ಹೊಟ್ಟೆಗೆ ಅನ್ನ ತಿಂತಾರ? ಸೌಂದರ್ಯವನ್ನೆ ತಿಂತಾರ?.... ನಟಿ ತ್ರಿಷಾ ಬ್ಯೂಟಿ ಸೀಕ್ರೆಟ್ ಇದು

Published : Aug 13, 2024, 03:03 PM IST

ಪೋಷಕ ನಟಿಯಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ತ್ರಿಷಾ ಇಂದು ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ತಮ್ಮ 20ನೇ ವಯಸ್ಸಲ್ಲಿ ಸಿನಿಮಾಕ್ಕೆ ಎಂಟ್ರಿ ಕೊಟ್ಟಾಗ ನಟಿ ಹೇಗಿದ್ರೋ, ಈವಾಗ 41ನೇ ವಯಸಲ್ಲಿ ನಟಿ ಅದಕ್ಕಿಂತಲೂ ಸುಂದರ, ಫಿಟ್ ಆಗಿದ್ದಾರೆ ಅಂದ್ರೆ ತಪ್ಪಲ್ಲ. ಹಾಗಿದ್ರೆ ತ್ರಿಷಾ ಫಿಟ್ನೆಸ್ ಸೀಕ್ರೆಟ್ ಏನಿರಬಹುದು ನೋಡೋಣ.   

PREV
17
ಹೊಟ್ಟೆಗೆ ಅನ್ನ ತಿಂತಾರ? ಸೌಂದರ್ಯವನ್ನೆ ತಿಂತಾರ?.... ನಟಿ ತ್ರಿಷಾ ಬ್ಯೂಟಿ ಸೀಕ್ರೆಟ್ ಇದು

ಟಾಲಿವುಡ್ ಇಂಡಸ್ಟ್ರಿಗೆ ಅನೇಕ ಯುವ ನಾಯಕಿಯರು ಬರ್ತಿದ್ದಾರೆ. ಇನ್ನೂ ಅನೇಕ ಜನ ಇಲ್ಲಿ ಉಳಿದುಕೊಳ್ಳೋದಕ್ಕೆ ಸಾಧ್ಯ ಆಗದೆ ಹೊರಗೆ ಹೋಗುತ್ತಲೇ ಇದ್ದಾರೆ. ಆದರೆ ತ್ರಿಷಾ ಕ್ರೇಜ್ ಮಾತ್ರ ಇಲ್ಲಿವರೆಗೂ ಕಡಿಮೆಯಾಗಿಲ್ಲ. ಈ ವಯಸ್ಸಿನಲ್ಲಿಯೂ ತ್ರಿಷಾ (Trisha Krishnan) ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಅಂದ್ರೆ ತ್ರಿಷಾ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಿದ್ರೆ 41ನೇ ವಯಸ್ಸಲ್ಲೂ ತ್ರಿಷಾ ಫಿಟ್ ಆಗಿರೋದಕ್ಕೆ ಕಾರಣ ಏನು ತಿಳಿಯೋಣ. 
 

27

ತ್ರಿಷಾ ಅನ್ನ ತಿಂತಾರ? ಸೌಂದರ್ಯವನ್ನೇ ತಿಂತಾರ? 
ನಟಿ ತ್ರಿಷಾ ಯೌವನದಲ್ಲಿ ಹೇಗಿದ್ದಾರೋ ಈಗಲೂ ಹಾಗೆಯೇ ಇದೆ. ಆಕೆಗೆ 41 ವರ್ಷ ವಯಸ್ಸಾಗಿದೆ ಅಂತಾನೆ ಅನಿಸೋದಿಲ್ಲ. ವಯಸ್ಸಾಗ್ತಾ ಆಗ್ತಾ, ಇವರೇ ಸೌಂದರ್ಯವೇ ಹೆಚ್ಚಾಗ್ತಿದೆ. ಅದಕ್ಕಾಗಿಯೇ ಈ ವಯಸ್ಸಿನಲ್ಲಿಯೂ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿವೆ. 41 ನೇ ವಯಸ್ಸಿನಲ್ಲಿಯೂ ತ್ರಿಷಾ ಇಷ್ಟೊಂದು ಫಿಟ್ ಆಗಿರೋದು ಹೇಗೆ ನೋಡೋಣ. 

