ಐಶ್ವರ್ಯಾ ರೈ ಮಗಳಲ್ಲ, ಆಕೆ ನನ್ನ ಸೊಸೆ: ಜಯಾ ಬಚ್ಚನ್ ಹೇಳಿಕೆ ಹಿಂದಿನ ಮರ್ಮವೇನು?

First Published | Aug 13, 2024, 4:45 PM IST

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಜಗಜ್ಜಾಹೀರು ಆಗಿದೆ. ಆದ್ರೆ ಅಧಿಕೃತವಾಗಿ ಇಬ್ಬರು ತಮ್ಮ ಸಂಬಂಧದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

2007ರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ನಡೆದಿತ್ತು. ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಮದುವೆಯಾದ ಇಷ್ಟು ವರ್ಷಗಳ ಬಳಿಕ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗ್ತಿದೆ.

ಈ ನಡುವೆ ನಟಿ ಜಯಾ ಬಚ್ಚನ್ ಸಂದರ್ಶನದ ವಿಡಿಯೋ ಕ್ಲಿಪ್ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ನನ್ನ ಮಗಳಲ್ಲ. ಆಕೆ ಸೊಸೆ ಎಂದು ನೇರವಾಗಿಯೇ ಜಯಾ ಬಚ್ಚನ್ ಹೇಳಿಕೆಯನ್ನು ನೀಡಿದ್ದರು.

Tap to resize

ಅತ್ತೆ ಎಂಬ ಕಾರಣಕ್ಕೆ ಐಶ್ವರ್ಯಾ ಜೊತೆ ನಾನು ಸ್ಟ್ರಿಕ್ಟ್ ಆಗಿರೋದು ಬೇಕಿಲ್ಲ. ಮಕ್ಕಳ ಮೇಲೆ ಅವರ ಪೋಷಕರು ಸ್ಟ್ರಿಕ್ಟ್ ಆಗಿರುತ್ತಾರೆ. ಐಶ್ವರ್ಯ ನನ್ನ ಮಗಳಲ್ಲ. ನಾನು ಸ್ಟ್ರಿಕ್ಟ್ ಆಗಿರಲ್ಲ ಎಂದು ಜಯಾ ಬಚ್ಚನ್ ಹೇಳಿದ್ರು.

ದಿನಗಳು ಕಳೆದಂತೆ ಸಂಬಂಧಗಳು ಗಟ್ಟಿಯಾಗುತ್ತವೆ. ಇಂದು ನನ್ನನ್ನು ಜಯಾ ಬಾಧುರಿ ಅನ್ನೋದಕ್ಕಿಂತ ಜಯಾ ಬಚ್ಚನ್ ಎಂದು ಕರೆದುಕೊಳ್ಳಲು ಇಷ್ಟಪಡುತ್ತೇನೆ ಎಂಬ ವಿಷಯವನ್ನು ಸಹ ಜಯಾ ಬಚ್ಚನ್ ಹಂಚಿಕೊಂಡಿದ್ದರು.

"Aishwarya is lovely. I love her. I have always loved her. I have never seen her push herself whenever we are all together. I like that quality of hers. She is quiet. She listens and she is taking it all in. And another wonderful thing is that she has fitted in so well in the family," Jaya had said in an interview.

ನಾನು ನನ್ನ ಮಕ್ಕಳಿಗೆ ಫುಲ್ ಸ್ಟ್ರಿಕ್ಟ್ ತಾಯಿ. ಮಕ್ಕಳಿಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಮಕ್ಕಳು ಬೇಡ ಅಂದರೂ ನಾನು ಒಪ್ಪಲ್ಲ. ತಾಯಿಯ ನಿರ್ಧಾರ ಹಿಂದೆ ಮಕ್ಕಳ ಹಿತವೇ ಇರುತ್ತದೆ ಎಂದಿದ್ದರು.

2007ರಲ್ಲಿ ಮದುವೆಯಾಗಿರುವ ಐಶ್ವರ್ಯಾ ಮತ್ತು ಅಭಿಷೇಕ್ ತಮ್ಮ ಖಾಸಗಿ ಜೀವನವನ್ನು ಯಾರೊಂದಿಗೆ ಹಂಚಿಕೊಳ್ಳಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ, ಅದು ಕೇವಲ ವೃತ್ತಿ ಜೀವನಕ್ಕಾಗಿ ಮಾತ್ರ ಮೀಸಲಿರಿಸಿದ್ದಾರೆ.

ಅನಂತ್ ಅಂಬಾನಿ ಮದುವೆಗೆ ಆಗಮಿಸಿದ್ದ ಬಚ್ಚನ್ ಕುಟುಂಬ ಸದಸ್ಯರಲ್ಲಿ ಐಶ್ವರ್ಯಾ ರೈ ಮತ್ತು ಆರಾಧ್ಯಳ ಅನುಪಸ್ಥಿತಿ ಕಂಡು ಬಂದಿತ್ತು. ಆದರೆ ತಾಯಿ-ಮಗಳು ಪ್ರತ್ಯೇಕವಾಗಿ ಮದುವೆಗೆ ಆಗಮಿಸಿ, ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದ್ದರು.

Latest Videos

click me!