ಬಾಲಿವುಡ್‌ ಹಿಟ್ ನಟಿ ಪತಿಯನ್ನು ತಂಗಿಗೆ ಬಿಟ್ಟು ಕೊಟ್ಟು ಒಬ್ಬಂಟಿಯಾದಾಗ ಹೊಸ ಜೀವನ ಕೊಟ್ಟಿದ್ದು ಸಲ್ಮಾನ್‌ ಖಾನ್!

Published : Nov 07, 2023, 08:39 PM IST

ಫೇಮಸ್‌ ಪಾಕಿಸ್ತಾನಿ ನಟಿಯ ವೃತ್ತಿಜೀವನ ಪ್ರಾರಂಭವಾಗಿ ಮದುವೆ ಬಳಿಕ ತೆರೆಮರೆಗೆ ಸರಿಯಿತು. ಗಂಡ ಮತ್ತು ಸ್ವಂತ ತಂಗಿ ಮೋಸ ಮಾಡಿ ಅವರಿಬ್ಬರೂ ವಿವಾಹವಾಗಿ ಶಾಕ್‌ ಕೊಟ್ಟಾಗ ನಟಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಸಹಾಯಕ್ಕೆ ಬಂದಿದ್ದು  ನಟ ಸಲ್ಮಾನ್‌ ಖಾನ್‌. ಇಂದು ನಟಿ ಎಲ್ಲರನ್ನೂ ತೊರೆದು ಭಾರತದಲ್ಲಿ ನೆಲೆಸಿದ್ದಾರೆ.

PREV
15
ಬಾಲಿವುಡ್‌ ಹಿಟ್ ನಟಿ ಪತಿಯನ್ನು ತಂಗಿಗೆ ಬಿಟ್ಟು ಕೊಟ್ಟು ಒಬ್ಬಂಟಿಯಾದಾಗ ಹೊಸ ಜೀವನ ಕೊಟ್ಟಿದ್ದು ಸಲ್ಮಾನ್‌ ಖಾನ್!

ಹುಮಾ ಖಾನ್ 60 ರ ದಶಕದಲ್ಲಿ ಪಾಕಿಸ್ತಾನದಲ್ಲಿ ಜನಿಸಿದ ನಟಿ. ಅವರು ಪಾಕಿಸ್ತಾನಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡುವ  ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ಹಿಂದಿ ಚಿತ್ರರಂಗದ ಮೇಲಿನ ಪ್ರೀತಿ, ಮೋಹ  ಆಕೆಯನ್ನು 80ರ ದಶಕದಲ್ಲಿ ಭಾರತಕ್ಕೆ ಕರೆತಂದಿತು. 

25

ಭಾರತಕ್ಕೆ ಬಂದ ನಂತರ ಹುಮಾ ಬಾಲಿವುಡ್‌ ನಟ ಸಲ್ಮಾನ್ ಖಾನ್  ಅವರೊಂದಿಗೆ ಸ್ನೇಹಿತರಾದರು. ಈ ನಟನ ಸ್ನೇಹವು ಸೂರಜ್ ಬರ್ಜಾತ್ಯಾ ಅವರ ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ನಟಿಸುವಂತೆ ಮಾಡಿತು. ಆಕೆಯ ಪಾತ್ರವು ಚಿಕ್ಕದಾಗಿದ್ದರೂ, ಚಿತ್ರವು ಬಾಕ್ಸ್ ಆಫೀಸ್ ದಾಖಲೆಯ ಹಿಟ್‌ ಆಯ್ತು. ಹುಮಾ ನಂತರ ಮತ್ತೊಂದು ಸಲ್ಮಾನ್ ಚಿತ್ರದಲ್ಲಿ ನಟಿಸಿದರು - ಹಮ್ ಸಾಥ್ ಸಾಥ್ ಹೇ, ಇದು ಕೂಡ ಬ್ಲಾಕ್ಬಸ್ಟರ್ ಹಿಟ್‌ ಆಯ್ತು.
 

35
huma khan

1992 ರಲ್ಲಿ ನಟಿ ಇನ್ನೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾಗ, ಹುಮಾ ಖಾನ್ ತಮ್ಮ ನೆರೆಹೊರೆಯವರೊಂದಿಗೆ ಮನೆಯವರು ನಿಶ್ಚಯಿಸಿದ ಹುಡುಗನನ್ನು  ವಿವಾಹವಾದರು. ಬಳಿಕ ತಮ್ಮ ವೈವಾಹಿಕ ಜೀವನದ ಮೇಲೆ ಕೇಂದ್ರೀಕರಿಸಲು ಚಿತ್ರೋದ್ಯಮವನ್ನು ತೊರೆದರು. ಆದರೆ ವರ್ಷಗಳ ನಂತರ ತನ್ನ ಸ್ವಂತ ಸಹೋದರಿ ಆಕೆಗೆ ಕಂಟಕವಾದರು. ಹುಮಾ ಸಹೋದರಿ ನಯೀಮಾ ಕೂಡ ಪಾಕಿಸ್ತಾನದಲ್ಲಿ ನಟಿಯಾಗಿದ್ದರು.

45

ವರದಿಗಳ ಪ್ರಕಾರ, ಹುಮಾ ಅವರ ಪತಿ ಅವರಿಗೆ ವಿಚ್ಛೇದನ ನೀಡಿ ಸ್ವಂತ ತಂಗಿ ನಯೀಮಾ ಅವರನ್ನು ವಿವಾಹವಾದರು. ಹುಮಾ ಬಳಿಕ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕಳಾಗಿ ಸಾವಿನ ನಿರ್ಧಾರಕ್ಕೂ ಹೋಗಿದ್ದರು. ಕೆಲವು ವರ್ಷಗಳ ಹಿಂದೆ ಬಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ, ಹುಮಾ ತನ್ನ ಜೀವನ ಮತ್ತು ವೃತ್ತಿಜೀವನದಲ್ಲಿ ಏನೂ ಇಲ್ಲದಾಗ ಹಳೆಯ ಸ್ನೇಹಿತ ಸಲ್ಮಾನ್ ಮತ್ತೆ ತನ್ನ ಜೀವನದಲ್ಲಿ ಬಂದು ತನ್ನನ್ನು ಉಳಿಸಿದನೆಂದು ಬಹಿರಂಗಪಡಿಸಿದರು. 

55

 ಸಲ್ಮಾನ್ ತನ್ನ ಕಾನೂನು ಹೋರಾಟದಲ್ಲಿ ಮತ್ತು ಆರ್ಥಿಕವಾಗಿ ಸಹಾಯ ಮಾಡಿದರು ಎಂದು ನಟಿ ಹೇಳಿದರು. ನಾನು ಇಂದು ಬದುಕಿರುವುದಕ್ಕೆ ಸೂಪರ್‌ಸ್ಟಾರ್ ಸಲ್ಲು ಮಾತ್ರ ಕಾರಣ ಎಂದು ನಟಿ ಹೇಳಿದರು. ಹುಮಾ ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಫ್ಯಾಮಿಲಿಯಿಂದ ದೂರವಿದ್ದಾರೆ. ಪಾಕಿಸ್ತಾನ ಬಿಟ್ಟು ಭಾರತದಲ್ಲೇ ನೆಲೆಸಿದ್ದಾರೆ.

Read more Photos on
click me!

Recommended Stories