RRR ತಯಾರಕರ ಬಗ್ಗೆ Alia Bhatt ಅಸಮಾಧಾನ? SS Rajamouli ಅನ್ನು unfollow ಮಾಡಿದ ನಟಿ?

First Published | Mar 29, 2022, 5:20 PM IST

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಪ್ರಸ್ತುತ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿವಾಡಿ ಚಿತ್ರದಲ್ಲಿನ ಅವರ ಪವರ್‌ಫುಲ್‌ ಅಭಿನಯದ ನಂತರ, ನಟಿ ರಾಜಮೌಳಿ (SS Rajamouli ) ಅವರ ಪ್ರಸ್ತುತ ಸೂಪರ್‌ ಹಿಟ್ ಸಿನಿಮಾ RRR ನೊಂದಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಈಗ ಆಲಿಯಾ ಸಿನಿಮಾ ತಯಾರಕರ ಮೇಲೆ ಅಸಮಾಧಾನಗೊಂಡಿದ್ದಾರೆ ಎಂದು  ವರದಿಯಾಗಿದೆ. 

ವರದಿಗಳ ಪ್ರಕಾರ, ಸೀಮಿತ ಪರದೆಯ ಸಮಯದಿಂದಾಗಿ ಆಲಿಯಾ ಭಟ್ RRR ತಯಾರಕರ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಆಕೆ ಎಸ್ ಎಸ್
ರಾಜಮೌಳಿ ಅವರನ್ನು ಅನ್ ಫಾಲೋ ಸಹ  ಮಾಡಿದ್ದಾರೆ ಎಂದು ವರದಿಯಾಗಿದೆ


.

ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಈ ಚಿತ್ರವು ಭಾರತೀಯ ಚಿತ್ರವೊಂದಕ್ಕೆ ಅತಿದೊಡ್ಡ ಓಪನಿಂಗ್ ಗಳಿಸಿ ಬಾಹುಬಲಿ 2 ರ ದಾಖಲೆಯನ್ನು ಮುರಿದಿದೆ. ಆದಾಗ್ಯೂ, ಆರ್‌ಆರ್‌ಆರ್‌ನ ಫೈನಲ್‌ ಎಡಿಟ್‌ನಲ್ಲಿ  ತನಗೆ ನೀಡಲಾದ ಸೀಮಿತ ಪರದೆಯ ಬಗ್ಗೆ ಆಲಿಯಾ ಅತೃಪ್ತರಾಗಿದ್ದಾರೆ ಎಂದು ವರದಿಯಾಗಿದೆ. 

Tap to resize

ಮಾಧ್ಯಮ ವರದಿಗಳ ಪ್ರಕಾರ, ಹಿಸ್ಟೋರಿಕಲ್‌ ಡ್ರಾಮಾದಲ್ಲಿ ತನ್ನ ಸಣ್ಣ ಪಾತ್ರದ ಬಗ್ಗೆ ಅತೃಪ್ತಿ ತೋರುತ್ತಿರುವ ಆಲಿಯಾ ಭಟ್ ತನ್ನ Instagram ಪೇಜ್‌ನಿಂದ  ಚಿತ್ರಕ್ಕೆ ಸಂಬಂಧಿಸಿದ ಕೆಲವು ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ. ಅದರ ಜೊತೆಗೆ ನಟಿ ಎಸ್‌ಎಸ್ ರಾಜಮೌಳಿ ಅವರನ್ನು Instagram ನಲ್ಲಿ ಅನ್ ಫಾಲೋ ಸಹ  ಮಾಡಿದ್ದಾರೆ ಎಂಬ ಊಹಾಪೋಹವೂ ಇದೆ.

RRR ಸಿನಿಮಾಗೆ ಮೊದಲು ಪ್ರಚಾರ ಮಾಡುತ್ತಿದ್ದ ಆಲಿಯಾ, ಒಂದು ಪ್ರಮುಖ ಈವೆಂಟ್ ಹೊರತು ಪಡಿಸಿ , ಚಿತ್ರ ಪ್ರಚಾರದ ಎರಡನೇ ಹಂತದ ಉದ್ದಕ್ಕೂ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಜನರು ಗಮನಿಸಿದ್ದಾರೆ.

ತನ್ನ ಪಾತ್ರದ ಬಗ್ಗೆ ಅಲಿಯಾ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅಲಿಯಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ, ಅಲಿಯಾಗಿಂತ ಮತ್ತೋರ್ವ ನಾಯಕಿ ಒಲಿವಿಯಾ ಮೋರಿಸ್ ಅವರ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ.

ಈ ನಡುವೆ, RRR ಬಾಕ್ಸ್ ಆಫೀಸ್‌ ಅನ್ನು ಧೂಳಿಪಟ ಮಾಡಿದೆ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಾಯಕರಾಗಿ ನಟಿಸಿದ ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ವಿಶ್ವಾದ್ಯಂತ ರೂ 500 ಕೋಟಿಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ದಾಖಲಿಸಿದೆ. 

Latest Videos

click me!