Katrina Kair Family: ಒಲಿಂಪಿಕ್ಸ್ ಸ್ಟಾರ್ ಮೈಕೆಲ್ ಫೆಲ್ಪ್ಸ್‌ಕತ್ರಿನಾರ ಸಹೋದರನಾ?

First Published | Dec 6, 2021, 7:43 PM IST

ಈ ದಿನಗಳಲ್ಲಿ ಕತ್ರಿನಾ ಕೈಫ್‌ (Katrina Kaif) ಸಖತ್‌ ಸುದ್ದಿಯಲ್ಲಿದ್ದಾರೆ. ಅವರಿಗೆ ಸಂಬಂಧಿಸಿದ ಹೊಸ ವರದಿಗಳು ಪ್ರತಿದಿನ ಕಾಣಿಸಿಕೊಳ್ಳುತ್ತಿದೆ .ಈ ನಡುವೆ ಕತ್ರಿನಾ ಕೈಫ್ ಅವರ ಸಹೋದರ 'ಒಲಿಂಪಿಕ್ಸ್ ಸ್ಟಾರ್' ಮೈಕೆಲ್ ಫೆಲ್ಪ್ಸ್ (Michael Phelps) ಎಂದು ಗೂಗಲ್ ಸರ್ಚ್ ಏನು ಹೇಳುತ್ತಿದೆ. ಈ ವಿಷಯ ಸಖತ್‌  ವೈರಲ್‌ ಆಗಿದೆ.  

ಬಾಲಿವುಡ್ ನಟಿ ಕತ್ರಿನಾ ಕೈಫ್ ವಿಕ್ಕಿ ಕೌಶಲ್‌ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಡಿಸೆಂಬರ್ 7, 8 ಮತ್ತು 9 ರಂದು ರಾಜಸ್ಥಾನದಲ್ಲಿ ವಿವಾಹ ನಡೆಯಲಿದೆ.

ಕತ್ರಿನಾ ಅವರ ಕುಟುಂಬದವರೆಲ್ಲರೂ ಲಂಡನ್‌ನಿಂದ ಬಂದಿದ್ದಾರೆ. ಆಕೆಯ ತಾಯಿ ಮತ್ತು ಒಡ ಹುಟ್ಟಿದವರು ಅದ್ಧೂರಿ ವಿವಾಹದ ಮೊದಲು ತಮ್ಮ ಕೊನೆಯ ಕ್ಷಣದ ಕೆಲಸಗಳಲ್ಲಿ ಬ್ಯುಸಿಯಾಗಿರುವುದು ಕಂಡು ಬಂದಿದೆ,

Tap to resize

ಕತ್ರಿನಾ ಆರು ಸಹೋದರಿಯರು ಮತ್ತು ಒಬ್ಬ ಸಹೋದರನೊಂದಿಗೆ ಏಳು ಒಡ ಹುಟ್ಟಿದವರನ್ನು ಹೊಂದಿರುವ ದೊಡ್ಡ ಕುಟಂಬದವರು. ಕತ್ರಿನಾಗೆ ಮೂವರು ಹಿರಿಯ ಸಹೋದರಿಯರು, ಮೂವರು ಕಿರಿಯ ಸಹೋದರಿಯರು ಮತ್ತು ಒಬ್ಬ ಅಣ್ಣ ಇದ್ದಾರೆ.

ಕತ್ರಿನಾ ಕೈಫ್ ಸಹೋದರನ ಬಗ್ಗೆ ಸರ್ಚ್‌ ಮಾಡಿದರೆ ಗೂಗಲ್ ಪ್ರಕಾರ ಒಲಿಂಪಿಕ್ಸ್ (Olympics) ಚಿನ್ನದ ಪದಕ (Gold Medal) ವಿಜೇತ ಮೈಕೆಲ್ ಫೆಲ್ಪ್ಸ್ ಎಂದು ತೋರಿಸುತ್ತದೆ.

ಗೂಗಲ್ ಸರ್ಚ್ (Google Search) ಪ್ರಕಾರ ಕತ್ರಿನಾ ಕೈಫ್ ಅವರ ಸಹೋದರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮೈಕೆಲ್ ಫೆಲ್ಪ್ಸ್ ಮತ್ತು ನಟಿಯೊಂದಿಗೆ ಮೈಕೆಲ್ ಫೆಲ್ಪ್ ಫೋಟೋ ಸಹ ತೋರಿಸುತ್ತಿದೆ.  ಮೈಕೆಲ್ ಫೆಲ್ಪ್   ಚಾಂಪಿಯನ್ ಈಜುಗಾರ. ಹಾಗೂ ಒಲಿಂಪಿಕ್ಸ್‌ ಸ್ಟಾರ್‌.

