Deepika Padukoneಗೆ TIME100 Impact ಪ್ರಶಸ್ತಿ Sabyasachi ಸೀರೆಯಲ್ಲಿ ಮಿಂಚಿದ ದಿವಾ!

Published : Mar 29, 2022, 05:16 PM IST

ತನ್ನ ಅತ್ಯುತ್ತಮ ಅಭಿನಯ ಮತ್ತು ಸೌಂದರ್ಯದಿಂದ ಜನರ ಮನ ಗೆದ್ದಿರುವ ದೀಪಿಕಾ ಪಡುಕೋಣೆ (Deepika Padukone)  ನಟಿಗೆ ದೊಡ್ಡ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ಈ ಮೂಲಕ ಅವರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಮಾನಸಿಕ  ಆರೋಗ್ಯ ಕ್ಷೇತ್ರದಲ್ಲಿ ದೀಪಿಕಾ ನೀಡಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಟೈಮ್ 100 ಇಂಪ್ಯಾಕ್ಟ್ ಅವಾರ್ಡ್ 100 (TIME100 Impact Award) ಸ್ವೀಕರಿಸಲು ಹೋಗುವ ಸಮಯದ ದೀಪಿಕಾರ ವಿಡಿಯೋ ವೈರಲ್  ಆಗುತ್ತಿದೆ.

PREV
18
Deepika Padukoneಗೆ TIME100 Impact ಪ್ರಶಸ್ತಿ Sabyasachi ಸೀರೆಯಲ್ಲಿ ಮಿಂಚಿದ ದಿವಾ!

ಹಿಂದೆ ದೀಪಿಕಾ ಪಡುಕೋಣೆ ಖಿನ್ನತೆಗೆ ಬಲಿಯಾಗಿದ್ದರು. ಆದರೆ ಅದನ್ನು ನಿಭಾಯಿಸಿದ ನಂತರ ಅವಳು ಅದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು ಮತ್ತು . ಅವರು ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಹಾಗೂ ಈ ಬಗ್ಗೆ ಜನರಿಗೆ ಅರಿವು ಮೂಡಿಸಿದರು. 

28

ಈ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಅವರಿಗೆ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯ ಫೋಟೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಇದು ಉತ್ತಮ ಆರಂಭ ಎಂದು ನಾನು ಭಾವಿಸುತ್ತೇನೆ' ಎಂದು ನಟಿ ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ.

38

ಇದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ   ದೀಪಿಕಾ ಪಡುಕೋಣೆ ದುಬೈನಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅವರು ಕಾರಿನಲ್ಲಿ ಕುಳಿತಿದ್ದಾರೆ. 

48

ಈ ಸಮಯದಲ್ಲಿ, ನೀವು ನರ್ವಸ್ ಆಗಿದ್ದೀರಾ ಎಂದು ಅವರನ್ನು ಕೇಳಿದಾಗ. ಅದಕ್ಕೆ ದೀಪಿಕಾ ಅವರು ನರ್ವಸ್ ಆಗಿದ್ದೇನೆ ಎಂದು ಹೇಳಿದ್ದಾರೆ.  ನೆಚ್ಚಿನ ನಟಿಗೆ  ಪ್ರಶಸ್ತಿ ಬಂದ ಕಾರಣಕ್ಕಾಗಿ  ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ ಹಾಗೂ  ನಟಿಯನ್ನು ತುಂಬಾ ಅಭಿನಂದಿಸಿದ್ದಾರೆ.

58

ಮೊದಲ ಬಾರಿಗೆ, TIME 100 ಇಂಪ್ಯಾಕ್ಟ್ ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟ ಜನರ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಹೆಸರು ಸೇರಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

68

2015 ರಲ್ಲಿ, ದೀಪಿಕಾ ತಾನು ದೀರ್ಘಕಾಲ ಹೋರಾಡಿದ ತನ್ನ ಜೀವನದ ರಹಸ್ಯವನ್ನು  ಬಹಿರಂಗ ಪಡಿಸಿದ್ದರು. ಅವರು ಖಿನ್ನತೆಯೊಂದಿಗಿನ ಹೋರಾಟದ ಬಗ್ಗೆ ಜನರಿಗೆ ತಿಳಿಸಿದರು. ಅಂದಿನಿಂದ ಅವರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

78

 ಇದೇ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಈ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿತ್ತು. ದೀಪಿಕಾ 2015 ರಲ್ಲಿ ಲೈವ್ ಲವ್‌ಲಾಫ್ ಫೌಂಡೇಶನ್ ಅನ್ನು ಸ್ಥಾಪಿಸಿದರು ಮತ್ತು ಈ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

88

ನಟಿ, ನಿರ್ಮಾಪಕಿ ಮತ್ತು ಲೋಕೋಪಕಾರಿ ದೀಪಿಕಾ ಪಡುಕೋಣೆ  Dubaiನ  Museum of the Futureನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವ ಸಮಯದಲ್ಲಿ  ಸವ್ಯಸಾಚಿ ಸೀರೆಯನ್ನು ಆರಿಸಿಕೊಂಡಿದ್ದರು ಮತ್ತು ಸ್ಟೈಲಿಸ್ಟ್‌ ಶಲೀನ ನಾಥನಿ ನಟಿಯನ್ನು ಇನ್ನಷ್ಟು ಚೆಂದಗೊಳಿಸಿದ್ದರು.

Read more Photos on
click me!

Recommended Stories