Siddhant Chaturvedi ಜೊತೆ Amitabh ಮೊಮ್ಮಗಳು ಡೇಟಿಂಗ್?

Published : Apr 21, 2022, 05:10 PM ISTUpdated : Apr 21, 2022, 05:11 PM IST

ಅಮಿತಾಬ್‌ ಬಚ್ಚನ್‌ (Amitabh Bachchan) ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ನಟ ಸಿದ್ಧಾಂತ್ ಚತುರ್ವೇದಿ(Siddhant Chaturvedi0 ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್‌ ಅನುಮಾನ ಪಡುತ್ತಾರೆ. ಅಷ್ಟಕ್ಕೂ ಈ ರೂಮರ್‌ ಹುಟ್ಟಲು ಕಾರಣವೇನು ಗೊತ್ತಾ?  

PREV
17
 Siddhant Chaturvedi ಜೊತೆ  Amitabh ಮೊಮ್ಮಗಳು ಡೇಟಿಂಗ್?

ನಟ ಸಿದ್ಧಾಂತ್ ಚತುರ್ವೇದಿ ಮತ್ತು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಅಭಿಮಾನಿಗಳು ಅವರು ಪರಸ್ಪರ ಡೇಟಿಂಗ್ ಮಾಡುವ ಬಗ್ಗೆ ಊಹಾಪೋಹಗಳನ್ನು ಪ್ರಾರಂಭಿಸಿದ್ದಾರೆ.

27

ಈ ಊಹಾಪೋಹಗಳು ಇತ್ತೀಚೆಗೆ ಗಲ್ಲಿ ಬಾಯ್ ನಟ ಸಿದ್ಧಾಂತ್ ಚತುರ್ವೇದಿ ಅವರ ಇನ್‌ಸ್ಟಾಗ್ರಾಮ್  ಪೋಸ್ಟ್‌ಗೆ ನವ್ಯಾ ಅವರು ಮಾಡಿದ ಕಾಮೆಂಟ್‌ಗಳನ್ನು ಆಧರಿಸಿವೆ.

37

ಗೆಹೆರಾಯಿಯಾ ಚಿತ್ರದ ನಂತರ ಸಿದ್ಧಾಂತ್ ಚತುರ್ವೇದಿ ಫುಲ್‌ ಫೇಮಸ್‌ ಆಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಕೆಲವು ಫೋಟೋಗಳನ್ನು ಮತ್ತು ಅವರ ಪ್ರವಾಸದ ವೀಡಿಯೊವನ್ನು ಸಹ ಬಿಟ್ಟಿದ್ದಾರೆ. 

47

ಫೋಟೋದಲ್ಲಿ ಸಿದ್ಧಾಂತ್ ಅವರು ಗೋಲ್ಡನ್ ಅವರ್‌ನಲ್ಲಿ ಬೆಟ್ಟದ ತುದಿಯಲ್ಲಿ ಬೆಂಚಿನ ಮೇಲೆ ಕುಳಿತಿರುವುದನ್ನು ಕಾಣಬಹುದು. ನಟನ ಈ ಫೋಟೋ ನವ್ಯಾ ನವೇಲಿ ನಂದಾ ಅವರ ಗಮನ ಸೆಳೆದಿದೆ. ನವ್ಯಾ  ಅವರು ಸಿದ್ಧಾಂತ್ ಚತುರ್ವೇದಿ ಅವರ ಫೋಟೋಗೆ  ಸೂರ್ಯನ ಎಮೋಜಿಯನ್ನು ಕಾಮೆಂಟ್‌ ಸೆಕ್ಷನ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

57

ನವ್ಯಾ ನವೇಲಿ ನಂದಾ  ಕಾಮೆಂಟ್‌ನೊಂದಿಗೆ, ಈ  ಇಬ್ಬರು ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ ಎಂದು ಅಭಿಮಾನಿಗಳು ಊಹಿಸಲು ಪ್ರಾರಂಭಿಸಿದರು. ಸಿದ್ಧಾಂತ್ ಚತುರ್ವೇದಿ ಅವರ ಫೋಟೋಗೆ ನವ್ಯಾ ನವೇಲಿ ನಂದಾ ಅವರ ಕಾಮೆಂಟ್‌ಗೆ ಅಭಿಮಾನಿಯೊಬ್ಬರು, 'ನೀವಿಬ್ಬರು ಡೇಟಿಂಗ್ ಮಾಡುತ್ತಿದ್ದೀರಿ ಎಂದು ನಮಗೆ ತಿಳಿದಿದೆ' ಎಂದು ಬರೆದಿದ್ದಾರೆ. 'ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ' ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. 

67

ಅದಕ್ಕೂ ಮೊದಲು  ಬುಧವಾರ, ನವ್ಯಾ ನವೇಲಿ ನಂದಾ ಅವರು ಪರ್ವತ ವಿಹಾರದ  ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಆ ಫೋಟೋಗೆ ನವ್ಯಾ  ಅವರು ಸಿದ್ಧಾಂತ್ ಅವರ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಲು ಬಳಸಿದ ಅದೇ ಸ್ಮೈಲಿಯನ್ನು ಬಳಸಿಕೊಂಡು ಅವರು 'ಫೋಟೋಗ್ರಾಫ್ ಅವರಿಂದ" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 
 

77

ಅಭಿಮಾನಿಗಳು ಸಿದ್ಧಾಂತ್ ಚತುರ್ವೇದಿ ಮತ್ತು ನವ್ಯಾ ನವೇಲಿ ನಂದಾ ಡೇಟಿಂಗ್ ಬಗ್ಗೆ ಈ ಊಹಾಪೋಹಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ಯಾವುದೇ ದೃಢೀಕರಣವಿಲ್ಲ. 

Read more Photos on
click me!

Recommended Stories