ಆದಾಗ್ಯೂ,  ಕತ್ರಿನಾ ಅವರ ನಿಜವಾದ ಸಹೋದರ ಹೆಸರು ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿದು ಬಂದಿದೆ. ಅವರು ಕೆಲವು ವರ್ಷಗಳ ಹಿಂದೆ ಕತ್ರಿನಾ ಸೇರಿದಂತೆ ಕೆಲವು ಸಹೋದರಿಯರೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. 

ಈಗ ಮೈಕೆಲ್ ತನ್ನ Instagram ಖಾತೆಯಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಮುಂಬೈ ಸ್ಕೈಲೈನ್‌ನ ಬ್ಯಾಕ್‌ಗ್ರಾಂಡ್‌ನಲ್ಲಿ ಇರಿಸಲಾದ ಕಾಕ್‌ಟೈಲ್ ಗ್ಲಾಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಫೋಟೋಗೆ ' 'India feeds the soul; debauchery in a different environment' ಶೀರ್ಷಿಕೆ ನೀಡಿದ್ದಾರೆ

ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರು ಜಿಮ್‌ಗೆ ಹೋಗುವಾಗ ಸಹೋದರಿ ಕತ್ರಿನಾ ಅವರೊಂದಿಗೆ ಕಾಣಿಸಿಕೊಂಡರು ಮತ್ತು ನಂತರ ಸಂಜೆ, ಮೈಕೆಲ್ ಒಬ್ಬರೇ ಜಿಮ್‌ಗೆ ಹೋಗಲು ನಟಿಯ ಮನೆಯಿಂದ ಹೊರಬರುವಾಗ ಕ್ಲಿಕ್‌ ಮಾಡಲಾಗಿದೆ.

ಕತ್ರಿನಾ ಕೈಫ್ ಅವರ ಮದುವೆಯ ಬಗ್ಗೆ ಕೆಲವು ಸ್ಕೂಪ್‌ಗಾಗಿ ಕಾಯುತ್ತಿರುವ ಪಾಪ್‌ಗಳಿಗೆ ಅವರು ಕೈ ಬೀಸಿದರು. ಡಿಸೆಂಬರ್ 5 ಮತ್ತು 6 ರಂದು ರಾಜಸ್ಥಾನದ ಸವಾಯಿ ಮಾಧೋಪುರದ ರೆಸಾರ್ಟ್‌ನಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಮದುವೆ ಸ್ಥಳಕ್ಕೆ ಕುಟುಂಬವು ಪ್ರಯಾಣ ಮಾಡುವ ನಿರೀಕ್ಷೆಯಿದೆ.

ದೀಪಾವಳಿ ಸಂದರ್ಭದಲ್ಲಿ ಕತ್ರಿನಾ ಮತ್ತು ವಿಕ್ಕಿ ಮುಂಬೈನಲ್ಲಿರುವ ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್ ಅವರ ಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭವನ್ನು ನಡೆಸಿದ್ದರು ಮತ್ತು ಇದು ಸಿಕ್ರೇಟ್‌ ಸಂಗತಿಯಾಗಿತ್ತು. ಇದರಲ್ಲಿ ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು ಎಂದು ವರದಿಯಾಗಿದೆ.  

ಕತ್ರಿನಾ ಅವರ ಕಡೆಯಿಂದ ತಾಯಿ ಸುಝೇನ್ ಟರ್ಕೊಯೆಟ್ ಮತ್ತು ಸಹೋದರಿ ಇಸಾಬೆಲ್ಲೆ ಕೈಫ್ ಉಪಸ್ಥಿತರಿದ್ದರು  ಮತ್ತು ವಿಕ್ಕಿಯ ಕಡೆಯಿಂದ, ಅವರ ಪೋಷಕರು, ಶಾಮ್ ಕೌಶಲ್ ಮತ್ತು ವೀಣಾ ಕೌಶಲ್ ಮತ್ತು ಸಹೋದರ ಸನ್ನಿ ಕೌಶಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Latest Videos

click me!