ಸಿದ್ಧಾರ್ಥ್ ಜೊತೆ ಡೇಟಿಂಗ್: ಅದಿತಿ ರಾವ್‌ ಹೈದರಿ ಅನಿರೀಕ್ಷಿತ ಪ್ರತಿಕ್ರಿಯೆ; ನಟಿ ಹೇಳಿದ್ದಿಷ್ಟು

Published : Feb 18, 2023, 04:27 PM IST

ಅದಿತಿ ರಾವ್ ಹೈದರಿ (Aditi Rao Hydari) ಮತ್ತು ನಟ ಸಿದ್ಧಾರ್ಥ್ (Siddharth) ಬಗ್ಗೆ ಕೆಲ ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಗಳು ಹರಿದಾಡುತ್ತಿವೆ. ಆದಾಗ್ಯೂ, ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ, ನಟಿ ವದಂತಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.  ಆದರೆ ಅವರ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಅಷ್ಟಕ್ಕೂ ಅದಿತಿ  ಹೇಳಿದ್ದೇನು  

PREV
18
ಸಿದ್ಧಾರ್ಥ್ ಜೊತೆ ಡೇಟಿಂಗ್:  ಅದಿತಿ ರಾವ್‌ ಹೈದರಿ ಅನಿರೀಕ್ಷಿತ ಪ್ರತಿಕ್ರಿಯೆ; ನಟಿ ಹೇಳಿದ್ದಿಷ್ಟು

ಅದಿತಿ ಅವರ ತಾಜ್ ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಈ ಈವೆಂಟ್‌ನಲ್ಲಿನ ನಟ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್‌ ವದಂತಿ ಬಗ್ಗೆ ಪ್ರತಿಕ್ರಿಯಿಸಲು ಅದಿತಿ ರಾವ್‌ ಹೈದರಿ ಅವರನ್ನು ಕೇಳಲಾಯಿತು.

28

ಆದರೆ ಅದಿತಿ ಅವರು ಪ್ರಶ್ನೆಗೆ  'ನನಗೆ ಈಗ  ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ' ಎಂದು ಹೇಳಿ ಅಲ್ಲಿಂದ ಹೊರಟು ಹೋದರು.
 

38

ಕಳೆದ ತಿಂಗಳು ತೆಲುಗು ನಟ ಶರ್ವಾನಂದ್ ಅವರ ನಿಶ್ಚಿತಾರ್ಥದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಸಾರ್ವಜನಿಕವಾಗಿ ಕಾಣಿಸಿಕೊಂಡರು ಮತ್ತು ಫೋಟೋಗಳಿಗೆ ಪೋಸ್ ನೀಡಿದ್ದರು. 

48

ಆ ಫೋಟೋಗಳು ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದವು ಮತ್ತು ಶೀಘ್ರದಲ್ಲೇ ಅವರು ತಮ್ಮ ರಿಲೆಷನ್‌ಶಿಪ್‌  ಅಧಿಕೃತಗೊಳಿಸುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.

58

ಸಿದ್ಧಾರ್ಥ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸೆಲ್ಫಿಯನ್ನು ಪೋಸ್ಟ್‌ ಮಾಡಿದ್ದರು. ಆ ಫೋಟೋದಲ್ಲಿ ಅದಿತಿ ಈ ಹಿಂದೆ ಧರಿಸಿದ್ದ ಟೀ ಶರ್ಟ್ ಅನ್ನೇ ಧರಿಸಿದ್ದರು. 
 

68

ಜೈ ಭೂಪತಿಯವರ ಮಹಾ ಸಮುದ್ರಂ ಚಿತ್ರದ ಸೆಟ್‌ನಲ್ಲಿ  ಈ ಜೋಡಿ ನಡುವೆ  ಪ್ರೀತಿ ಆರಂಭವಾಯಿತು ಎನ್ನಲಾಗಿದೆ. ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಿಟ್ ಆಗಿತ್ತು. 

78

ಈ ಚಿತ್ರದ ಸೆಟ್‌ನಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಹತ್ತಿರವಾಗಿದ್ದರು ಎನ್ನಲಾಗಿದೆ. ಮತ್ತು ಇವರ ಸಂಬಂಧದ ವರದಿಗಳು ಪ್ರಕಟವಾಗಲು ಶುರವಾಯಿತು. ಆದರೆ, ಈ ಜೋಡಿ ತಮ್ಮ ಸಂಬಂಧವನ್ನು ಇನ್ನೂ ಖಚಿತಪಡಿಸಿಲ್ಲ.

88

ಸಿದ್ಧಾರ್ಥ್ ಮುಂದೆ ಕಮಲ್ ಹಾಸನ್ ಅವರ ಇಂಡಿಯನ್ 2 ನಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಮೂಕಿ ಚಿತ್ರವಾದ ಗಾಂಧಿ ಟಾಕ್ಸ್ ನಲ್ಲಿ ಅದಿತಿ ಕಾಣಿಸಿಕೊಳ್ಳಲಿದ್ದಾರೆ. ತಾಜ್: ಡಿವೈಡೆಡ್ ಬೈ ಬ್ಲಡ್ ಎಂಬ ವೆಬ್ ಸೀರೀಸಡ್‌ನಲ್ಲಿ ಕೂಡ ಅದಿತಿ ಕೆಲಸ ಮಾಡಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories