ನೋಡಲು ವಿಚಿತ್ರ ಅನಿಸೋ ಈ ಓರಿ ನೋಡಿದ್ರೆ ಬಾಲಿವುಡ್ ಮಂದಿ ಹಿಂಗ್ಯಾಕೆ ಆಡ್ತಾರೆ? ಡ್ರಗ್ ಪೆಡ್ಲರ್ ಅಂತನಾ?

First Published | Nov 8, 2023, 1:26 PM IST

ಬಾಲಿವುಡ್ ನಟಿಯರ ಜೊತೆ ಬಾಲಿವುಡ್‌ನ ಇತ್ತೀಚಿನ ಎಲ್ಲಾ ಸಮಾರಂಭಗಳಲ್ಲಿ ಮಿಂಚುತ್ತಿದ್ದ ಓರಿ ಆಲಿಯಾಸ್ ಒರ್ಹನ್ ಅವತ್ರಾಮಣಿ ಯಾರೂ ಎಂಬ ಕುತೂಹಲ ಬಹುತೇಕರದ್ದು ಆದರೆ ಆತನ ನಿಜವಾದ ಹಿನ್ನೆಲೆ ಏನು, ಬಾಲಿವುಡ್‌ ಸೇರಿದಂತೆ ಭಾರತದ ಅತ್ಯಂತ ಶ್ರೀಮಂತ ಕುಟುಂಬದ ಮಕ್ಕಳು ಆತನ ಸ್ನೇಹಕ್ಕಾಗಿ ಹಾತೊರೆಯುವುದೇಕೆ ಎಂದು ನೆಟ್ಟಿಗರೊಬ್ಬರು ಟ್ವಿಟ್ಟರ್‌ನಲ್ಲಿ ಡಿಟೇಲ್ ಆಗಿ ತಿಳಿಸಿದ್ದು, ಆ ಬಗ್ಗೆ ಒಂದು ವರದಿ ಇಲ್ಲಿದೆ. 

ಬಾಲಿವುಡ್ ನಟಿಯರ ಜೊತೆ ಬಾಲಿವುಡ್‌ನ ಇತ್ತೀಚಿನ ಎಲ್ಲಾ ಸಮಾರಂಭಗಳಲ್ಲಿ ಮಿಂಚುತ್ತಿದ್ದ ಓರಿ ಆಲಿಯಾಸ್ ಒರ್ಹನ್ ಅವತ್ರಾಮಣಿ ಯಾರೆಂಬ ಕುತೂಹಲ ಬಹುತೇಕರದ್ದು, ಯಾರಿಗೂ ಅಷ್ಟು ಸುಲಭವಾಗಿ ಸಿಗದ ನಟಿಯರೆಲ್ಲಾ ಹೇಗೆ ಈತನಿಗೆ ಸುಲಭವಾಗಿ ಸಿಗುತ್ತಿದ್ದಾರೆ. ಜೊತೆಗೆ ಮೈಗೆ ಮೈ ಅಂಟಿಸಿ ಹೇಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಬಹುತೇಕರದ್ದಾಗಿತ್ತು. 

ಪಾಪರಾಜಿಗಳು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈತ ಕರೀನಾ, ದೀಪಿಕಾರಿಂದ ಹಿಡಿದು ಬಾಲಿವುಡ್‌ನ ಝೆಡ್ ಜನರೇಷನ್‌ ಜೊತೆಯೂ ಮಿಂಚುತ್ತಿರುವುದು ನೋಡಿ ಸಹಜ ಕುತೂಹಲದಿಂದ ಜನ ಪ್ರಶ್ನೆ ಮಾಡಿದ್ದು, ಇದಕ್ಕೆ ಈಗ ನೆಟ್ಟಿಗರೊಬ್ಬರು ಸಾಕ್ಷ್ಯ ಸಮೇತ ಉತ್ತರಿಸಿದ್ದಾರೆ. 

Tap to resize

ಸಾಮಾನ್ಯನಂತೆ ಕಾಣುವ ಈತ ಬಾಲಿವುಡ್‌ನಲ್ಲಿ ತುಂಬಾ ಪ್ರಭಾವಿಯಂತೆ ಕಾಣುತ್ತಾನೆ. ಬಹುತೇಕ ಬಾಲಿವುಡ್‌ನ ಎಲ್ಲರೂ ಆತನ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಹಾಗಿರುವಾಗ ಆತನ ಬಗ್ಗೆ ಕೆಲವೊಂದು ವಿಷಯ ತಿಳಿಸುತ್ತೇನೆ. ಎಂದು ವಿಜಯ್ ಪಟೇಲ್ ಎಂಬುವವರು ಟ್ವಿಟ್ಟರ್‌ನಲ್ಲಿ ಸರಣಿ ಟ್ವಿಟ್ ಮಾಡಿದ್ದಾರೆ. 

ಈತನ ನಿಜವಾದ ಹೆಸರು ಒರ್ಹಾನ್ ಅವತ್ರಮಣಿ, ಎಲ್ಲರೂ ಓರಿ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಮಾಧ್ಯಮಗಳ ವರದಿಯಂತೆ ಈತನ ತಂದೆ ಹೆಸರು ಜಾರ್ಜ್ ಅವತ್ರಮಣಿ, ಆದರೆ ಇದು ನಿಜವಲ್ಲ, ಈತನ ತಂದೆಯ ಹೆಸರು ಸೂರಜ್ ಅವತ್ರಮಣಿ. ತಾಯಿ ಶಹನಾಜ್ ಅವತ್ರಮಣಿ

ಓರಿ ಅವತ್ರಮಣಿದು ತುಂಬಾ ಶ್ರೀಮಂತ ಹಿನ್ನೆಲೆ ಇರುವ ಕುಟುಂಬ. ರಿಯಲ್ ಎಸ್ಟೇಟ್ (Real Estate), ಹೊಟೇಲ್ ಉದ್ಯಮ (Hotel Industry), ಮದ್ಯ ಉದ್ಯಮದಲ್ಲಿ (Liquor Business) ಹೆಸರು ಮಾಡಿದ್ದು, ಶ್ರೀಮಂತಿಕೆಗೇನು ಕೊರತೆ ಇಲ್ಲ. ಭಾರತದ ಬಹುತೇಕ ಶ್ರೀಮಂತರ ಮಕ್ಕಳಂತೆ ಈತನೂ ಅಮೆರಿಕದಲ್ಲಿ ಶಿಕ್ಷಣ ಮುಗಿಸಿದ್ದು, ಈತನ ಓಡನಾಟದಲ್ಲಿರುವ ಶ್ರೀಮಂತ ಮಕ್ಕಳ ವಿವರ ಕೆಳಗೆ ಇದೆ ನೋಡಿ..

ಅಂಬಾನಿ ಕುಟುಂಬದ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌ಗೆ ಈತ ಉತ್ತಮ ಗೆಳೆಯ. 2005ರಿಂದಲೂ ಬಹಳ ಆತ್ಮೀಯವಾಗಿದ್ದಾರೆ ಓರಿ ಹಾಗೂ ರಾಧಿಕಾ ಮರ್ಚೆಂಟ್.

ಮಿಥಿಲಾ ಪವಾರ್ ಅವರಿಗೂ ಈ ಓರಿ ಬೆಸ್ಟ್ ಫ್ರೆಂಡ್ , ಮಿಥಿಲಾ ಅವರು ಪ್ರಭಾವಿ ಪವಾರ್ ಕುಟುಂಬಕ್ಕೆ ಸೇರಿದ ಶ್ರೀನಿವಾಸ ಪವಾರ್ ಅವರ ಮಗಳು. ಅವರು ಕೃಷಿ  ಹಾಗೂ ರಾಸಾಯನಿಕ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮಹಾರಾಷ್ಟ್ರದ ರಾಜಕಾರಣಿ ಅಜಿತ್ ಪವಾರ್ ಅವರ ಸಂಬಂಧಿ.

