ಕನ್ನಡ ಸೇರಿ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿಗೆ ಜೈಲಿನಿಂದಲೇ 30 ಕೋಟಿ ರೂ ಹೆಲಿಕಾಪ್ಟರ್ ಗಿಫ್ಟ್ ನೀಡಲಾಗಿದೆ. ಅರೆಸ್ಟ್ ಆಗಿ ಜೈಲು ಸೇರಿರುವ ಬಾಯ್‌ಫ್ರೆಂಡ್ ಪ್ರೇಮಿಗಳ ದಿನಾಚರಣೆಗೆ ಈ ಗಿಫ್ಟ್ ನೀಡಿದ್ದಾನೆ.
ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿ ಭಾರತೀಯ ಸಿನಿಮಾ ರಂಗದಲ್ಲಿ ಭಾರಿ ಬೇಡಿಕೆಯ ನಟಿಗೆ ಇದೀಗ ಬರೋಬ್ಬರಿ 30 ಕೋಟಿ ರೂಪಾಯಿ ಬೆಲೆಯ ಹೆಲಿಕಾಪ್ಟ್ ಗಿಫ್ಟ್ ಮಾಡಲಾಗಿದೆ. ಈ ಹೆಲಿಕಾಪ್ಟರ್ ನಟಿಗಾಗಿ ಮಾಡಿಫಿಕೇಶನ್ ಮಾಡಲಾಗಿದೆ. ಹೆಲಿಕಾಪ್ಟರ್‌ನಲ್ಲಿ ನಟಿಯ ಹೆಸರು, ಲವ್ ಸಿಂಬಲ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಅಷ್ಟಕ್ಕೂ ಈ ಹೆಲಿಕಾಪ್ಟರ್ ಪಡೆದ ನಟಿ ರಾ ರಾ ರಕ್ಕಮ್ಮ ಹಾಡಿನಲ್ಲಿ ಕಿಚ್ಚ ಸುದೀಪ್ ಜೊತೆ ಸೊಂಟ ಬಳುಕಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್.
26
ಬಾಯ್‌ಫ್ರೆಂಡ್ ಪತ್ರದಿಂದ ಗಿಫ್ಟ್ ಬಹಿರಂಗ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಈ ಗಿಫ್ಟ್ ಕೊಟ್ಟಿದ್ದು ಈಕೆಯ ಬಾಯ್‌ಫ್ರೆಂಡ್ ಎಂದು ಹೇಳಿಕೊಳ್ಳುತ್ತಿರುವ ಆರೋಪಿ ಸುಕೇಶ್ ಚಂದ್ರಶೇಕರ್. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ಸುಕೇಶ್ ಚಂದ್ರಶೇಖರ್ ಪ್ರೇಮಿಗಳ ದಿನಾಚರಣೆಗೆ ಬರೆದಿರುವ ಪತ್ರದಲ್ಲಿ ಈ ಹೆಲಿಕಾಪ್ಟರ್ ಗಿಫ್ಟ್ ಬಹಿರಂಗವಾಗಿದೆ.
36
ಬೇಬಿ ಡಾಲ್ ಎಂದು ಕರೆದು ಪತ್ರ ಬರೆದ ಚಂದ್ರಶೇಖರ್
ಸುಕೇಶ್ ಚಂದ್ರಶೇಕರ್ ಬರೆದ ಪತ್ರದಲ್ಲಿ ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಬೇಬಿ ಡಾಲ್ (ಬೊಟ್ಟ ಬೊಮ್ಮ) ಎಂದು ಉಲ್ಲೇಖಿಸಿ ಪತ್ರ ಬರೆಯಲಾಗಿದೆ. ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ತನ್ನಿಂದಾಗಿ ಗರ್ಲ್‌ಫ್ರೆಂಡ್ ಜಾಕ್ವೆಲಿನ್‌ಗೆ ಆಗುತ್ತಿರುವ ಅಮಾನ, ಟೀಕೆ, ತೊಡಕಿಗೆ ಕ್ಷಮೆ ಕೇಳಿದ್ದಾರೆ. ಇದು ವ್ಯಾಲಟೈನ್ಸ್ ಡೇಗೆ ನೀಡುತ್ತಿರುವ ಉಡುಗೊರೆ ಎಂದು ಸುಕೇಶ್ ಹೇಳಿದ್ದಾರೆ.
