ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್? ಟ್ಯಾಟೂ ಜೊತೆ ಗುಟ್ಟು ಬಿಚ್ಚಿಟ್ರಾ ಕಲ್ಕಿ ನಟಿ?

First Published | Jul 2, 2024, 12:38 PM IST

ದಿಶಾ ಪಟಾನಿ ತಮ್ಮ ಕಲ್ಕಿ ಸಹನಟ ಪ್ರಭಾಸ್ ಜೊತೆ ಡೇಟಿಂಗ್ ಆರಂಭಿಸಿದ್ದಾರಾ? ಇಂಥದೊಂದು ಅನುಮಾನ ಹುಟ್ಟು ಹಾಕಿದೆ ಅವರ ಕೈ ಮೇಲಿನ ಟ್ಯಾಟೂ..
 

ದಿಶಾ ಪಟಾನಿ ಅಂದ್ರೆ ಹಾಟ್ನೆಸ್‌ಗೆ ಮತ್ತೊಂದು ಪದವೇ ಸರಿ. ಸದಾ ಹಾಟೆಸ್ಟ್ ಆಗಿಯೇ ನೋಡುಗರ ಟೆಂಪರೇಚರ್ ಏರಿಸುವ ದಿಶಾ ಈ ಬಾರಿ ಟ್ಯಾಟ್ಯೂಗಾಗಿ ಸುದ್ದಿ ಮಾಡುತ್ತಿದ್ದಾರೆ. 

ದಿಶಾಳ ಇತ್ತೀಚಿನ ಫೋಟೋದಲ್ಲಿ ತಿಳಿ ನೀಲಿ ಬಣ್ಣದ ಕ್ರಾಪ್ಡ್ ಟ್ಯಾಂಕ್ ಟಾಪ್ ಮತ್ತು ಟ್ರೌಸರ್ಸ್, ಜೊತೆಗೆ ಸ್ಟೇಟ್‌ಮೆಂಟ್ ಬ್ಯಾಗ್ ಮತ್ತು ಗಾಗಲ್ಸ್ ಧರಿಸಿ ಕಾಣಿಸಿಕೊಂಡಿದ್ದಾರೆ.

Tap to resize

ಆದರೆ, ಈ ಫೋಟೋದಲ್ಲಿ ನೋಡುಗರ ಗಮನ ಸೆಳೆದಿದ್ದು ಮಾತ್ರ ಅವರ ಕೈ ಮೇಲಿನ ಹೊಸ ಟ್ಯಾಟೂ. 'ಪಿಡಿ' ಎಂದು ಇದರಲ್ಲಿ ಬರೆಯಲಾಗಿದೆ.

ಇದೀಗ ನೆಟ್ಟಿಗರು ಪಿಡಿ ಎಂದರೆ ಯಾರು ಎಂದು ಗೆಸ್ಸಿಂಗ್ ಗೇಮ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರು ಇದು 'ಪ್ರಭಾಸ್- ದಿಶಾ' ಎಂದು ಡಿಕೋಡ್ ಮಾಡಿದ್ದರೆ, ಕೆಲವರು, 'ಪ್ರಭಾಸ್ ಡಾರ್ಲಿಂಗ್' ಎನ್ನುತ್ತಿದ್ದಾರೆ. 

ಪ್ರಭಾಸ್ ಮತ್ತು ದಿಶಾ ಇಬ್ಬರೂ ಕಳೆದ ವಾರ ಬಿಡುಗಡೆಯಾದ ಕಲ್ಕಿ 2898 ಎಡಿ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದು, ಈ ಸಮಯದಲ್ಲಿ ಕುಚ್ ಕುಚ್ ಹೋ ಗಯಾ ಹೈ, ಇಬ್ರೂ ಡೇಟಿಂಗ್ ಮಾಡ್ತಿದಾರೆ ಅಂತಿದಾರೆ ನೆಟಿಜನ್ಸ್. 

ಈ ಹಿಂದೆ ಕಲ್ಕಿ ಶೂಟಿಂಗ್ ಸಮಯದಲ್ಲಿ ನಟಿ ಪ್ರಭಾಸ್‌ರನ್ನು 'ಸ್ವೀಟ್ ಹಾರ್ಟ್' ಎಂದು ಕರೆದಿದ್ದರು. ನಾನು ಜೊತೆಗೆ ಕೆಲಸ ಮಾಡಿದ ಎಲ್ಲ ನಟರಲ್ಲೇ ತುಂಬಾ ಉತ್ತಮ ನಟ, ವ್ಯಕ್ತಿ ಅವರು ಎಂದು ಹಾಡಿ ಹೊಗಳಿದ್ದರು. 

ದಿಶಾ ಪಟಾನಿ ಈ ಹಿಂದೆ ಸೈಬೀರಿಯನ್ ಮಾಡೆಲ್ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಲಾಗಿತ್ತು.

ದಿಶಾ ಪಟಾನಿ ಅವರ ವೈಯಕ್ತಿಕ ಜೀವನದ ಬಗ್ಗೆ ವದಂತಿಗಳಿಂದ ಇಂಟರ್ನೆಟ್ ಅಬ್ಬರಿಸುತ್ತಿರುವುದು ಇದೇ ಮೊದಲಲ್ಲ. ಟೈಗರ್ ಶ್ರಾಫ್ ಜೊತೆಗಂತೂ ನಟಿಯ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. 

ಟೈಗರ್ ಜೊತೆಗಿನ ಬ್ರೇಕಪ್ ಕೂಡಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಎಲ್ಲದರ ನಡುವೆ ಇಬ್ಬರೂ ಪ್ಯಾಚಪ್ ಆಗಿದ್ದಾರೆ, ಅಕ್ಷಯ್ ಕುಮಾರ್ ಅವರ ಮನೆಯ ಗಾರ್ಡನ್‌ನಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.

ಅದೇನೇ ಇದ್ದರೂ ಪಿಡಿಯನ್ನು ಸ್ವತಃ ದಿಶಾ ಪಟಾಣಿಯೇ ಡಿಕೋಡ್ ಮಾಡಬೇಕು. ಇದು ಬಾಯ್‌ಫ್ರೆಂಡ್ ಹೆಸರೋ ಅಥವಾ ತಮ್ಮದೇ ಹೆಸರನ್ನು ಹಿಂದು ಮುಂದಾಗಿಸಿ ಟ್ಯಾಟೂ ಹಾಕಿಸಿಕೊಂಡಿರುವುದೋ ಆಕೆಯೇ ಹೇಳಬೇಕು. 

Latest Videos

click me!