ಸೀರೆಯುಟ್ಟು ಮಿರರ್ ಸೆಲ್ಫಿ ಪೋಸ್ಟ್ ಮಾಡಿದ ನಟಸಾರ್ವಭೌಮ ಬೆಡಗಿ, ಜನರ ಕಣ್ಣು ಹೋಗಿದ್ದೆ ಬೇರೆಡೆಗೆ!

First Published | Aug 12, 2024, 5:28 PM IST

ನಟಸಾರ್ವಭೌವ ಬೆಡಗಿ ಅನುಪಮ ಪರಮೇಶ್ವರನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್ ಬೋಲ್ಡ್ ಫೋಟೋಗಳನ್ನ ಶೇರ್ ಮಾಡೋ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸ್ತಿದ್ದಾರೆ. 
 

ಪ್ರೇಮಂ ಎನ್ನುವ ಸೂಪರ್ ಹಿಟ್ ಮಲಯಾಳಂ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಅನುಪಮಾ ಪರಮೇಶ್ವರನ್ (Anupama Parameshwaran), ನಂತರ ಜನಪ್ರಿಯತೆ ಪಡೆದದ್ದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ. ಸದ್ಯ ತೆಲುಗಿನ ನಾಲ್ಕು ಸಿನಿಮಾಗಳು ನಟಿ ಕೈಯಲ್ಲಿದೆ. 

ಪುನೀತ್ ರಾಜ್‌ಕುಮಾರ್ (Puneeth Rajkumar) ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ಶ್ರುತಿ ಪಾತ್ರದಲ್ಲಿ ನಟಿಸಿದ್ದ ಅನುಪಮಾ, ಒಂದೇ ಸಿನಿಮಾದ ಮೂಲಕ ಕನ್ನಡಿಗರ ಮನಸೆಳೆದಿದ್ದರು, ಮತ್ತೆ ಕನ್ನಡದಲ್ಲಿ ಆಕೆಯನ್ನು ನೋಡಲು ಬಯಸಿದ್ದರು, ಆದ್ರೆ ನಟಿ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಸಖತ್ ಬ್ಯುಸಿ. 
 

Tap to resize

ಮೊದ ಮೊದಲು ಡಿಸೆಂಟ್ ಪಾತ್ರಗಳಲ್ಲಿ ನಟಿಸುತ್ತಿದ್ದ ಈ ಮಲಯಾಳಿ ಬೆಡಗಿ ಇತ್ತೀಚಿನ ದಿನಗಳಲ್ಲಿ ತುಂಬಾನೆ ಬೋಲ್ಡ್ ಎನಿಸುವಂತಹ ಪಾತ್ರಗಳಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ಅನುಪಮಾ ಸೋಶಿಯಲ್ ಮೀಡಿಯಾ ಪೇಜ್‌ಗಳು ಸಹ ಇವರ ಬೋಲ್ಡ್ ಫೋಟೋಗಳಿಂದ (bold photo) ತುಂಬಿದೆ ಅಂದ್ರೆ ತಪ್ಪಿಲ್ಲ. 
 

ಇತ್ತಿಚೆಗಷ್ಟೇ ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸೀರೆಯುಟ್ಟ ಮಿರರ್ ಸೆಲ್ಫಿ (mirror selfie) ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಈ ಫೋಟೊಗಳಲ್ಲಿ ನಟಿ ಬೋಲ್ಡ್ ಜೊತೆಗೆ ಕ್ಯೂಟ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಯ ಫೋಟೊ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. 
 

ಹಳದಿ ಬಣ್ಣದ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿರುವ ಅನುಪಮಾ, ಅದರ ಜೊತೆಗೆ ಟ್ರಾನ್ಸ್ಪರೆಂಟ್ ಆಗಿರುವ ತಿಳಿ ಹಸಿರು ಬಣ್ಣದ ಪ್ಲೋರಲ್ ಆರ್ಟ್ ವರ್ಕ್ ಇರುವಂತಹ ಸೀರೆ ಧರಿಸಿದ್ದಾರೆ. ಮಿರಲ್ ಮುಂದೆ ನಿಂತು ಸೊಂಟವೇ  ಹೈಲೈಟ್ ಆಗಿರುವಂತೆ ಫೋಟೋ ತೆಗೆಸಿಕೊಂಡಿದ್ದಾರೆ. 
 

ನಟಿಯ ಕ್ಯೂಟ್ ಮುಖ, ಅಂದವಾದ ಹೊಳೆಯುವ ಕಣ್ಣು, ಸೀರೆ ಎಲ್ಲವನ್ನೂ ಬಿಟ್ಟು, ಫ್ಯಾನ್ಸ್ ಗಳ ಕಣ್ಣು ಮಾತ್ರ ಅನುಪಮಾ ಸೊಂಟದ ಮೇಲೆ ಬಿದ್ದಿದೆ. ಕೆಲವು ಅಭಿಮಾನಿಗಳು ಕೋಪಗೊಂಡಿದ್ದು, ಯಾಕೆ ಹೀಗೆಲ್ಲಾ ಮಾಡ್ತೀರಾ? ಮೊದಲಿನ ಅನುಪಮಾ ಆಗಿ, ಎಲ್ಲಾ ಅಭಿಮಾನಿಗಳಿಗೆ ಬೇಕಾಗಿರೋದು ಅದೇ ಎಂದಿದ್ದಾರೆ. 
 

ಮಲಯಾಳಿ ನಟಿಯಾಗಿದ್ದರೂ ಸಹ ತೆಲುಗಿನಲ್ಲಿ ಅಪಾರ ಅಭಿಮಾನಿಗಳನ್ನ ಹೊಂದಿರುವ ನಟಿ ಅನುಪಮಾ ಕೈಯಲ್ಲಿ ಜೆಕೆಸ್ ಟ್ರುತ್ ಶಲ್ ಆಲ್ವೇಯ್ಸ್ ಪ್ರೊವೈಲ್, ಪರಧಾ, ಪೆಟ್ ಡಿಟೆಕ್ಟೀವ್, ವೈಸನ್ , ಲಾಕ್ ಡೌನ್ (lockdown) ಎನ್ನುವ ಐದು ಸಿನಿಮಾಗಳು ಇವೆ. ಹಾಗಾಗಿ ಈ ವರ್ಷ ಪೂರ್ತಿ ನಟಿ ಫುಲ್ ಬ್ಯುಸಿ. 
 

Latest Videos

click me!