ತಾನಿಯಾ ಶ್ರಾಫ್‌ಗೂ ಈ ಓರಿ ನಿಕಟ ಸ್ನೇಹಿತ, ಈ ತಾನಿಯಾ ಶ್ರಾಫ್‌ ವಿಶ್ವದ 5ನೇ ಅತೀ ದೊಡ್ಡ ಆಗ್ರೋ ಕೆಮಿಕಲ್ ಸಂಸ್ಥೆಯಾದ ಯುನೈಟೆಡ್‌ ಪೋಸ್ಪರಸ್‌ ಲಿಮಿಟೆಡ್‌ ಮಾಲೀಕ. ಜಾವೇದ್ ಶ್ರಾಫ್ ಪುತ್ರಿ. 

ಅಲ್ಯಾ ಮಿಸ್ತ್ರಿ ಕೂಡ ಈತನ ಬೆಸ್ಟ್‌ಫ್ರೆಂಡ್. ಈ ಅಲ್ಯಾ ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಮಿಸ್ತ್ರಿ ಕುಟುಂಬದ ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ಗೆ  ಸೇರಿದವರು. ಇವರು ಟಾಟಾ ಸನ್ಸ್‌ನಲ್ಲಿ 18.5% ಷೇರುಗಳನ್ನು ಹೊಂದಿದ್ದಾರೆ.

2015ರಲ್ಲಿ ಹ್ಯೂಮನ್ಸ್ ಆಫ್ ಬಾಂಬೆ ಈ ಓರಿ ಬಗ್ಗೆ ಸಣ್ಣದಾದ ವರದಿಯೊಂದನ್ನು ಪ್ರಕಟಿಸಿತ್ತು. ಇದರಲ್ಲಿ ಆತ ತಾನು ಡ್ರಗ್ ಚಟಕ್ಕೆ ತುತ್ತಾಗಿದ್ದೆ ಎಂದು ಹೇಳಿಕೊಂಡಿದ್ದ. 

ಫೇಸ್‌ಬುಕ್‌ನಲ್ಲಿ ಈತ ಇಮ್ತಿಯಾಜ್ ಕತ್ರಿ ಜೊತೆಗೂ ಇರುವ ಫೋಟೋವಿದೆ. ಈ ಇಮ್ತಿಯಾಜ್‌ ಕತ್ರಿ ಮೇಲೆ ಶಾರೂಖ್ ಖಾನ್ ಪುತ್ರ ಆರ್ಯಾನ್‌ ಖಾನ್ ಹಾಗೂ ದಿ. ಸುಶಾಂತ್ ಸಿಂಗ್ ರಾಜಪುತ್‌ಗೆ ಡ್ರಗ್ ಪೂರೈಸಿದ ಆರೋಪವಿದೆ. 

ಬರೀ ಇಷ್ಟೇ ಅಲ್ಲದೇ  ಭಾರತದ ಅನೇಕ ಶ್ರೀಮಂತ ಕುಟುಂಬಗಳ ಕುಡಿಗಳಿಗೆ ಈತ ಬೆಸ್ಟ್‌ಫ್ರೆಂಡ್ ಆಗಿದ್ದು, ಆತನ ಫೇಸ್‌ಬುಕ್ ಫೇಜ್‌ನಲ್ಲಿ ಇನ್ಯಾರೆಲ್ಲಾ ಈತನ ಆತ್ಮೀಯ ಸ್ನೇಹಿತರು ಎಂಬುದನ್ನು ನೋಡಬಹುದು.  

ಈಗ ನಿಮಗೆ ಈ ಓರ್ರಿ ಏಕೆ ಇಷ್ಟೊಂದು ಪ್ರಭಾವಿ ಎಂದು ತಿಳಿದಿರಬಹುದು ಹಾಗೂ ಆತ ಹೇಗೆ ಭಾರತದ ಮುಂದಿನ ತಲೆಮಾರಿನ ಜನರಿಗೆ ಅಷ್ಟು ಆತ್ಮೀಯನಾದ ಎಂಬುದರ ಅರಿವಾಗಬಹುದು ಎಂದು ಬರೆದುಕೊಂಡಿದ್ದಾರೆ ವಿಜಯ್ ಪಟೇಲ್.

