Katrina Kaif spotted at Vicky Kaushal's home: ಮದುವೆಗೆ ಮುನ್ನಾದಿನ ಬಿಳಿ ಸೀರೆಯಲ್ಲಿ ಕತ್ರೀನಾ, ಮುಖದಲ್ಲಿ ವಧುವಿನ ಕಳೆ

First Published | Dec 6, 2021, 12:17 AM IST

Katrina Kaif wedding: ಬಾಲಿವುಡ್ ನಟಿ ಮದುವೆಗೆ ರೆಡಿಯಾಗಿದ್ದಾರೆ. ಮದುವೆ ಸಿದ್ಧತೆಯಲ್ಲಿರೋ ಕತ್ರೀನಾ ಶ್ವೇತಾಂಬರಿಯಾಗಿ ವರನ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಧು ಕತ್ರಿನಾ ಕೈಫ್(Katrina Kaif) ಭಾನುವಾರ ರಾತ್ರಿ ವಿಕ್ಕಿ ಕೌಶಲ್ ಅವರ ಮನೆಗೆ ಸಾಂಪ್ರದಾಯಿಕ ಸ್ಟೈಲ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಈ ವಾರದ ಕೊನೆಯಲ್ಲಿ ರಾಜಸ್ಥಾನದಲ್ಲಿ ಸಲೆಬ್ರಿಟಿ ಜೋಡಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾಪರಾಜಿಗಳು ಹಂಚಿಕೊಂಡ ಚಿತ್ರಗಳು ಮತ್ತು ವೀಡಿಯೊಗಳಲ್ಲಿ, ಕತ್ರಿನಾ ಕೈಫ್ ಬಿಳಿ ಸೀರೆಯನ್ನು ಧರಿಸಿ, ಸಾಂಪ್ರದಾಯಿಕ ಶೈಲಿಯ ಕಿವಿಯೋಲೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ನಟಿ ತನ್ನ ಕೂದಲನ್ನು ಸಡಿಲವಾಗಿ ಬಿಟ್ಟು ಕಡಿಮೆ ಮೇಕಪ್ ಮಾಡಿದ್ದರು.

ವಾರಾಂತ್ಯದಲ್ಲಿ, ಕತ್ರಿನಾ ಕೈಫ್ ಮತ್ತು ಅವರ ಕುಟುಂಬ ಸದಸ್ಯರು ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಆಕೆಯ ತಾಯಿ ಸುಝೇನ್ ಟರ್ಕೋಟ್, ಸಹೋದರಿ ಇಸಾಬೆಲ್ಲೆ ಕೈಫ್ ಮತ್ತು ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರು ಮದುವೆ ಕೆಲಸಗಳನ್ನು ನಡೆಸುತ್ತಿರುವಂತೆ ಕಂಡುಬಂದಿದೆ. ವಿವಾಹದ(Marriage) ಸಿದ್ಧತೆಗಳ ನಡುವೆ ವಿಕ್ಕಿ ಕೌಶಲ್ ತನ್ನ ಹಳೆಯ ಕಾರನ್ನು ಕತ್ರಿನಾ ಅವರ ತಾಯಿಗೆ ಬಳಸಲು ನೀಡಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ವಿಕ್ಕಿ ಕೂಡ ಶನಿವಾರ ರಾತ್ರಿ ಕತ್ರಿನಾ ಮನೆಗೆ ಭೇಟಿ ನೀಡಿದ್ದರು.

Latest Videos


ಕತ್ರಿನಾ ಮತ್ತು ವಿಕ್ಕಿ ತಮ್ಮ ಸಂಬಂಧ ಮತ್ತು ಮದುವೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡದಿದ್ದರೂ, ಅವರ ಸ್ನೇಹಿತರು ಅವರ ಸಂಬಂಧದ ಬಗ್ಗೆ ಸುಳಿವು ನೀಡಿದ್ದಾರೆ. ವಿಕ್ಕಿ ಅವರ ನೆರೆಹೊರೆಯವರು, ಹಾಸ್ಯನಟ-ನಟ ಕೃಷ್ಣ ಅಭಿಷೇಕ್ ಅವರು ಮದುವೆ ನಡೆಯುತ್ತಿದೆ ಎಂದು ಖಚಿತಪಡಿಸಿದ್ದಾರೆ. ಆದರೆ ದಂಪತಿಗಳು ಅದರ ಬಗ್ಗೆ ಮೌನವಾಗಿದ್ದಾರೆ.

ರಾಜಸ್ಥಾನದ(Rajasthan) ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಮತ್ತು ವಿಕ್ಕಿ ವಿವಾಹವಾಗಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಡಿಸೆಂಬರ್ 6 ರಿಂದ 11 ರವರೆಗೆ ಸ್ಥಳವನ್ನು ಕಾಯ್ದಿರಿಸಲಾಗಿದೆ. ಮದುವೆಯಲ್ಲಿ ಮೆಹೆಂದಿ ಮತ್ತು ಸಂಗೀತದಂತಹ ಕಾರ್ಯಗಳೂ ಒಳಗೊಂಡಿರುತ್ತದೆ.

ದಂಪತಿಗಳು ತಮ್ಮ ಅತಿಥಿ ಪಟ್ಟಿಯನ್ನು 120 ಜನರಿಗೆ ಸೀಮಿತಗೊಳಿಸಿದ್ದಾರೆ. ಕೈರಾ ಅಡ್ವಾಣಿ ಅವರು ಮದುವೆಗೆ ಆಹ್ವಾನವನ್ನು ಸ್ವೀಕರಿಸಿಲ್ಲ ಎಂದು ಇತ್ತೀಚೆಗೆ ಖಚಿತಪಡಿಸಿದ್ದರು. ಭಾರತ್ ನಿರ್ದೇಶಕ ಕಬೀರ್ ಖಾನ್, ಆನಂದ್ ಎಲ್ ರೈ, ಕರಣ್ ಜೋಹರ್ ಮತ್ತು ಫರಾ ಖಾನ್ ಭಾಗವಹಿಸುವ ನಿರೀಕ್ಷೆಯಿದೆ.

ಸವಾಯಿ ಮಾಧೋಪುರ್ ಜಿಲ್ಲಾಧಿಕಾರಿ ರಾಜೇಂದ್ರ ಕಿಶನ್ ಮಾತನಾಡಿ, ನಮಗೆ ತಿಳಿಸಿರುವ ಪ್ರಕಾರ ಡಿಸೆಂಬರ್ 7 ರಿಂದ 10 ರವರೆಗೆ ನಾಲ್ಕು ದಿನಗಳವರೆಗೆ 120 ಅತಿಥಿಗಳು ಇರುತ್ತಾರೆ. ಎಲ್ಲಾ ಅತಿಥಿಗಳು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆಯಬೇಕು ಎಂದು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು. ಲಸಿಕೆ ಡೋಸ್ ತೆಗೆದುಕೊಳ್ಳದವರಿಗೆ RTPCR ಪರೀಕ್ಷೆ ಕಡ್ಡಾಯವಾಗಿದೆ.

click me!