಂಚುತ್ತಿರುವ ನಟಿ ಜ್ಯೋತಿಕಾ ವೃತ್ತಿ ಬದುಕಿನಲ್ಲಿ ಟಾಪ್‌ ಇರುವಾಗ ಮದುವೆ ಮಾಡಿಕೊಳ್ಳುತ್ತಾರೆ.

ಜ್ಯೋತಿಕಾ ಮತ್ತು ನಟ ಸೂರ್ಯ ಸುಮಾರು 7 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಾರೆ. ಈ ಅವಧಿಯಲ್ಲಿ ಸ್ನೇಹ ಪ್ರೀತಿಗೆ ತಿರುಗೆ ಜೋ ಮದುವೆ ಮಾಡಿಕೊಳ್ಳುತ್ತಾರೆ.

ಬೆಳಗ್ಗೆ 9ರಿಂದ ಸಂಜೆ 6ರವರೆಗೂ ನಾನ್ ಸ್ಟಾಪ್ ಶೂಟಿಂಗ್ ಮಾಡಿಕೊಂಡು ಸುಮಾರು 10 ವರ್ಷ ಕಳೆದು ದಿನ ಬೆಳಗಾದರೆ ಬೋರ್ ಆಗುತ್ತಿತ್ತು

ಸಿನಿಮಾ ಮಾಡಿ ನನಗೆ ಬೇಕಾದಷ್ಟು ಹಣ ಸಂಪಾದನೆ ಮಾಡಿದ್ದೆ. ಅದೇ ಸಮಯಕ್ಕೆ ಸೂರ್ಯ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬಗಳ ಒಪ್ಪಿಕೊಂಡವು

ಒಂದು ಕ್ಷಣವೂ ಯೋಚನೆ ಮಾಡದೆ ಒಪ್ಪಿಕೊಂಡೆ. ಸೂರ್ಯ ಪ್ರಪೋಸ್ ಮಾಡಿದ ಒಂದು ತಿಂಗಳಿಗೆ ಮದುವೆ ಕೂಡ ಮಾಡಿಕೊಂಡು ಲೈಫ್ ಎಂಜಾಯ್ ಮಾಡಿದೆ

ಹೀಗೆ 2018ರಲ್ಲಿ ಗುಲಾಟ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜ್ಯೋತಿಕಾ ಹೇಳಿದ್ದರು. ಸೂರ್ಯ ಅವರಲ್ಲಿ ಮೊದಲು ಇಷ್ಟವಾದ ಗುಣ ಹೇಳಿದ್ದಾರೆ.

ಯಾಕೆ ಸೂರ್ಯ ನನ್ನ ಬಾಳಿನಲ್ಲಿ ಇರಬೇಕು ಅಂದ್ರೆ ಅವರಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಗುಣವಿದೆ. ಮೊದಲ ಸಿನಿಮಾದಿಂದಲೂ ನನ್ನನ್ನು ಗೌರವಿಸುತ್ತಿದ್ದಾರೆ.

7 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೀವಿ. ನಿರ್ದೇಶಕರು ಹೇಳಿದಷ್ಟೇ ನಟಿಸುತ್ತಾರೆ ಯಾವತ್ತೂ ಮಿತಿ ಮೀರಿ ನನ್ನ ಜೊತೆ ವರ್ತಿಸಿಲ್ಲ ಎಂದಿದ್ದಾರೆ ಜೋ. 

click me!