ಹೀಗಾಗಿಯೇ ಸುಶಾಂತ್ ಸಿಂಗ್ ಸಾವು ಮತ್ತು ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣದ ಹಿಂದಿನ ಸತ್ಯ ಹೊರಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಬಾಲಿವುಡ್ ಸೆಲೆಬ್ರಿಟಿಗಳು, ದೇಶದ ಪ್ರಖ್ಯಾತ ಸಿರಿವಂತ ಉದ್ಯಮಿಗಳ ಮಕ್ಕಳೂ ಈ ಓರಿಗೆ ಕ್ಲೋಸ್. ಅಷ್ಟೇ ಅಲ್ಲ ಹಿಂದೊಮ್ಮೆ ಸ್ಮೃತಿ ಇರಾನಿಯನ್ನೂ ಬೇಟಿಯಾದ ಫೋಟೋ ಶೇರ್ ಮಾಡಿಕೊಂಡಿದ್ದ ಈ ಪುಣ್ಯಾತ್ಮ.

ಮೊನ್ನೆಯಷ್ಟೇ ಬಾಲಿವುಡ್ ಬಾದ್‌ ಷಾ ಕಿಂಗ್‌ ಖಾನ್ ಬರ್ತಡೇ ಬಹಳ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭದಲ್ಲೂ ಬಾಲಿವುಡ್‌ ಹೆಂಗೆಳೆಯರ ಜೊತೆ ಮಿಂಚಿದ್ದ ಓರಿಯ ಬಗ್ಗೆ ಜನ  ಆತ ಯಾರು ಯಾರು ಎಂದು ಪ್ರಶ್ನೆ ಮಾಡಿ, ಆತನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದರು.

ಯಾರಿಗೂ ಅಷ್ಟು ಸುಲಭವಾಗಿ ಸಿಗದ ಬಾಲಿವುಡ್‌ ನಟಿಯರನ್ನು ಬಿಗಿಯಾಗಿ ತಬ್ಬಿಕೊಂಡು ಪೋಸ್ ಕೊಡುವ ಈ ಓರಿ ಬಗ್ಗೆ ಜನ ಕುತೂಹಲದಿಂದ ಆತ ಯಾರು ಎಂದು ಪ್ರಶ್ನೆ ಮಾಡಿದ್ದರು. ಈ ಓರಿ ಬಾಲಿವುಡ್ ತಾರೆಯರ ಎದೆ, ತೊಡೆಯ ಮೇಲೆಲ್ಲಾ ಕೈಯಿಟ್ಟು ತೆಗೆಸಿಕೊಂಡ ಪೋಟೋಗಳನ್ನು ನೋಡಿ ಜನ ಕೆಂಡಾಮಂಡಲವಾಗಿದ್ದು, ಹೂ ಇಸ್ ದಿಸ್ ಹೆಲ್ ಎಂದು ಕಾಮೆಂಟ್ ಮಾಡಿದ್ದರು. 

ಮತ್ತೆ ಕೆಲವರು ನಟಿಯರೇ ಆತ ಹೀಗೆ ಕೈ ಇಟ್ಟರೂ ಸುಮ್ಮನಿರುವಾಗ ನಿಮಗೇನು ಸಮಸ್ಯೆ ಎಂದು ಕಾಮೆಂಟ್ ಮಾಡಿದವರನ್ನೇ ಮರು ಪ್ರಶ್ನಿಸಿದ್ದರು. ಮತ್ತೆ ಕೆಲವರು ಈ ನಟಿಯರೆಲ್ಲಾ ಆತ ಎಲ್ಲಿ ಕೈ ಇಟ್ಟರೂ ಸುಮ್ಮನಿರುವುದೇಕೆ ಇದು ಓರಿಯ ಸಮಸ್ಯೆ ಅಲ್ಲ ಇದು ಆತನನ್ನು ತಮ್ಮ ದೇಹದ ಮೇಲೆಲ್ಲಾ ಕೈ ಇಡಲು ಬಿಡುವ ಇವರದ್ದೇ ಸಮಸ್ಯೆ ಎಂದು ಕಾಮೆಂಟ್ ಮಾಡಿದ್ದರು.