ಸುಕೇಶ್ ಚಂದ್ರಶೇಖರ್ ತಮ್ಮ ಪತ್ರದಲ್ಲಿ ಈ ಹೆಲಿಕಾಪ್ಟರನ್ನು ಜಾಕ್ವೆಲಿನ್ ಫರ್ನಾಂಡಿಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ. ಇದು ಅತ್ಯಂತ ಐಷಾರಾಮಿ ಹೆಲಿಕಾಪ್ಟರ್ ಆಗಿದ್ದು, ಎಲ್ಲಾ ಐಷಾರಾಮಿತ ತನ, ಡ್ರೆಸ್ಸಿಂಗ್ ರೂಂ ಸೇರಿದಂತೆ ಎಲ್ಲವೂ ವ್ಯವಸ್ಥೆಯನ್ನು ಕಸ್ಟಮೈಸ್ಡ್ ಮಾಡಲಾಗಿದೆ ಎಂದು ಚಂದ್ರಶೇಖರ್ ಪತ್ರದಲ್ಲಿ ಹೇಳಿದ್ದಾನೆ.
56
ಪತ್ರದಲ್ಲಿ ನೋವು ವ್ಯಕ್ತಪಡಿಸಿದ ಸುಕೇಶ್
ಪ್ರೇಮಿಗಳ ದಿನಾಚರಣೆಯಂದು ಜಾಕ್ವೆಲಿನ್ ಜೊತೆ ಕಳೆಯಬೇಕಿತ್ತು. ಆದರೆ ನಾವಿಬ್ಬರು ದೂರ ದೂರವಿದ್ದೇವೆ. ಆದರೆ ನನ್ನ ಹೃದಯದ ಪ್ರತಿ ಬಡಿತ ನಿನ್ನ ನೆನಪಿಸುತ್ತಿದೆ ಎಂದು ಚಂದ್ರಶೇಖರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮುಂಬೈ ಟ್ರಾಫಿಕ್, ತ್ವರಿತವಾಗಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಉತ್ತಮ ಎಂದು ಚಂದ್ರಶೇಖರ್ ಸಲಹೆ ನೀಡಿದ್ದಾರೆ.
66
ಜಾಕ್ವೆನ್ ಪ್ರತಿಕ್ರಿಯೆ ಏನು?
ಸುಕೇಶ್ ಚಂದ್ರಶೇಕರ್ ಜೈಲು ಸೇರುತ್ತಿದ್ದಂತೆ ಜಾಕ್ವೆಲಿನ್ ಜೊತೆಗಿನ ಕೆಲ ಫೋಟೋಗಳು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜಾಕ್ವೆಲಿನ್ ತನ್ನ ಗರ್ಲ್‌ಫ್ರೆಂಡ್ ಎಂದು ಬಹಿರಂಗವಾಗಿ ಘೋಷಿಸಿದ್ದರು. ಜೈಲು ಸೇರಿದ ಬಳಿಕ ಸುಕೇಶ್ ಇದೇ ರೀತಿ ಹಲವು ಪತ್ರ ಬರೆದಿದ್ದಾರೆ. ಆದರೆ ಜಾಕ್ವೆಲಿನ್ ಈ ಕುರಿತು ಉತ್ತರಿಸಿಲ್ಲ. ಇದೀಗ ನಿಜಕ್ಕೂ ಜಾಕ್ವೆಲಿನ್‌ಗೆ ಹೆಲಿಕಾಪ್ಟರ್ ಉಡುಗೊರೆ ನೀಡಿದ್ರಾ ಅನ್ನೋ ಕುರಿತು ಸ್ಪಷ್ಟತೆ ಇಲ್ಲ. ಇತ್ತ ಜಾಕ್ವೆಲಿನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಾಕ್ವೆಲಿನ್ , ಸುಕೇಶ್ ಚಂದ್ರಶೇಕರ್‌ನಿಂದ ದೂರ ಸರಿಯುವ ಪ್ರಯತ್ನ ಮಾಡಿದ್ದಾರೆ.
ಜಾಕ್ವೆನ್ ಪ್ರತಿಕ್ರಿಯೆ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.