Bollywood Actors Spotted: ಹಾಟ್‌ ಆವತಾರದಲ್ಲಿ ಸಾರಾ, ಕ್ಯಾಶುವಲ್‌ ಲುಕ್‌ನಲ್ಲಿ ಅಹಾನ್‌ !

Published : Dec 06, 2021, 03:24 PM IST

ಸಾರಾ ಅಲಿ ಖಾನ್ (Sara Ali Khan), ಅಹಾನ್ ಶೆಟ್ಟಿ (Ahan Shetty) ಮತ್ತು ಇನ್ನೂ ಅನೇಕ ಸೆಲೆಬ್ರೆಟಿಗಳು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಅದೇ ಸಮಯದಲ್ಲಿ  ಅಹಾನ್ ಶೆಟ್ಟಿ ಕ್ಯಾಶುಯಲ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಯಾವ ನಟ ನಟಿಯರು  ಏನು ಮಾಡುತ್ತಿದ್ದಾರೆ ಎಂಬ ಅಪ್‌ಡೇಟ್ಸ್‌ ಇಲ್ಲಿದೆ.  

PREV
17
Bollywood Actors Spotted: ಹಾಟ್‌ ಆವತಾರದಲ್ಲಿ ಸಾರಾ, ಕ್ಯಾಶುವಲ್‌ ಲುಕ್‌ನಲ್ಲಿ ಅಹಾನ್‌ !

ಸಾರಾ ಅಲಿ ಖಾನ್ ತಮ್ಮ ಬಟ್ಟೆ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಎಥ್ನಿಕ್  ಫ್ಯಾಶನ್ ಮೂಲಕ ಮ್ಯಾಜಿಕ್ ಅನ್ನು ಸೃಷ್ಟಿಸುತ್ತಾರೆ.  ನಟಿ ಬಿಗ್ ಬಾಸ್ ಸೆಟ್‌ನಲ್ಲಿ ಸರಳವಾದ ಬಿಳಿ ಮತ್ತು ಕೆಂಪು ಫಂಕಿ ಕುರ್ತಾದಲ್ಲಿ ಕಾಣಿಸಿಕೊಂಡರು. ಸಾರಾ ಅವರ ಈ ಲುಕ್‌ ಎಲ್ಲಾ ಫ್ಯಾಷನ್ ಪ್ರಿಯರನ್ನು ಆಶ್ಚರ್ಯಗೊಳಿಸಿದೆ. 

27

ಕಬೀರ್ ಖಾನ್ (Kabir Khan) ಮತ್ತು ಮಿನಿ ಮಾಥುರ್ (Mini Mathur) ಮದುವೆಯಾಗಿ 23 ವರ್ಷಗಳಾಗಿವೆ. ಕಳೆದ ದಿನ  ಈ ಜೋಡಿ ಸನ್ನಿ ಸೂಪರ್ ಸೌಂಡ್ ನಲ್ಲಿ ಕಾಣಿಸಿಕೊಂಡಿದೆ. ಕಬೀರ ಅವರ ಮುಂದಿನ ಚಿತ್ರ '83ರ ಟ್ರೈಲರ್‌ ಈಗಾಗಲೇ ಸಾಕಷ್ಟು ಜನಮನ ಗೆದ್ದಿದೆ.

37

ವಿಮಾನ ನಿಲ್ದಾಣದಲ್ಲಿ ವರುಣ್ ಧವನ್ (Varun Dhawan) ಕಾಣಿಸಿಕೊಂಡಿದ್ದಾರೆ. ಅವರ ಪತ್ನಿ ನತಾಶಾ ದಲಾಲ್ ಅವರು ಸೇ ಯೆಸ್ ಟು ಡ್ರೆಸ್ ಇಂಡಿಯಾ ಹೆಸರಿನ ವೆಬ್ ಶೋ ಮೂಲಕ OTT ಗೆ ಪಾದಾರ್ಪಣೆ ಮಾಡುತ್ತಾರೆ. ವರುಣ್ ಅವರ ಪತ್ನಿ ನ್ಯೂಯಾರ್ಕ್‌ನ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (FIT) ಯಲ್ಲಿ ಫ್ಯಾಶನ್ ಡಿಸೈನಿಂಗ್ ಅಧ್ಯಯನ ಮುಗಿಸಿದ್ದಾರೆ.
 


 

 

47

ಸೋನು ಸೂದ್ (Sonu Sood) ಅವರು ದೆಹಲಿಯಲ್ಲಿ  ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್  ಜೊತೆ ಮೀಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದರು.


 

57

ಮುಂಜಾನೆ ಬಾಂದ್ರಾದಲ್ಲಿರುವ ಕ್ಲಿನಿಕ್‌ನ ಹೊರಗೆ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ  ಶಾರ್ಟ್ಸ್ ಮತ್ತು ಟ್ಯಾಂಕ್ ಟಾಪ್‌ ಧರಸಿದ್ದ ಜಾನ್ವಿ ಹಾಟ್ ಆಗಿ ಕಾಣಿಸಿಕೊಂಡರು. 

67

ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ತಡಪ್ ಬಿಡುಗಡೆಯಾಗಿದೆ ಮತ್ತು ಅವರು ಇಂದು ಮುಂಜಾನೆ ಬಾಂದ್ರಾದ ಗೈಟಿ ಗ್ಯಾಲಕ್ಸಿ ಚಿತ್ರಮಂದಿರದ ಹೊರಗೆ ಕಾಣಿಸಿಕೊಂಡರು. ತಡಪ್‌ ನಿರ್ದೇಶಕರು ಇತ್ತೀಚೆಗೆ  ಏಷಿಯಾನೆಟ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, 'ಅಹಾನ್ ತುಂಬಾ ತೀವ್ರವಾದ ಮತ್ತು ಭಾವನಾತ್ಮಕ ನಟ ಹಾಗೂ ಅವರು ತುಂಬಾ ಸಹಜವಾದ ನಟ. ಅವರು ಹೆಚ್ಚು ಯೋಚಿಸುವುದಿಲ್ಲ.  ನಿರ್ದೇಶಕರು ಏನು ಮಾಡಬೇಕೆಂದು ಬಯಸುತ್ತಾರೆ ಎಂಬುದನ್ನು ಅವರು ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೆ' ಎಂದು ಹೇಳಿದ್ದಾರೆ.

77

ಕಿಯಾರಾ ಅಡ್ವಾಣಿ (Kiara Advani) ವಿಂಟರ್‌ ಔಟ್‌ಫಿಟ್‌ ನಲ್ಲಿ ಚಿಕ್ ಆಗಿ ಕಾಣುತ್ತಿದ್ದರು. ಕಿಯಾರಾ ಈ ದಿನಗಳಲ್ಲಿ ಸಿಧಾರ್ಥ್‌ ಮಲ್ಹೋತ್ರ ಅವರ ಸಂಬಂಧದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತವೆ. ಈ ಬಾರಿ ಜೊತೆಯಾಗಿ ನಟಿಸಿದ ಶೇರ್ಶಾ ಸಿನಿಮಾವು ಸಖತ್‌ ಮೆಚ್ಚುಗೆ ಗಳಿಸಿದೆ. 

Read more Photos on
click me!

Recommended Stories