ಈತನಿಗೆ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ನ ಅನೇಕ ಸೆಲೆಬ್ರಿಟಿಗಳ ಜೊತೆಗೂ ಉತ್ತಮ ಬಾಂಧವ್ಯವಿದೆ. ಅನ್ನಾ ಹಾತವೇ, ಕಿಮ್ ಕರ್ದಾಶಿಯನ್ ಕುಟುಂಬ ಮುಂತಾದವರ ಜೊತೆ ಈತನಿಗೆ ಒಳ್ಳೆಯ ಒಡನಾಟವಿದೆ. 

ಇಂತಹ ಓರಿಗೆ ಇನ್ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. ಈತ ಬರೀ ಫ್ಯಾಷನ್ ಇನ್‌ಫ್ಲುಯೆನ್ಸರ್ ಮಾತ್ರವಲ್ಲದೇ ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ವಿಶೇಷ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಾನೆ. 

ಜಾನ್ವಿ ಕಪೂರ್‌ನಿಂದ ಹಿಡಿದು ಕರೀನಾ, ದೀಪಿಕಾ ಪಡುಕೋಣೆವರೆಗೆ ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳ ಜೊತೆ ಈ ಓರಿ ಅಲಿಯಾಸ್ ಒರ್ಹನ್ ಅವತ್ರಮಣಿ ಪೋಸ್‌ ನೀಡ್ತಾನೆ.

ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಯಾವುದೇ ಮುಜುಗರವಿಲ್ಲದೇ ಈತನನ್ನು ಬಿಗಿದಪ್ಪಿಕೊಂಡು ಸಖತ್ ಆಗಿ ಪೋಸ್ ನೀಡ್ತಾರೆ. ಸೆಲೆಬ್ರಿಟಿಗಳ ಜೊತೆ ಈತ ಇರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

ಒರಿ ಅಲಿಯಾಸ್ ಒರ್ಹಾನ್ ಜನಿಸಿದ್ದು, 1992ರ ಆಗಸ್ಟ್ 2 ರಂದು, ಶ್ರೀಮಂತ ಮನೆತನದಿಂದ ಬಂದ ಈ ಹುಡುಗ ಕಲಿತಿದ್ದೆಲ್ಲಾ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ. ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಈತನ ಕ್ಲಾಸ್‌ಮೇಟ್. 

ಇನ್ನು ಈ ಓರಿಯ ಸಹೋದರ ಕೂಡ ನ್ಯೂಯಾರ್ಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೊಲ್ಲೀಸ್‌ ಹೆಲ್ತ್‌ನಲ್ಲಿ ಸಾರ್ವಜನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಬಾಲಿವುಡ್‌ನ ಝೆಡ್‌ ಜನರೇಷನ್‌ ಹಾಗೂ ಸ್ಟಾರ್‌ ಕಿಡ್‌ಗಳಾಗಿರುವ ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಭೂಮಿ ಪಡ್ನೇಕರ್, ಇಬ್ರಾಹಿಂ ಖಾನ್‌ ಮುಂತಾದವರ ಜೊತೆ ಆಗಾಗ ಪಾರ್ಟಿಗಳಲ್ಲಿ ಭಾಗವಹಿಸುತ್ತಾ, ಫೋಟೋಗಳಿಗೆ ಫೋಸ್‌ ನೀಡ್ತಿರುವ ಓರಿ ಇದೇ ಕಾರಣದಿಂದ ಜನಪ್ರಿಯತೆ ಗಳಿಸಿದ್ದಾರೆ. ಬಾಲಿವುಡ್‌ನಲ್ಲಿರುವ ನಾನು ಜೊತೆಗೆ ತಿರುಗಾಡುವ ಕೆಲವರು ನನ್ನ ಕ್ಲಾಸ್‌ಮೇಟ್‌ಗಳು ಎಂದು ಸಂದರ್ಶನವೊಂದರಲ್ಲಿ ಓರಿ ಹೇಳಿಕೊಂಡಿದ್ದರು. 

Latest Videos

click me!