ಮಂಗಳೂರು ಸುಂದರಿ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಪತಿ ಅಶ್ಲೀಲ ಸಿನಿಮಾ ದಂದೆಯಲ್ಲಿ ಸಿಲುಕಿಕೊಂಡ ನಂತರ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿದ್ದು, ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುತ್ತಿಲ್ಲ.
ಜೈಲಿನಿಂದ ರಾಜ್ ಹೊರ ಬಂದ ನಂತರ ಮಾಸ್ಕ್ ಮಾತ್ರವಲ್ಲ ಕಣ್ಣುಗಳನ್ನು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಬಟ್ಟೆಗೆ ಮ್ಯಾಚ್ ಆಗುವಂತ ಕಲರ್‌ನ ಮಾಸ್ಕ್‌ನಲ್ಲಿ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ರಾಜ್ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಆದರೆ ಕೆಲಸದ ಮೇಲೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುತ್ತಿದ್ದಾರೆ, ಹೀಗಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮತ್ತೆ ಏರ್‌ಪೋರ್ಟ್‌ನಲ್ಲಿ ರಾಜ್ ಕುಂದ್ರಾ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಜಾಕೆಟ್, ಮಾಸ್ಕ್ ಧರಿಸಿದ್ದಾರೆ ಈ ಲುಕ್‌ಗೆ ಟ್ರೋಲ್ ಆಗಿದ್ದಾರೆ.
'ರಾಜ್ ಇಷ್ಟೊಂದು ಹಣ ಇದ್ರು ಯಾಕೆ ಸಂಪ್ ಕ್ಲೀನರ್ ರೀತಿ ರೆಡಿಯಾಗುತ್ತಿದ್ದಾರೆ. ನಮ್ ಮನೆ ಕ್ಲೀನರ್ ಇನ್ನೂ ಚೆನ್ನಾಗಿ ಕಾಣಿಸುತ್ತಾನೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಾಜ್ ಫುಲ್ ಮುಖ ಕವರ್ ಮಾಡಿಕೊಂಡು ಬಂದಾಗ ಕ್ಯಾಮೆರಾಗಿ ಫೋಸ್ ಕೊಡುವುದಿಲ್ಲ. ಆದರೆ ಅವರ ಜೊತೆಗೆ ಬಂದಿರುವ ಶಿಲ್ಪಾ ಮತ್ತು ಮಕ್ಕಳು ಪ್ಯಾಪರಾಜಿಗಳ ಮುಂದೆ ಪೋಸ್ ಕೊಡುತ್ತಾರೆ.
ಪತಿ ಈ ರೀತಿ ಮುಖ ಕವರ್ ಮಾಡಿಕೊಂಡು ಬರುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನೆಂದು ನೆಟ್ಟಿಗರು ಕೇಳಿದಾಗ ಶಿಲ್ಪಾ ನಗು ಬರುತ್ತದೆ ಎಂದು ಹೇಳಿದ್ದರು.