ದಕ್ಷಿಣಭಾರತದ ಅತ್ಯಂತ ಶ್ರೀಮಂತ ನಟನ ಆಸ್ತಿ ಭರ್ತಿ 200 ಮಿಲಿಯನ್; ರಜನೀಕಾಂತ್‌, ಕಮಲ್ ಹಾಸನ್‌, ವಿಜಯ್ ಅಲ್ಲ!

First Published | Nov 8, 2023, 11:55 AM IST

ಇತ್ತೀಚಿನ ವರ್ಷಗಳಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿ ಹೈ ಬಜೆಟ್‌ ಸಿನಿಮಾ ಮಾಡಿ, ಕೋಟಿಗಟ್ಟಲೆ ಲಾಭ ಗಳಿಸುತ್ತಾ ಸಖತ್ ಸದ್ದು ಮಾಡ್ತಿದೆ. ದಕ್ಷಿಣಭಾರತದ ಅತ್ಯಂತ ಶ್ರೀಮಂತ ನಟನ ಆಸ್ತಿ ಭರ್ತಿ 200 ಮಿಲಿಯನ್ ಆಗಿದೆ. ಆದರೆ ಇದು ರಜನೀಕಾಂತ್‌, ಕಮಲ್ ಹಾಸನ್‌, ವಿಜಯ್ ಅಲ್ಲ. ಮತ್ಯಾರು?

ಭಾರತವು ಹಲವು ರಾಜ್ಯಗಳು ಅನೇಕ ಚಲನಚಿತ್ರ ಉದ್ಯಮಗಳನ್ನು ಹೊಂದಿದೆ. ಬಾಲಿವುಡ್, ಟಾಲಿವುಡ್‌, ಕಾಲಿವುಡ್, ಸ್ಯಾಂಡಲ್‌ವುಡ್‌, ಮಾಲಿವುಡ್‌ ಎಲ್ಲವೂ ತಮ್ಮದೇ ಆದ ಸೂಪರ್‌ಸ್ಟಾರ್‌ಗಳನ್ನು ಹೊಂದಿವೆ. ಆಯಾ ಭಾಷೆಯ ಚಿತ್ರರಂಗದಲ್ಲಿ ಅಲ್ಲಿನ ಬಜೆಟ್‌ಗೆ ಅನುಕ್ರಮವಾಗಿ ನಟ-ನಟಿಯರು ಸಂಭಾವನೆಯನ್ನು ಸಹ ಪಡೆಯುತ್ತಾರೆ.

ನಟರು ಕೇವಲ ಆಕ್ಟಿಂಗ್ ಮಾತ್ರವಲ್ಲದೆ ಬ್ರ್ಯಾಂಡ್‌ಗಳ ಜಾಹೀರಾತಿಗಾಗಿ, ತಮ್ಮದೇ ನಿರ್ಮಾಣ ಸಂಸ್ಥೆಯಿಂದಲೂ ಆದಾಯ ಗಳಿಸುತ್ತಾರೆ. ಹೀಗಾಗಿಯೇ ಭಾರತದಲ್ಲಿ ಕೋಟಿಗಟ್ಟಲೆ ಗಳಿಸೋ ಹಲವಾರು ನಟ-ನಟಿಯರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿ ಹೈ ಬಜೆಟ್‌ ಸಿನಿಮಾ ಮಾಡಿ, ಕೋಟಿಗಟ್ಟಲೆ ಲಾಭ ಗಳಿಸುತ್ತಾ ಸಖತ್ ಸದ್ದು ಮಾಡ್ತಿದೆ.

