ನಿದ್ರೆ ಬರುತ್ತಿಲ್ಲ, ಬಂದರೂ ಬೇಗ ಎದ್ದೇಳಲು ಆಗುತ್ತಿಲ್ಲ:ಸೋನಂ ಕಪೂರ್ ಪ್ರೆಗ್ನೆನ್ಸಿ ದಿನಗಳು!

First Published | Apr 21, 2022, 10:48 AM IST

ಗರ್ಭಾವಸ್ಥೆಯಿಂದ ಆಗುತ್ತಿರುವ ಕಷ್ಟಕರ ಅನುಭವವನ್ನು ಹಂಚಿಕೊಂಡ ನಟಿ ಸೋನಂ ಕಪೂರ್. ಮಾನಸಿಕ ಆರೋಗ್ಯ ಮುಖ್ಯವೆಂದ ನಟಿ. 
 

ಬಾಲಿವುಡ್ ನಟಿ ಸೋನಂ ಕಪೂರ್ (Sonam Kapoor) ಮತ್ತು ಉದ್ಯಮಿ ಆನಂದ್ ಅಹುಜಾ (Anand Ahuja) ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಮ್ಮ ಗರ್ಭಾವಸ್ಥೆಯಲ್ಲಿ ಸೋನಂ ಕಪೂರ್ ಎದುರಿಸುತ್ತಿರುವ ಕಷ್ಟ, ಸುಖಗಳನ್ನು ಖಾಸಗಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ನನ್ನ sleep ಸೈಕಲ್ ಹಾಳಾಗಿದೆ ಎಂದಿದ್ದಾರೆ. 

Tap to resize

'ಪ್ರೆಗ್ನೆನ್ಸಿ ಸಮಯದಲ್ಲಿ ಎದುರಿಸುವ ಕಷ್ಟಗಳ ಬಗ್ಗೆ ಜನರು ಮಾತನಾಡುವುದಿಲ್ಲ ಆದರೆ ಜೀವನ ತುಂಬಾನೇ ಕಷ್ಟ. ನಿಮ್ಮದಿಯಾಗಿ ನಿದ್ದೆ ಮಾಡುವುದಕ್ಕೆ ನನಗೆ ಆಗುತ್ತಿಲ್ಲ' ಎಂದು ವೋಗ್ ಸಂದರ್ಶನದಲ್ಲಿ ಸೋನಂ ಮಾತನಾಡಿದ್ದಾರೆ.
 

'ನಿದ್ರೆ ಬಂದರೆ ಬಾತ್‌ರೂಮ್‌ಗೆ ಹೋಗಬೇಕು ಅನಿಸುತ್ತದೆ. ಈಗೀಗ ನಾನು 10-12 ಗಂಟೆ ನಿದ್ರೆ ಮಾಡುತ್ತಿರುವೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಬ್ಬಿಸುತ್ತಿಲ್ಲ' 

 'ನಾನು early raiser ವ್ಯಕ್ತಿ ಸೂರ್ಯ ಹುಟ್ಟುವ ಸಮಯಕ್ಕೆ ನಾನು ಎದ್ದೇಳುವೆ ಆದರೆ ಈಗ 8.30 ಆದರೂ ಹಾಸಿಗೆ ಬಿಟ್ಟು ಎದ್ದೇಳುವುದಕ್ಕೆ ಆಗುತ್ತಿಲ್ಲ' ಎಂದು ಸೋನಂ ಹೇಳಿಕೊಂಡಿದ್ದಾರೆ. 

'ಪ್ರೆಗ್ನೆನ್ಸಿ ಸಮಯದಲ್ಲಿ ನಾನು ಡಯಟ್‌ ಮಾಡುತ್ತಿಲ್ಲ ಈಗ ಡಯಟ್ ಮಾಡುವುದಕ್ಕಿಂತ ಆರೋಗ್ಯವಾಗಿರುವುದು ಮುಖ್ಯ. ಯೋಗ ಮಾಡುತ್ತಿದ್ದೇನೆ. ನನ್ನೊಳಗೆ ಇನ್ನೊಂದು ಜೀವ ಇರುವುದರಿಂದ ಜೋಪಾನವಾಗಿ ಇರಬೇಕಿದೆ' ಎಂದಿದ್ದಾರೆ ಸೋನಂ.

Latest Videos

click me!