37

ಮುಂಜಾನೆ ವ್ಯಾಯಾಮ ಮಾಡ್ತಾರೆ
ವ್ಯಾಯಾಮವು ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವರು ಮಾತ್ರ ಅದನ್ನು ಅನುಸರಿಸುತ್ತಾರೆ. ಆದರೆ ಇದು ನಾಯಕಿ ತ್ರಿಷಾ ಅವರ ನಿಜವಾದ ಸೌಂದರ್ಯದ ರಹಸ್ಯ (beauty secret). ಹೌದು, ತ್ರಿಷಾ ಬೆಳಿಗ್ಗೆ ಎದ್ದ ನಂತರ ಒಂದು ಗಂಟೆ ವ್ಯಾಯಾಮ ಮಾಡ್ತಾರೆ. ಕಾರ್ಡಿಯೋ ಜೊತೆಗೆ, ಅವರು ನಿಯಮಿತವಾಗಿ ಇತರ ಕೆಲವು ವ್ಯಾಯಾಮಗಳನ್ನು ಮಾಡುತ್ತಾರೆ. 

47

ರಾತ್ರಿ ಊಟ 
ತ್ರಿಷಾ ರಾತ್ರಿ ಹೊತ್ತು ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಊಟ ಮಾಡ್ತಾರೆ. ಸಂಜೆ 6. 30 ಕ್ಕೆ ಊಟ ಮುಗಿಸ್ತಾರಂತೆ ತ್ರಿಷಾ.. ಅದರ ನಂತರ, ಹಣ್ಣುಗಳನ್ನು ಸಹ ತಿನ್ನೋದಿಲ್ಲ. ಅಲ್ಲದೆ, ತ್ರಿಷಾ ಏನಾದ್ರೂ ತಿಂದ ತಕ್ಷಣ ನೀರು ಕೂಡ ಕುಡಿಯೋದಿಲ್ವಂತೆ. 

57

ಹಣ್ಣುಗಳು ಮತ್ತು ತರಕಾರಿಗಳು
ತ್ರಿಷಾ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು (vegetables and fruits) ತಿನ್ನುತ್ತಾರೆ. ತ್ರಿಷಾ ತಿನ್ನೋ ಹಣ್ಣುಗಳು ಮತ್ತು ತರಕಾರಿಗಳು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತವೆ. ಇವು ನಟಿಯ ದೇಹವನ್ನು ಆರೋಗ್ಯಕರವಾಗಿ ಮತ್ತು ಯಾವಾಗ್ಲೂ ಯಂಗ್ ಆಗಿರಿಸೋದಕ್ಕೆ ಸಹಾಯ ಮಾಡುತ್ತೆ. 

67
Trisha Krishnan

ಯೋಗ
ಲಿಯೋ ನಾಯಕಿ ತ್ರಿಷಾ ಅವರಿಗೂ ಯೋಗ ಮಾಡುವ ಅಭ್ಯಾಸವಿದೆ. ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ರು ಸಹ ನಟಿ ಪ್ರತಿದಿನ ಯೋಗ (Yoga) ಮಾಡ್ತಾನೆ ಇರ್ತಾರೆ. ಅವರ ಇನ್ಸ್ಟಾ ಪೋಸ್ಟ್ ನೋಡಿದ್ರೆ, ಯೋಗದ ಬಗ್ಗೆ ಎಷ್ಟೊಂದು ಕಾಳಜಿ ವಹಿಸ್ತಾರೆ ಅನ್ನೋದು ಗೊತ್ತಾಗುತ್ತೆ. 

77

ತೂಕ ಇಳಿಸೋದಕ್ಕೆ ಇದನ್ನೆಲ್ಲಾ ಮಾಡ್ತಾರೆ ನಟಿ
ಈಜು, ಟ್ರೆಕ್ಕಿಂಗ್ ಮತ್ತು ಸೈಕ್ಲಿಂಗ್ (cycling) ತ್ರಿಷಾ ಅವರ ನೆಚ್ಚಿನ ಚಟುವಟಿಕೆಗಳಾಗಿವೆ ಮತ್ತು ಅವರು ಬಾಲ್ಯದಿಂದಲೂ ಇದನ್ನು ಪ್ರತಿದಿನ ಮಾಡುತ್ತಿದ್ದಾರೆ. ಅವು ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೆ. ಜೊತೆಗೆ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಹಾಗಾಗಿಯೇ ನಟಿ ಈವಾಗ್ಲೂ ಫಿಟ್ ಆಗಿರೋದು. 

Read more Photos on
click me!

Recommended Stories