Latest Videos


ಸಿಯಾಸತ್‌ ಡಾಟ್‌ ಕಾಮ್‌ ಪ್ರಕಾರ, ಭಾರತದ ಅತ್ಯಂತ ಶ್ರೀಮಂತ ನಟ ಶಾರೂಕ್‌ ಖಾನ್. ಅವರ ನಿವ್ವಳ ಮೌಲ್ಯವು 735 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಆದರೆ ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಗೊತ್ತಾ? ಅದು ರಜನಿಕಾಂತ್, ಕಮಲ್ ಹಾಸನ್, ನಾಗಾರ್ಜುನ, ಜೂನಿಯರ್ ಎನ್ಟಿಆರ್, ರಾಮ್ ಚರಣ್, ದಳಪತಿ ವಿಜಯ್ ಅಲ್ಲ. ಬದಲಿಗೆ ಮೆಗಾ ಸ್ಟಾರ್ ಚಿರಂಜೀವಿ. 

ಚಿರಂಜೀವಿ, ನಿವ್ವಳ ಮೌಲ್ಯ ಸುಮಾರು 200 ಮಿಲಿಯನ್ ಎಂದು ತಿಳಿದುಬಂದಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಲನಚಿತ್ರೋದ್ಯಮಗಳಲ್ಲಿ ಎರಡನೇ ಶ್ರೀಮಂತ ವ್ಯಕ್ತಿ ಚಿರಂಜೀವಿ ಅವರ ಮಗ ರಾಮ್ ಚರಣ್. ಆರ್‌ಆರ್‌ಆರ್‌ನ ಐತಿಹಾಸಿಕ ಗೆಲುವಿನ ನಂತರ ಇವರ ಒಟ್ಟು ಆಸ್ತಿಯ ಮೊತ್ತ ಬರೋಬ್ಬರಿ 175 ಮಿಲಿಯನ್ ಆಗಿದೆ.

ಸಿಯಾಸತ್‌ ಡಾಟ್‌ ಕಾಮ್‌ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ವಾರ್ಷಿಕ ಗಳಿಕೆಯು 100 ಮಿಲಿಯನ್‌ಗಿಂತಲೂ ಹೆಚ್ಚಿರುವ ದಕ್ಷಿಣ ಭಾರತದ ಏಕೈಕ ಮೂರನೇ ನಟ, ಅಕ್ಕಿನೇನಿ ನಾಗಾರ್ಜುನ ರಾವ್. 2023ರಲ್ಲಿ ಅವರ ನಿವ್ವಳ ಮೌಲ್ಯ ಸುಮಾರು 123 ಮಿಲಿಯನ್ ಆಗಿತ್ತು ಎಂದು ಅಂದಾಜಿಸಲಾಗಿದೆ. ಅವರ ಮಗ ನಾಗ ಚೈತನ್ಯ ಕೂಡ ಟಾಲಿವುಡ್‌ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು.

ಭಾರತದ ಅಗ್ರ 20 ಶ್ರೀಮಂತ ನಟರ ಪಟ್ಟಿಯಲ್ಲಿ ಜೂನಿಯರ್ NTR, ದಳಪತಿ ವಿಜಯ್ ಮತ್ತು ರಜನಿಕಾಂತ್ ಸೇರಿದ್ದಾರೆ. ಅವರ ನಿವ್ವಳ ಮೌಲ್ಯಗಳು ಕ್ರಮವಾಗಿ 60 ಮಿಲಿಯನ್, 56 ಮಿಲಿಯನ್ ಮತ್ತು 55 ಮಿಲಿಯನ್ ಆಗಿದೆ. 

ಈ ಪಟ್ಟಿಯಲ್ಲಿ ಮೂವರು ನಟಿಯರೂ ಇದ್ದಾರೆ. ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಮತ್ತು ಕರೀನಾ ಕಪೂರ್ ಖಾನ್ ಅವರ ನಿವ್ವಳ ಮೌಲ್ಯ ಕ್ರಮವಾಗಿ 75 ಮಿಲಿಯನ್, 60 ಮಿಲಿಯನ್ ಮತ್ತು 60 ಮಿಲಿಯನ್ ಎಂದು ತಿಳಿದುಬಂದಿದೆ.

click me!