ಪ್ರೇಮಿಗಳ ದಿನ ರೊಮ್ಯಾಂಟಿಕ್ ಫೋಟೋ ಹರಿಬಿಟ್ಟ ಪೂನಂ, ಮತ್ತೆ ಕಿಚ್ಚು ಹಚ್ಚಿದ ವಿವಾದಿತ ಮಾಡೆಲ್

Published : Feb 14, 2026, 08:39 PM IST

ಪ್ರೇಮಿಗಳ ದಿನ ರೊಮ್ಯಾಂಟಿಕ್ ಫೋಟೋ ಹರಿಬಿಟ್ಟ ಪೂನಂ, ಮತ್ತೆ ಕಿಚ್ಚು ಹಚ್ಚಿದ ವಿವಾದಿತ ಮಾಡೆಲ್ , ಪೂನಂ ರೊಮ್ಯಾಂಟಿಂಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಸೈಲೆಂಟ್ ಆಗಿದ್ದ ಪೂನಮ್ ಪಾಂಡೆ ಇದೀಗ ದಿಢೀರ್ ಪ್ರತ್ಯಕ್ಷದ ಹಿಂದಿನ ಕಾರಣವೇನು? 

PREV
15
ಪೂನಂ ಪಾಂಡೆ ಡೇಟಿಂಗ್ ರೂಮರ್

ಗರ್ಭಕಂಠ ಕ್ಯಾನ್ಸರ್ ಪ್ರಚಾರದ ಸ್ಟಂಟ್ ಮಾಡಿ ಕೈಸುಟ್ಟುಕೊಂಡ ಬಳಿಕ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಇದೀಗ ಪ್ರೇಮಿಗಳ ದಿನ ಪ್ರತ್ಯಕ್ಷರಾಗಿದ್ದಾರೆ. ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ. ಇದೀಗ ಪೂನಂ ಪಾಂಡೆ ಮತ್ತೆ ಪ್ರೀತಿಯಲ್ಲಿ ಬಿದ್ರಾ ಅನ್ನೋ ಅನುಮಾನಗಳು ಹೆಚ್ಚಾಗಿದೆ. ಕಾರಣ ರೊಮ್ಯಾಂಟಿಕ್ ಫೋಟೋ ಹಿಂದಿರುವ ವ್ಯಕ್ತಿ.

25
ಮಿಸ್ಟ್ರಿ ಮ್ಯಾನ್

ಪೂನಂ ಪಾಂಡೆ ಫೋಟೋ ಹಿಂದೆ ಮಿಸ್ಟ್ರಿ ಮ್ಯಾನ್ ಇದ್ದಾರೆ. ಇದು ಯಾರು ಅನ್ನೋ ಸುಳಿವ ಪೂನಂ ಪಾಂಡೆ ನೀಡಿಲ್ಲ. ಪೂನಂ ಪಾಂಡೆ ಬಿಗಿದಪ್ಪಿಕೊಂಡಿರುವ ಫೋಟೋ ಇದಾಗಿದೆ. ಹಲವು ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಎಲ್ಲಾ ಫೋಟೋದಲ್ಲಿ ಬಾಯ್‌ಫ್ರೆಂಡ್ ಎಂಬಂತಿರುವ ವ್ಯಕ್ತಿಯ ಮುಖ ಮರೆಮಾಚಲಾಗಿದೆ.

35
ಸಂತೋಷದ ಸಾಮ್ರಾಜ್ಯ

ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಪೂನಂ ಪಾಂಡೆ ಇದು ನನ್ನ ಸಂತೋಷದ ಸಾಮ್ರಾಜ್ಯ ಎಂದು ಹೇಳಿಕೊಂಡಿದ್ದಾರೆ. ಆದರೆ ಪೂನಂ ಪಾಂಡೆ ತನ್ನ ರಿಲೇಶನ್‌ಶಿಪ್ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅಭಿಮಾನಿಗಳು ಪೂನಂ ಪಾಂಡೆ ಹೊಸ ಪ್ರೀತಿಯಲ್ಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

45
ಮಾಜಿ ಗೆಳೆಯನ ಕುರಿತು ಗಂಭೀರ ಆರೋಪ ಮಾಡಿದ್ದ ಪೂನಂ

ಪೂನಂ ಪಾಂಡೆ ಪ್ರೀತಿ, ಬಾಯ್‌‌ಫ್ರೆಂಡ್ ಸೇರಿದಂತೆ ಹಲವು ವಿಚಾರಗಳನ್ನು ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದರು. ಈ ವೇಳೆ ತನ್ನ ಕೆಲ ವಿಡಿಯೋಗಳನ್ನು ಮಾಜಿ ಗಳೆಯ ಲೀಕ್ ಮಾಡಿ ತೀವ್ರ ಸಂಕಷ್ಟ ತಂದಿದ್ದರು ಎಂದು ಬಹಿರಂಗಪಡಿಸಿದ್ದರು. ಇದೇ ವೇಳೆ ರಿಲೇಶನ್‌ಶಿಪ್ ನಂಬಿಕೆ ಕ್ಷೀಣಿಸುತ್ತಿದೆ ಎಂದಿದ್ದರು.

55
ವಿವಾದಗಳಿಂದಲೇ ಸದ್ದು

ಪೂನಂ ಪಾಂಡೆ ಪ್ರತಿ ಬಾರಿ ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. 2011ರ ವಿಶ್ವಕಪ್ ಟೂರ್ನಿ ವೇಳೆ ಬೆತ್ತಲೆಯಾಗುವುದಾಗಿ ಹೇಳಿ ಕೋಲಾಹಲ ಸೃಷ್ಟಿಸಿದ್ದ ಪೂನಂ ಪಾಂಡೆ ಪ್ರತಿ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಪ್ರಚಾರದಲ್ಲಿ ಪೂಂ ಪಾಂಡೆ ಮೃತ ಎಂದು ಪ್ರಚಾರ ಮಾಡಿದ ಪರಿಣಮಾ ಪೂನಂ ವಿರುದ್ಧ ದೂರು ದಾಖಲಾಗಿತ್ತು.

ವಿವಾದಗಳಿಂದಲೇ ಸದ್ದು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories